For Quick Alerts
ALLOW NOTIFICATIONS  
For Daily Alerts
 

ರಿಷಬ್ ಪಂತ್ ಐಪಿಎಲ್ ರನ್ನಿಗೂ ಟಿ20ಐ ಸ್ಕೋರಿಗೂ ಅಜಗಜಾಂತರ ವ್ಯತ್ಯಾಸ!

ಪಂತ್ ಎದುರಿಸುತ್ತಿದ್ದಾರೆ ಭಯಂಕರ ಆರೋಪ..? | Oneindia Kannada
West Indies Tour: Chance for Rishabh Pant to improve mediocre T20I record

ಮುಂಬೈ, ಜುಲೈ 31: ಟೀಮ್ ಇಂಡಿಯಾದ ಎಂದಿನ ವಿಕೆಟ್ ಕೀಪರ್, ಅನಧಿಕೃತ ಮೆಂಟರ್ ಎಂಎಸ್ ಧೋನಿ ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಧೋನಿಯ ಅಲಭ್ಯತೆ ಯುವ ಬ್ಯಾಟ್ಸ್ಮನ್ ಕಮ್ ಕೀಪರ್ ರಿಷಬ್ ಪಂತ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಅವಕಾಶವನ್ನೊದಗಿಸಿದೆ.

ವಿಂಡೀಸ್ ಪ್ರವಾಸ ಸರಣಿಗೆ ಬದಲಾಗಿ ತಾನು 2 ತಿಂಗಳ ಕಾಲ ಭಾರತೀಯ ಸೇನೆಯ ಸೇವೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಮಾಜಿ ನಾಯಕ ಧೋನಿ ತಿಳಿಸಿದ್ದರು. ಹೀಗಾಗಿ ಪ್ರವಾಸದಲ್ಲಿ ಏಕದಿನ ಮತ್ತು ಟಿ20 ಎರಡರಲ್ಲೂ ಕೀಪಿಂಗ್ ಜವಾಬ್ದಾರಿ ಪಂತ್ ಹೊರಲಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಪಂತ್‌ಗೆ ತನ್ನ ಟಿ20ಐ ಸಾಧಾರಣ ರನ್ ದಾಖಲೆಯನ್ನು ಸುಧಾರಿಸಿಕೊಳ್ಳಲೂ ಅವಕಾಶವಿದೆ. ಯಾಕೆಂದರೆ ಸದ್ಯ ಪಂತ್‌ ಅವರ ಐಪಿಎಲ್‌ ರನ್ ಸಾಧನೆಗೂ ಟಿ20ಐ ರನ್ ದಾಖಲೆಗೂ ಅಜಗಜಾಂತರ ವ್ಯತ್ಯಾಸವಿದೆ!

ಐಪಿಎಲ್‌ನಲ್ಲಿ ಹೀರೋ

ಐಪಿಎಲ್‌ನಲ್ಲಿ ಹೀರೋ

ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಭರ್ಜರಿ ಬ್ಯಾಟ್ ಬೀಸುವ ರಿಷಬ್ ಪಂತ್, ಅಂತಾರಾಷ್ಟ್ರೀಯ ಟಿ20ಯಲ್ಲಿ ತೀರಾ ಸಾಧಾರಣ ರನ್ ಸಾಧನೆ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಪಂತ್ ಹೀರೋ ಅನ್ನುವುದಕ್ಕೆ ರನ್ ದಾಖಲೆ ಸಾಕ್ಷಿ ಒದಗಿಸಿದರೆ, ಟಿ20ಐನಲ್ಲಿ ಪಂತ್ ಗಳಿಸಿರುವ ರನ್ ಏನೇನೂ ಇಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಂತ್ ಹೊಸಬರೆ. ಹೀಗಾಗಿ ಐಪಿಎಲ್‌ಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ಪಂತ್‌ ಅವರನ್ನು ಹೋಲಿಸೋದು ಸರಿಯಲ್ಲ. ಆದರೆ ಐಪಿಎಲ್‌ ಮತ್ತು ಟಿ20ಐ ರನ್ ಸಾಧನೆಗಿರುವ ದೊಡ್ಡ ಅಂತರವನ್ನು ಕಿರಿದುಗೊಳಿಸಲು ಪಂತ್‌ಗೆ ವಿಂಡೀಸ್ ಸರಣಿಯಲ್ಲಿ ಅವಕಾಶವಿದೆ.

ಅಜಗಜಾಂತರ ವ್ಯತ್ಯಾಸ

ಅಜಗಜಾಂತರ ವ್ಯತ್ಯಾಸ

ಐಪಿಎಲ್‌ನಲ್ಲಿ ಒಟ್ಟು 54 ಪಂದ್ಯಗಳನ್ನಾಡಿರುವ ಪಂತ್ 36.16ರ ಸರಾಸರಿಯಂತೆ 1736 ರನ್ ಗಳಿಸಿದ್ದಾರೆ. 128 ಇನ್ನಿಂಗ್ಸ್ ಅತ್ಯಧಿಕ ರನ್ ಸಾಧನೆ ಹೊಂದಿರುವ ಪಂತ್ 1 ಶತಕವೂ ಸೇರಿ 11 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ಪಂದ್ಯಗಳಲ್ಲಿ 19.41ರ ಸರಾಸರಿಯಂತೆ ಕೇವಲ 233 ರನ್ ಕಲೆ ಹಾಕಿದ್ದಾರೆ. 58 ರನ್ ಇನ್ನಿಂಗ್ಸ್ ಒಂದರಲ್ಲಿ ರಿಷಬ್ ಬಾರಿಸಿರುವ ಅತ್ಯಧಿಕ ರನ್. ಹೀಗಾಗಿ ಶತಕವಿಲ್ಲ, 1 ಅರ್ಧ ಶತಕದ ದಾಖಲೆ ಮಾತ್ರ ರಿಷಬ್ ಹೊಂದಿದ್ದಾರೆ.

ಸುಧಾರಣೆಗೆ ಅವಕಾಶ

ಸುಧಾರಣೆಗೆ ಅವಕಾಶ

ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಬಿಸಿಸಿಐ ತಂಡಗಳನ್ನು ಪ್ರಕಟಿಸುವ ಮುನ್ನವೇ ಧೋನಿ, ತಾನು ಆರ್ಮಿ ಸೇವೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ತಿಳಿಸಲಿದ್ದರೆ, ಧೋನಿಯನ್ನು ವಿಂಡೀಸ್ ಸರಣಿಯಲ್ಲಿ ಆಡಿಸಲೇಬೇಕಾದ ಇಕ್ಕಟ್ಟಿಗೆ ಬಿಸಿಸಿಐ ಸಿಲುಕುತ್ತಿತ್ತು. ಅಂತೂ ವಿಂಡೀಸ್ ಸರಣಿಯಲ್ಲಿ ಒಟ್ಟು 3 ಟಿ20 ಪಂದ್ಯಗಳಿವೆ. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರೆ ಪಂತ್‌, ಟಿ20ಐ ಸಾಧಾರಣ ರನ್‌ ದಾಖಲೆಯನ್ನು ಸುಧಾರಿಸಿಕೊಳ್ಳಬಹುದು.

ರಿಷಬ್ ವರ್ಷಾವಾರು ಸಾಧನೆ

ರಿಷಬ್ ವರ್ಷಾವಾರು ಸಾಧನೆ

ಟಿ20ಗೆ ಸಂಬಂಧಿಸಿ ರಿಷಬ್ ಪಂತ್ ಸ್ಟ್ರೈಕ್‌ರೇಟ್ ಸುಧಾರಿಸುತ್ತಿದೆ. 2017, 18 ಮತ್ತು 19ರಲ್ಲಿ ಪಂತ್ ಕ್ರಮವಾಗಿ 113.15, 118.75 ಮತ್ತು 124.59 ಸ್ಟ್ರೈಕ್‌ರೇಟ್ ಹೊಂದಿದ್ದರು. ಆದರೆ ರನ್ ಸಾಧನೆ ತೃಪ್ತಿ ನೀಡುವಂತಿಲ್ಲ. 2017ರಲ್ಲಿ 2 ಇನ್ನಿಂಗ್ಸ್‌ಗಳನ್ನು ಆಡಿರುವ ಪಂತ್ 43ರ ಸರಾಸರಿಯಲ್ಲಿ 43 ರನ್ ಬಾರಿಸಿದ್ದರು. 2018ರಲ್ಲಿ 7 ಇನ್ನಿಂಗ್ಸ್‌ಗಳಲ್ಲಿ 16.28ರ ಸರಾಸರಿಯಲ್ಲಿ 114 ರನ್ ಗಳಿಸಿದ್ದರು. 2019ರಲ್ಲಿ 5 ಇನ್ನಿಂಗ್ಸ್‌ಗಳಲ್ಲಿ 19ರ ಸರಾಸರಿಯಲ್ಲಿ 76 ರನ್ ಸಾಧನೆ ಹೊಂದಿದ್ದರು.

Story first published: Wednesday, July 31, 2019, 17:23 [IST]
Other articles published on Jul 31, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+