Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೊದಲ ಟಿ20: ಸೈನಿ-ಭುವಿ ಬೌಲಿಂಗ್ ದಾಳಿಗೆ ಶರಣಾದ ವೆಸ್ಟ್ ಇಂಡೀಸ್

West Indies vs India, 1st T20I - Live Score-Match Report

ಲಾಡರ್‌ಹಿಲ್, ಆಗಸ್ಟ್ 3: ವಿಶ್ವಕಪ್‌ ಬಳಿಕ ಮೊದಲ ಪ್ರವಾಸದಲ್ಲಿ ಪಾಲ್ಗೊಳ್ಳುತ್ತಿರುವ ಟೀಮ್ ಇಂಡಿಯಾ, ಫ್ಲೋರಿಡಾದ ಲಾಡರ್‌ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜಿನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ಶನಿವಾರ (ಆಗಸ್ಟ್ 3) ನಡೆದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ವಿಂಡೀಸ್ ವಿರುದ್ಧ 4 ವಿಕೆಟ್ ಗೆಲುವನ್ನಾಚರಿಸಿದೆ.

ವೆಸ್ಟ್ ಇಂಡೀಸ್‌ ಇನ್ನಿಂಗ್ಸ್‌ನಲ್ಲಿ ಭಾರತದ ನವದೀಪ್ ಸೈನಿ ಕೇವಲ 17 ರನ್ನಿಗೆ 3 ವಿಕೆಟ್, ವೇಗಿ ಭುವನೇಶ್ವರ್ ಕುಮಾರ್ 19 ರನ್ನಿಗೆ 2 ವಿಕೆಟ್ ಕೆಡವಿದ್ದು ಎದುರಾಳಿಯನ್ನು 95 ರನ್ನಿಗೆ ಕಟ್ಟಿಹಾಕುವಲ್ಲಿ ನೆರವಾಯ್ತು. ಇನ್ನು ವಾಷಿಂಗ್ಟನ್ ಸುಂದರ್, ಕೆ ಖಲೀಲ್ ಅಹ್ಮದ್, ಕೃನಾಲ್ ಪಾಂಡ್ಯ ಮತ್ತು ರವೀಂದ್ರ ಜಡೇಜಾಗೆ ತಲಾ 1 ವಿಕೆಟ್‌ ಪಡೆದು ತಂಡದ ಗೆಲುವಿಗೆ ಪಾಲಿತ್ತರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್‌ಗೆ ಆರಂಭದಲ್ಲೇ ಭಾರತದ ಬೌಲರ್‌ಗಳು ಆಘಾತ ನೀಡಿದರು. ಜಾನ್ ಕ್ಯಾಂಪ್‌ಬೆಲ್ 0, ಎವಿನ್ ಲೆವಿಸ್ 0, ನಿಕೋಲಸ್ ಪೂರನ್ 20, ಶಿಮ್ರಾನ್ ಹೆಟ್ಮೈಯರ್ 0, ರೋಮನ್ ಪೊವೆಲ್ 4, ಕಾರ್ಲೋಸ್ ಬ್ರಾತ್‌ವೇಟ್ 9, ಸುನಿಲ್ ನರೈನ್ 2, ಕೀಮೋ ಪೌಲ್ 3 ರನ್‌ಗೆ ವಿಕೆಟ್ ಒಪ್ಪಿಸಿದರು.

ಭಾರತ vs ವೆಸ್ಟ್ ಇಂಡೀಸ್, ಮೊದಲ ಟಿ20, ಸ್ಕೋರ್‌ಕಾರ್ಡ್

1
46244

ವೆಸ್ಟ್ ಇಂಡೀಸ್ ಪರ ಹೋರಾಟ ಮಾಡಿದ್ದು ಕೀರನ್ ಪೊಲಾರ್ಡ್ ಒಬ್ಬರೆ. ಪೊಲಾರ್ಡ್ 49 ರನ್‌ ಗಳಿಸಿ 19.3ನೇ ಓವರ್‌ನಲ್ಲಿ ನವದೀಪ್‌ ಸೈನಿ ಓವರ್‌ನಲ್ಲಿ ಎಲ್‌ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ವಿಂಡೀಸ್ 20 ಓವರ್‌ಗೆ 9 ವಿಕೆಟ್ ಕಳೆದು 95 ರನ್ ಗಳಿಸಿತು.

ವಿಂಡೀಸ್ ನೀಡಿದ್ದ 96 ರನ್ ಗುರಿ ಬೆಂಬತ್ತಿದ ಭಾರತ ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಭೀತಿಗೊಳಗಾಯಿತು. ಆದರೆ ರೋಹಿತ್ ಶರ್ಮಾ 24, ವಿರಾಟ್ ಕೊಹ್ಲಿ 19, ಮನೀಶ್ ಪಾಂಡೆ 19, ಕೃನಾಲ್ ಪಾಂಡ್ಯ 12, ರವೀಂದ್ರ ಜಡೇಜಾ 10, ವಾಷಿಂಗ್ಟನ್ ಸುಂದರ್ 8 ರನ್ ಕೊಡುಗೆಯೊಂದಿಗೆ 17.2 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ ಭಾರತ 98 ರನ್ ಮಾಡಿತು.

ಭಾರತದ ಇನ್ನಿಂಗ್ಸ್‌ ವೇಳೆ ಆತಿಥೇಯ ವೆಸ್ಟ್ ಇಂಡೀಸ್‌ನ ಶೆಲ್ಡನ್ ಕಾಟ್ರೆಲ್, ಸುನಿಲ್ ನರೇನ್ ಮತ್ತು ಕೀಮೋ ಪೌಲ್ ತಲಾ ಎರಡು ವಿಕೆಟ್ ಪಡೆದು ತಕ್ಕ ಪ್ರತಿದಾಳಿ ನಡೆಸಿದ್ದು ಕಂಡುಬಂತು. ಯುವ ಬೌಲರ್ ನವದೀಪ್ ಸೈನಿ ಪಂದ್ಯಶ್ರೇಷ್ಠರೆನಿಸಿದರು.

ವೆಸ್ಟ್ ಇಂಡೀಸ್ ತಂಡ: ಜಾನ್ ಕ್ಯಾಂಪ್‌ಬೆಲ್, ಎವಿನ್ ಲೂಯಿಸ್, ನಿಕೋಲಸ್ ಪೂರನ್ (ವಿಕೆ), ಶಿಮ್ರಾನ್ ಹೆಟ್ಮೈಯರ್, ಕೀರನ್ ಪೊಲಾರ್ಡ್, ರೋಮನ್ ಪೊವೆಲ್, ಕಾರ್ಲೋಸ್ ಬ್ರಾಥ್‌ವೈಟ್ (ಸಿ), ಸುನಿಲ್ ನರೈನ್, ಕೀಮೋ ಪಾಲ್, ಶೆಲ್ಡನ್ ಕಾಟ್ರೆಲ್, ಓಶೇನ್ ಥಾಮಸ್.

ಭಾರತ ತಂಡ: ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಸಿ), ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆ), ಕೃನಾಲ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಕೆ ಖಲೀಲ್ ಅಹ್ಮದ್.

Story first published: Saturday, August 3, 2019, 23:44 [IST]
Other articles published on Aug 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+