ಮೊದಲ ಟೆಸ್ಟ್: ವೆಸ್ಟ್ ಇಂಡೀಸ್‌ಗೆ ಸುಲಭದ ತುತ್ತಾದ ಬಾಂಗ್ಲಾದೇಶ

ಆಂಟಿಗುವಾ, ಜುಲೈ 7: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನ ಎರಡನೆಯ ಇನ್ನಿಂಗ್ಸ್‌ನಲ್ಲಿಯೂ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಾಂಗ್ಲಾದೇಶ, ಇನ್ನಿಂಗ್ಸ್ ಮತ್ತು 219 ರನ್‌ಗಳ ಹೀನಾಯ ಸೋಲು ಅನುಭವಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 43 ರನ್‌ಗಳಿಗೆ ಸರ್ವಪತನಗೊಂಡಿದ್ದ ಬಾಂಗ್ಲಾದೇಶ, ಎರಡನೆಯ ಇನ್ನಿಂಗ್ಸ್‌ನಲ್ಲಿ ಆ ಮೊತ್ತಕ್ಕಿಂತಲೂ ನೂರು ರನ್ ಹೆಚ್ಚು ಪೇರಿಸಿದ್ದೇ ಸಾಧನೆಯಾಯಿತು.
ಎರಡನೇ ದಿನದ ಅಂತ್ಯಕ್ಕೆ 62 ರನ್‌ಗಳಿಗೆ 6 ವಿಕೆಟ್ ಕಳೆದುಕೊಂದು ಸೋಲಿನ ಅಂಚಿನಲ್ಲಿದ್ದ ಬಾಂಗ್ಲಾದೇಶ ಕೊನೆಯಲ್ಲಿ ಕೊಂಚ ಪ್ರತಿರೋಧ ತೋರಿತು.
ಆದರೆ, ಈ ಪ್ರಯತ್ನ ವಿಂಡೀಸ್ ಪಡೆದಿದ್ದ ಮೊದಲ ಇನ್ನಿಂಗ್ಸ್ ಬೃಹತ್ ಮುನ್ನಡೆಯ ಗಡಿಯನ್ನು ತಲುಪಲು ಎಳ್ಳಷ್ಟೂ ಸಾಲಲಿಲ್ಲ.
ಬಾಂಗ್ಲಾದೇಶದ ಪರ ವಿಕೆಟ್ ಕೀಪರ್ ನುರುಲ್ ಹಸನ್ 64 ರನ್ ಗಳಿಸಿದರು. ಒಂಬತ್ತನೇ ವಿಕೆಟ್‌ಗೆ ಅವರು ರುಬೆಲ್ ಹಸನ್ ಜತೆಗೂಡಿ ಅರ್ಧಶತಕದ ಜತೆಯಾಟ ನೀಡಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ಮಿಂಚಿನ ವೇಗದ ದಾಳಿ ನಡೆಸಿದ್ದ ಕೀಮರ್ ರೋಚ್, ಎರಡನೆಯ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲಿಲ್ಲ.
ಆದರೆ, ಉಳಿದ ಬೌಲರ್‌ಗಳಾದ ಶನೊನ್ ಗ್ಯಾಬ್ರಿಯಲ್, ನಾಯಕ ಜೇಸನ್ ಹೋಲ್ಡರ್ ಮತ್ತು ಮಿಗುವೆಲ್ ಕಮಿನ್ಸ್ ಉಳಿದ ಕಾರ್ಯವನ್ನು ಪೂರ್ಣಗೊಳಿಸಿದರು.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ: 43/10 (18.4) & 144/10 (40.2) ನುರುಲ್ ಹಸನ್ 64,ರುಬೆಲ್ ಹಸನ್ 16. ಶನೊನ್ ಗ್ಯಾಬ್ರಿಯಲ್ 77/5, ಜೇಸನ್ ಹೋಲ್ಡರ್ 30/3, ಮಿಗುವೆಲ್ ಕಮಿನ್ಸ್ 16/2
ವೆಸ್ಟ್ ಇಂಡೀಸ್: 406/10 (137.3). ಕ್ರೆಗ್ ಬ್ರಾಥ್‌ವೈಟ್ 121, ಶಾಯ್ ಹೋಪ್ 67, ಡೆವೊನ್ ಸ್ಮಿತ್ 58. ಅಬು ಜಾಯೆದ್ 84/3, ಮೆಹದಿ ಹಸನ್ 101/3.
ಫಲಿತಾಂಶ: ವೆಸ್ಟ್ ಇಂಡೀಸ್‌ಗೆ ಇನ್ನಿಂಗ್ಸ್ ಮತ್ತು 219 ರನ್ ಜಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications