Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಹಾನೆ ಶತಕ, ವಿಂಡೀಸ್ ವಿರುದ್ಧ ವಿರಾಟ್ ಕೊಹ್ಲಿ ಪಡೆಗೆ ಭರ್ಜರಿ ಗೆಲುವು

IND vs WI 1st test 2019 | ರಹಾನೆ ಶತಕ, ವಿಂಡೀಸ್ ವಿರುದ್ಧ ವಿರಾಟ್ ಕೊಹ್ಲಿ ಪಡೆಗೆ ಭರ್ಜರಿ ಗೆಲುವು
West Indies vs India, 1st Test, Day 4 - Live Score

ಆ್ಯಂಟಿಗುವಾ, ಆಗಸ್ಟ್ 26: ಚತುರ ಬ್ಯಾಟಿಂಗ್ ಮತ್ತು ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಆ್ಯಂಟಿಗುವಾದ ನಾರ್ತ್‌ಸೌಂಡ್‌ನಲ್ಲಿನ ಸರ್‌ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಸೋಮವಾರ (ಆಗಸ್ಟ್ 26) ಮುಕ್ತಾಯಗೊಂಡ ಭಾರತ vs ವೆಸ್ಟ್ ಇಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 318 ರನ್‌ಗಳ ಭರ್ಜರಿ ಗೆಲುವನ್ನಾಚರಿಸಿದೆ.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾಕ್ಕೆ ನಾಯಕ ಕೊಹ್ಲಿ ಮತ್ತು ಹನುಮ ವಿಹಾರಿಯ ಅರ್ಧ ಶತಕದ ಕೊಡುಗೆ ದೊರೆತರೆ, ಅಜಿಂಕ್ಯ ರಹಾನೆ ಶತಕದಾಟ ಬೃಹತ್ ಗೆಲುವಿಗೆ ಕಾರಣವಾಯ್ತು. ಈ ಜಯದೊಂದಿಗೆ ಭಾರತ, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಭಾರತ, ಮೊದಲ ಇನ್ನಿಂಗ್ಸ್‌ನಲ್ಲಿ ರಹಾನೆ 81, ಕೆಎಲ್ ರಾಹುಲ್ 44, ರವೀಂದ್ರ ಜಡೇಜಾ 58 ರನ್‌ನೊಂದಿಗೆ 297 ರನ್ ಮಾಡಿತ್ತು. ವಿಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 222 ರನ್ ಪೇರಿಸಿ ಹಿನ್ನಡೆ ಅನುಭವಿಸಿತ್ತು.

ಭಾರತ vs ವೆಸ್ಟ್ ವಿಂಡೀಸ್, 1ನೇ ಟೆಸ್ಟ್, 4ನೇ ದಿನ, ಸ್ಕೋರ್‌ಕಾರ್ಡ್

1
46250

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಪರ ಕೆಎಲ್ ರಾಹುಲ್ 38, ಕೊಹ್ಲಿ 51, ರಹಾನೆ 102, ವಿಹಾರಿ 93 ರನ್ ಬಾರಿಸಿದ್ದರಿಂದ ಟೀಮ್ ಇಂಡಿಯಾ 112.3 ಓವರ್‌ಗೆ 7 ವಿಕೆಟ್ ಕಳೆದು 343 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತು. ಕೆರಿಬಿಯನ್ನರಲ್ಲಿ ರೋಸ್ಟನ್ ಚೇಸ್ 4 ವಿಕೆಟ್‌ಗಳೊಂದಿಗೆ ಗಮನ ಸೆಳೆದರು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ನೀಡಿದ್ದ 418 ರನ್ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವನ್ನು ಭಾರತದ ಬೌಲರ್‌ಗಳು ಕಾಡಹತ್ತಿದರು. ಇಶಾಂತ್ ಶರ್ಮಾ 3, ಜಸ್‌ಪ್ರೀತ್‌ ಬೂಮ್ರಾ 5, ಮೊಹಮ್ಮದ್ ಶಮಿ 2 ವಿಕೆಟ್ ಉರುಳಿಸಿದ ಪರಿಣಾಮ ವಿಂಡೀಸ್ 26.5 ಓವರ್‌ಗೆ ಸರ್ವ ಪತನ ಕಂಡು 100 ರನ್ ಪೇರಿಸಿ ಶರಣಾಯ್ತು.

ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಪರ ಕೆಮರ್‌ ರೋಚ್ 4+1, ಶ್ಯಾನನ್ ಗೇಬ್ರಿಯಲ್ 3+1, ರೋಸ್ಟನ್ ಚೇಸ್ 2+4 ವಿಕೆಟ್ ಪಡೆದರೆ, ಭಾರತ ಪರ ಇಶಾಂತ್ ಶರ್ಮಾ 5+1, ಜಸ್‌ಪ್ರೀತ್‌ ಬೂಮ್ರಾ 1+3, ರವೀಂದ್ರ ಜಡೇಜಾ 2+0, ಮೊಹಮ್ಮದ್ ಶಮಿ 2+2 ವಿಕೆಟ್ ಉರುಳಿಸಿದಂತಾಗಿದೆ. ಅಜಿಂಕ್ಯ ರಹಾನೆ ಪಂದ್ಯಶ್ರೇಷ್ಠರೆನಿಸಿದರು.

ಭಾರತ ತಂಡ: ಮಯಾಂಕ್ ಅಗರ್ವಾಲ್, ಲೋಕೇಶ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್ (ವಿಕೆ), ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್‌ಪ್ರೀತ್‌ ಬೂಮ್ರಾ.

ವೆಸ್ಟ್ ಇಂಡೀಸ್ ತಂಡ: ಕ್ರೇಗ್ ಬ್ರಾಥ್‌ವೈಟ್, ಜಾನ್ ಕ್ಯಾಂಪ್‌ಬೆಲ್, ಶೈ ಹೋಪ್ (ವಿಕೆ), ಶಮರ್ ಬ್ರೂಕ್ಸ್, ಡ್ಯಾರೆನ್ ಬ್ರಾವೋ, ಶಿಮ್ರಾನ್ ಹೆಟ್‌ಮೇಯರ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್ (ಸಿ), ಮಿಗುಯೆಲ್ ಕಮ್ಮಿನ್ಸ್, ಶಾನನ್ ಗೇಬ್ರಿಯಲ್, ಕೆಮರ್ ರೋಚ್.

Story first published: Monday, August 26, 2019, 2:25 [IST]
Other articles published on Aug 26, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+