ಭಾರತ vs ವಿಂಡೀಸ್, 2ನೇ ಟೆಸ್ಟ್: ಹ್ಯಾಟ್ರಿಕ್ ವಿಕೆಟ್ ಮುರಿದ ಬೂಮ್ರಾ

ಕಿಂಗ್‌ಸ್ಟನ್, ಆಗಸ್ಟ್ 31: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆತಿಥೇಯರ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಶುಕ್ರವಾರ (ಆಗಸ್ಟ್ 30) ಭಾರತ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 264 ರನ್ ಗಳಿಸಿತ್ತು. ಶನಿವಾರ (ಆಗಸ್ಟ್ 31) 140.1 ಓವರ್‌ಗೆ 416 ರನ್‌ನೊಂದಿಗೆ ಭಾರತ ಮೊದಲ ಇನ್ನಿಂಗ್ಸ್ ಮುಗಿಸಿದೆ.
ಮೊದಲ ಇನ್ನಿಂಗ್ಸ್‌ಗೆ ಇಳಿದ ವೆಸ್ಟ್ ಇಂಡೀಸ್ ಶನಿವಾರ 2ನೇ ದಿನದಾಟದ ಅಂತ್ಯಕ್ಕೆ 33 ಓವರ್‌ಗೆ 7 ವಿಕೆಟ್ ಕಳೆದು 87 ರನ್ ಮಾಡಿತು. ಭಾರತದ ವೇಗಿ ಜಸ್‌ಪ್ರೀತ್ 16 ರನ್‌ಗೆ 6 ವಿಕೆಟ್ ಮುರಿದು ಕೆರಿಬಿಯನ್ನರನ್ನು ಕಾಡಿದರು. ಬೂಮ್ರಾಗೆ ಹ್ಯಾಟ್ರಿಕ್ ವಿಕೆಟ್ ಕೂಡ ಲಭಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತಕ್ಕೆ ರಾಹುಲ್ 13, ಅಗರ್ವಾಲ್ 55, ಪೂಜಾರ 6, ನಾಯಕ ವಿರಾಟ್ ಕೊಹ್ಲಿ 76, ಅಜಿಂಕ್ಯ ರಹಾನೆ 24, ರಿಷಬ್ ಪಂತ್ 27, ರವೀಂದ್ರ ಜಡೇಜಾ 16, ಇಶಾಂತ್ ಶರ್ಮಾ 57, ಹನುಮ ವಿಹಾರಿ 111 ರನ್ ಸೇರಿಸಿ ವಿಕೆಟ್ ಒಪ್ಪಿಸಿದ್ದಾರೆ.
140.1 ಓವರ್‌ಗೆ 416 ರನ್‌ನೊಂದಿಗೆ ಭಾರತ ಮೊದಲ ಇನ್ನಿಂಗ್ಸ್ ಮುಗಿಸಿದೆ. ಭಾರತದ ಇನ್ನಿಂಗ್ಸ್‌ನಲ್ಲಿ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ 5 (77 ರನ್), ರಹಕೀಮ್ ಕಾರ್ನ್‌ವಾಲ್ 3 (105 ರನ್) ಗಮನ ಸೆಳೆದರು.
ಭಾರತ vs ವೆಸ್ಟ್ ಇಂಡೀಸ್, 2ನೇ ಟೆಸ್ಟ್, 2ನೇ ದಿನ, Live ಸ್ಕೋರ್‌ಕಾರ್ಡ್
ವೆಸ್ಟ್ ಇಂಡೀಸ್ ತಂಡ: ಕ್ರೇಗ್ ಬ್ರಾಥ್‌ವೈಟ್, ಜಾನ್ ಕ್ಯಾಂಪ್‌ಬೆಲ್, ಶಮರ್ ಬ್ರೂಕ್ಸ್, ಡ್ಯಾರೆನ್ ಬ್ರಾವೋ, ಜಹ್ಮರ್ ಹ್ಯಾಮಿಲ್ಟನ್ (ವಿಕೆ), ಶಿಮ್ರಾನ್ ಹೆಟ್ಮೈಯರ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್ (ಸಿ), ಕೆಮರ್ ರೋಚ್, ರಹಕೀಮ್ ಕಾರ್ನ್‌ವಾಲ್, ಶಾನನ್ ಗೇಬ್ರಿಯಲ್.
ಭಾರತ ತಂಡ: ಲೋಕೇಶ್ ರಾಹುಲ್, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆ), ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications