Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ವೆಸ್ಟ್ ಇಂಡೀಸ್, ಮೊದಲನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ

IND Opt To Field

ಗಯಾನ, ಆಗಸ್ಟ್‌ 08: ವಿಶ್ವಕಪ್‌ ವೈಫಲ್ಯದ ಬಳಿಕ ಟೀಮ್‌ ಇಂಡಿಯಾ ಮರಳಿ ಏಕದಿನ ಕ್ರಿಕೆಟ್‌ ಅಖಾಡಕ್ಕೆ ಇಳಿದಿದ್ದು, ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧ ಮೂರು ಪಂದ್ಯಗಳ ಒಡಿಐ ಸರಣಿಯನ್ನಾಡಲಿದೆ. ಆದರೆ, ಇಲ್ಲಿನ ಗಯಾನ ಪ್ರಾವಿಯನ್ಸ್‌ನಲ್ಲಿ ಗುರುವಾರ (ಆಗಸ್ಟ್ 8) ಎಡೆ ಬಿಡದೆ ಮಳೆಯ ಕಾರಣ ಪಂದ್ಯ ರದ್ದುಗೊಂಡಿದೆ.

ಮಳೆ ಕಾರಣ ಪಂದ್ಯ ತಡವಾಗಿ ಅಂದರೆ, ಸ್ಥಳೀಯ ಕಾಲಮಾನ 11.30ಕ್ಕೆ (ಭಾರತೀಯ ಕಾಲಮಾನ 9ಕ್ಕೆ) ಪಂದ್ಯ ಶುರುವಾಗಿತ್ತು. 8.30ಕ್ಕೆ ಟಾಸ್‌ ನಡೆದು, ಸತತ ನಾಲ್ಕನೇ ಬಾರಿ ಟಾಸ್‌ ಗೆಲ್ಲುವಲ್ಲಿ ವಿರಾಟ್‌ ಕೊಹ್ಲಿ ಸಫಲರಾಗಿ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದ್ದರು.

ಇನ್ನಿಂಗ್ಸ್‌ ಆರಂಭಿಸಿದ್ದ ವೆಸ್ಟ್ ಇಂಡೀಸ್ ತಂಡ, ಎವಿನ್ ಲೆವಿಸ್ ಅಜೇಯ 40 ರನ್‌ನೊಂದಿಗೆ 13 ಓವರ್‌ಗೆ 1 ವಿಕೆಟ್ ಕಳೆದು 54 ರನ್‌ ಮಾಡಿತ್ತು. ಕ್ರಿಸ್‌ ಗೇಲ್ 4 ರನ್‌ಗೆ ನಿರ್ಗಮಿಸಿದ್ದರು. ಶೈ ಹೋಪ್ (4 ರನ್‌), ಲೆವಿಸ್ ಕ್ರೀಸ್‌ನಲ್ಲಿದ್ದರು. ಮಳೆ ಶುರುವಾಗಿದ್ದರಿಂದ ಪಂದ್ಯ ನಿಲ್ಲಿಸಲಾಯಿತು. ಮತ್ತೆ ಪಂದ್ಯ ಮುಂದುವರೆಯಲಿಲ್ಲ.

1
46247

ತಂಡಗಳ ವಿವರ

ವೆಸ್ಟ್‌ ಇಂಡೀಸ್‌
ಎವಿನ್‌ ಲೂಯಿಸ್‌, ಕ್ರಿಸ್‌ ಗೇಲ್‌, ಶೇಯ್‌ ಹೋಪ್‌ (ವಿಕೆಟ್‌ಕೀಪರ್‌), ನಿಕೋಲಸ್‌ ಪೂರನ್‌, ಶಿಮ್ರಾನ್‌ ಹೆಟ್ಮಾಯೆರ್‌, ರಾಸ್ಟನ್‌ ಚೇಸ್‌, ಕಾರ್ಲೋಸ್‌ ಬ್ರಾತ್‌ವೇಟ್‌, ಜೇಸನ್‌ ಹೋಲ್ಡರ್‌ (ನಾಯಕ), ಫೇಬಿಯನ್‌ ಆಲೆನ್‌, ಶೆಲ್ಡನ್‌ ಕಾಟ್ರೆಲ್‌, ಕೆಮಾರ್‌ ರೋಚ್‌.

ಭಾರತ
ರೋಹಿತ್‌ ಶರ್ಮಾ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಕೇದಾರ್‌ ಜಾಧವ್‌, ರಿಷಭ್‌ ಪಂತ್‌ (ವಿಕೆಟ್‌ಕೀಪರ್‌), ರವೀಂದ್ರ ಜಡೇಜಾ, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಕುಲ್ದೀಪ್‌ ಯಾದವ್‌, ಖಲೀಲ್‌ ಅಹ್ಮದ್‌.

Story first published: Friday, August 9, 2019, 10:01 [IST]
Other articles published on Aug 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+