ಕ್ರಿಕೆಟ್: ಭಾರತದಲ್ಲಿ ಅಭ್ಯಾಸ ನಡೆಸಲು ವಿಂಡೀಸ್ ತಂಡಕ್ಕೆ ಜಾಗವೇ ಇಲ್ಲ!

ನವದೆಹಲಿ, ಸೆಪ್ಟೆಂಬರ್ 25: ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲು ವೆಸ್ಟ್ ಇಂಡೀಸ್ ತಂಡ ಭಾರತದ ಪ್ರವಾಸ ಕೈಗೊಳ್ಳಲಿದೆ.
ಭಾರತದ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ಮುಂಚೆಯೇ ಬಂದು ಅಭ್ಯಾಸ ನಡೆಸಬೇಕೆಂಬ ವೆಸ್ಟ್ ಇಂಡೀಸ್ ತಂಡದ ಬಯಕೆಗೆ ಬಿಸಿಸಿಐ ಮಾಡಿದ ಯಡವಟ್ಟು ತಣ್ಣೀರೆರಚಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತದಲ್ಲಿ ಸರಿಯಾದ ಸೌಲಭ್ಯ ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿದ ಕಾರಣ, ವೆಸ್ಟ್ ಇಂಡೀಸ್ ತನ್ನ ಪ್ರಯಾಣದ ದಿಕ್ಕನ್ನು ದುಬೈನತ್ತ ತಿರುಗಿಸಿದೆ.
ಏಷ್ಯಾ ಕಪ್ ಟೂರ್ನಿ ನಡೆಯುತ್ತಿರುವ ದುಬೈ ಕ್ರೀಡಾಂಗಣದ ಸಮೀಪದಲ್ಲಿಯೇ ಇರುವ ಐಸಿಸಿ ಗ್ಲೋಬಲ್ ಅಕಾಡೆಮಿಯಲ್ಲಿ ವೆಸ್ಟ್ ಇಂಡೀಸ್ ತಂಡ ಅಭ್ಯಾಸ ನಡೆಸುತ್ತಿದೆ.
ಅಕ್ಟೋಬರ್ 4ರಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ನವೆಂಬರ್ 11ರವರೆಗೂ ವೆಸ್ಟ್ ಇಂಡೀಸ್ ತಂಡ ಭಾರತದಲ್ಲಿ ಆಡಲಿದೆ.

ಭಾರತದಲ್ಲಿ ಕ್ರೀಡಾಂಗಣವಿಲ್ಲ
ಭಾರತದ ಪರಿಸ್ಥಿತಿಗೆ ಹೊಂದಿಕೊಳ್ಳುವ ಉದ್ದೇಶದಿಂದ ವೆಸ್ಟ್ ಇಂಡೀಸ್ ಸೆ.10ರಂದೇ ಭಾರತಕ್ಕೆ ಬರಲು ಉದ್ದೇಶಿಸಿತ್ತು. ಆದರೆ, ಭಾರತದಲ್ಲಿ ವಿಜಯ್ ಹಜಾರೆ ಟ್ರೋಫಿ ಟೂರ್ನಿ ನಡೆಯುತ್ತಿದ್ದು, ಅದರಲ್ಲಿ 37 ತಂಡಗಳು ಭಾಗವಹಿಸಿವೆ. ಸತತ ಪಂದ್ಯಗಳು ಇರುವುದರಿಂದ ಬಹುತೇಕ ಮೈದಾನಗಳು ಭರ್ತಿಯಾಗಿವೆ. ಇದರಿಂದ ವೆಸ್ಟ್ ಇಂಡೀಸ್ ತಂಡದ ಅಭ್ಯಾಸಕ್ಕೆ ಕ್ರೀಡಾಂಗಣ ಒದಗಿಸಿಕೊಡಲು ಸಾಧ್ಯವಾಗುತ್ತಿಲ್ಲ ಎಂದು ಬಿಸಿಸಿಐ ತಿಳಿಸಿತ್ತು.

ಅಭ್ಯಾಸ ಪಂದ್ಯಕ್ಕೆ ಕರುಣ್ ನಾಯಕ
ಭಾರತಕ್ಕೆ ಪರ್ಯಾಯವಾಗಿ ಯುಎಇಯಲ್ಲಿ ಅಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗಿದ್ದು, ವಿಂಡೀಸ್ ತಂಡ ನಿರಾಶೆಯಿಂದಲೇ ಅಲ್ಲಿ ಅಭ್ಯಾಸ ನಡೆಸುತ್ತಿದೆ. ಸೆ.26ರಂದು ಕೆರೆಬಿಯನ್ ಪಡೆ ಭಾರತಕ್ಕೆ ಬರಲಿದೆ. ಸೆ.29,30ರಂದು ರಾಜ್‌ಕೋಟ್‌ನಲ್ಲಿ ಕರುಣ್ ನಾಯರ್ ನಾಯಕತ್ವದ ಅಧ್ಯಕ್ಷರ ಇಲೆವೆನ್ ತಂಡದ ಎದುರು ಎರಡು ದಿನಗಳ ಅಭ್ಯಾಸ ಪಂದ್ಯ ಆಡಲಿದೆ.

ಕೋಚ್ ರಾಜೀನಾಮೆ
ಭಾರತ ಪ್ರವಾಸ ಕೈಗೊಂಡಿರುವ ಸಂದರ್ಭದಲ್ಲಿಯೇ ವೆಸ್ಟ್ ಇಂಡೀಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ತಂಡದ ಮುಖ್ಯ ಕೋಚ್ ಸ್ಟುವರ್ಟ್ ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು 2017ರ ಫೆಬ್ರುವರಿಯಲ್ಲಿ ಕೋಚ್ ಸ್ಥಾನ ವಹಿಸಿಕೊಂಡಿದ್ದರು.
ಆದರೆ, ಅವರು ಭಾರತದ ಪ್ರವಾಸ ಮತ್ತು ನವೆಂಬರ್‌ನಲ್ಲಿ ಬಾಂಗ್ಲಾದೇಶದ ಪ್ರವಾಸಗಳಲ್ಲಿ ಕೋಚ್ ಆಗಿ ಮುಂದುವರಿಯಲಿದ್ದಾರೆ.
ಸ್ಟುವರ್ಟ್ ಲಾ ಇಂಗ್ಲೆಂಡ್‌ನ ಕೌಂಟಿ ತಂಡ ಮಿಡ್ಲ್‌ಸೆಕ್ಸ್ ಕೋಚ್ ಆಗಿ ನಾಲ್ಕು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ.
ಏಕದಿನದಲ್ಲಿ ಹೀನಾಯ ಪ್ರದರ್ಶನ
2016ರ ಸೆಪ್ಟೆಂಬರ್‌ನಲ್ಲಿ ಫಿಲ್ ಸಿಮನ್ಸ್ ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಂಡು ಕೋಚ್ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಅವರ ಸ್ಥಾನಕ್ಕೆ ಲಾ ಆಯ್ಕೆಯಾಗಿದ್ದರು.
ಅವರ ಅವಧಿಯಲ್ಲಿ ವೆಸ್ಟ್ ಇಂಡೀಸ್ 32 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 9ರಲ್ಲಿ ಗೆಲುವು ಕಂಡಿದೆ. 19 ಟಿ20 ಪಂದ್ಯಗಳಲ್ಲಿ ಎಂಟು ಗೆಲುವುಗಳನ್ನು ಪಡೆದಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ವಿಂಡೀಸ್, 2019ರ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಐಸಿಸಿ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಆಡಬೇಕಾದ ಸ್ಥಿತಿಗೆ ತಲುಪಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications