ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2018ರ ಮಹಿಳಾ ವಿಶ್ವಕಪ್ ಟಿ20ಗೆ ವೆಸ್ಟ್ ವಿಂಡೀಸ್‌ ಆತಿಥ್ಯ

By Manjunatha
West Indies to host ICC women's T20 world cup

ದುಬೈ, ಜನವರಿ 23: ವೆಸ್ಟ್ ಇಂಡೀಸ್ ಮೊದಲ ಬಾರಿಗೆ ಒಂಟಿಯಾಗಿ ಮಹಿಳಾ ಟಿ20 ವಿಶ್ವಕಪ್ ಆಯೋಜಿಸುತ್ತಿದೆ.

ವೆಸ್ಟ್ ಇಂಡೀಸ್‌ನ ಆಂಟಿಗುವಾ, ಬರ್ಬುಡಾ, ಗಯಾನಾ, ಸೇಂಟ್ ಲೂಸಿಯಾದಲ್ಲಿ ಮಹಿಳಾ ಟಿ20 ಪಂದ್ಯಗಳು ನಡೆಯಲಿದ್ದು, ವಿಶ್ವಕಪ್ ಪಂದ್ಯಾವಳಿಯು ನವೆಂಬರ್ 9 ರಿಂದ ಪ್ರಾರಂಭಗೊಂಡು 24ರ ವರೆಗೆ ನಡೆಯಲಿದೆ.

ಲೀಗ್ ಹಂತದ ಪಂದ್ಯಗಳು ಗಯಾನಾದ ನ್ಯಾಷನಲ್ ಕ್ರೀಡಾಂಗಣ ಹಾಗೂ ಸೇಂಟ್ ಲೂಸಿಯಾದ ಡರೇನ್ ಸಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಆಂಟಿಗುವಾದ ಸರ್‌ ವೀವಿಯನ್ ರಿಚರ್ಡ್ಸ್ ಕ್ರೀಡಾಂಗಣ ಹಾಗೂ ಬಾರ್ಬುಡಾದ ಕ್ರೀಡಾಂಗಣದಲ್ಲಿ ನಡೆಯಲಿದೆ.

ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ದೇಶಗಳು ಈಗಾಗಲೇ ಅರ್ಹತೆ ಪಡೆದುಕೊಂಡಿದ್ದು, ಇನ್ನುಳಿದ ಎರಡು ಆಡುವ ತಂಡದ ಸ್ಥಾನಕ್ಕಾಗಿ ಬಾಂಗ್ಲಾದೇಶ, ನ್ಯೂ ಗಿನಿ, ಪೋಲೆಂಡ್, ಸ್ಕಾಟ್‌ಲೆಂಡ್, ಯುನೈಟೆಡ್ ಅರಬ್ ಎಮರೈಟ್ಸ್, ಥೈಲೆಂಡ್, ಉಗಾಂಡಾ ದೇಶಗಳು ಸೆಣೆಸಲಿವೆ. ಅರ್ಹತಾ ಸುತ್ತಿನ ಪಂದ್ಯಗಳು ನೆದರ್‌ಲೆಂಡ್‌ನಲ್ಲಿ ಜುಲೈ 3ರಿಂದ ಪ್ರಾರಂಭವಾಗಲಿವೆ.

ಕಳೆದ ಬಾರಿ ಭಾರತದಲ್ಲಿ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ವಿಶ್ವಕಪ್ ಜಯಸಿರುವ ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡ ಈ ಬಾರಿ ತವರಿನ ಪ್ರೇಕ್ಷಕರೆದುರು ಅದೇ ಪ್ರದರ್ಶನವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ.

ಕ್ರಿಕೆಟ್‌ ಬಗ್ಗೆ ಅಪಾರ ಪ್ರೀತಿ ಹೊಂದಿರುವ ವೆಸ್ಟ್ ಇಂಡೀಸ್ ಜನ, ದೇಶದಲ್ಲಿ ನಡೆಯುತ್ತಿರುವ ಮೊದಲ ಮಹಿಳಾ ಟಿ20 ವಿಶ್ವಕಪ್‌ ಅನ್ನು ಯಶಸ್ವಿಗೊಳಿಸಲು, ರಂಜಿನೀಯ ಗೊಳಿಸಲು ಕಾತರರಾಗಿದ್ದಾರೆ.

Story first published: Tuesday, January 23, 2018, 15:25 [IST]
Other articles published on Jan 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X