For Quick Alerts
ALLOW NOTIFICATIONS  
For Daily Alerts
 

3ನೇ ಟಿ20 ಗೆದ್ದು ವಿಂಡೀಸ್‌ ವಿರುದ್ಧ ಕ್ಲೀನ್‌ ಸ್ವೀಪ್‌ ಮಾಡಿದ ಟೀಮ್‌ ಇಂಡಿಯಾ

rishabh pant and virat 2019

ಗಯಾನ, ಆಗಸ್ಟ್‌ 06: ಆಲ್‌ರೌಂಡ್‌ ಪ್ರದರ್ಶನ ನೀಡಿ ಪ್ರಾಬಲ್ಯ ಮೆರೆದ ಟೀಮ್‌ ಇಂಡಿಯಾ, ವಿಂಡೀಸ್‌ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 7 ವಿಕೆಟ್‌ ಜಯ ದಾಖಲಿಸಿ 3-0 ಅಂತರದಲ್ಲಿ ಸರಣಿ ಕ್ಲೀನ್‌ ಸ್ವೀಪ್‌ ಮಾಡಿತು.

1
46246

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 146 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು.ಬಳಿಕ ಗುರಿ ಬೆನ್ನತ್ತಿದ ಭಾರತ ತಂಡ 19.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 150 ರನ್‌ ಸಿಡಿಸಿ ಜಯದ ಸಂಭ್ರಮ ಆಚರಿಸಿತು.

ಈ ಗೆಲುವಿನೊಂದಿಗೆ ವೆಸ್ಟ್‌ ಇಂಡೀಸ್‌ ವಿರುದ್ಧ ಸತತ 6 ಟಿ20 ಪಂದ್ಯಗಳನ್ನು ಗೆದ್ದ ವಿಶ್ವದ ಏಕಮಾತ್ರ ತಂಡವೆಂಬ ಹೆಗ್ಗಳಿಕೆಗೂ ಭಾರತ ತಂಡ ಪಾತ್ರವಾಯಿತು. ನಾಯಕ ವಿರಾಟ್‌ ಕೊಹ್ಲಿ (55) ಮತ್ತು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ (42 ಎಸೆತಗಳಲ್ಲಿ ಅಜೇಯ 65 ರನ್‌) ಅವರ ಅರ್ಧಶತಕಗಳ ನೆರವಿನಿಂದ ಟೀಮ್‌ ಇಂಡಿಯಾ ಸುಲಭವಾಗಿ ಜಯ ದಾಖಲಿಸಿತು.

ವೆಸ್ಟ್‌ ಇಂಡೀಸ್‌ ಪರ ಅನುಭವಿ ಬ್ಯಾಟ್ಸ್‌ಮನ್‌ ಕೈರೊನ್‌ ಪೊಲಾರ್ಡ್‌ (45 ಎಸೆತಗಳಲ್ಲಿ 58 ರನ್‌) ಅರ್ಧಶತಕ ದಾಖಲಿಸಿ ತಂಡಕ್ಕೆ ಆಸರೆಯಾದರು ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7 ವರ್ಷಗಳ ಬಳಿಕ ಪೊಲಾರ್ಡ್‌ ದಾಖಲಿಸಿದ ಮೊದಲ ಅರ್ಧಶತಕವಾಗಿದೆ.

ಇನಿಂಗ್ಸ್‌ ಅಂತ್ಯದಲ್ಲಿ ಬಿರುಸಿನ ಆಟವಾಡಿದ ರೋವ್ಮನ್‌ ಪೊವೆಲ್‌ 20 ಎಸೆತಗಳಲ್ಲಿ ಅಜೇಯ 32 ರನ್‌ ದಾಖಲಿಸಿದರು. ಟೀಮ್‌ ಇಂಡಿಯಾ ಪರ ಭರ್ಜರಿ ಬೌಲಿಂಗ್‌ ದಾಳಿ ಸಂಘಟಿಸಿದ ದೀಪಕ್‌ ಚಹರ್‌, 1 ಮೇಡಿನ್‌ ಒಳಗೊಂಡ 3 ಓವರ್‌ ಎಸೆದು ಕೇವಲ 4 ರನ್‌ ನೀಡಿ 3 ವಿಕೆಟ್‌ ಪಡೆದರು. ದೀಪಕ್‌ ಅವರ ಕಿರಿಯ ಸಹೋದರ ರಾಹುಲ್‌ ಚಹರ್‌ ಕೂಡ 27ಕ್ಕೆ 1 ವಿಕೆಟ್‌ ಪಡೆದರು. ನವದೀಪ್‌ ಸೈನಿ 34ಕ್ಕೆ 2 ವಿಕೆಟ್‌ ಸಂಪಾದಿಸಿದರು.

ಇನ್ನು ಮೂರನೇ ಹಾಗೂ ಅಂತಿಮ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲದ ಮಹತ್ವ ಪಡೆದಿರುವ ಕಾರಣ ಭಾರತ ತಂಡ ಪ್ರಮುಖರಿಗೆ ವಿಶ್ರಾಂತಿ ನೀಡಿ, ಬೆಂಚ್‌ ಕಾಯುವ ಆಟಗಾರರಿಗೆ ಅವಕಾಶ ನೀಡಿದೆ. ಅಂತೆಯೇ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾಗೆ ವಿಶ್ರಾಂತಿ ನೀಡಲಾಯಿತು.

ರೋಹಿತ್‌ ಶರ್ಮಾ ಸ್ಥಾನದಲ್ಲಿ ಕೆ.ಎಲ್‌ ರಾಹುಲ್‌ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸುವ ಜವಾಬ್ದಾರಿ ಪಡೆದು ತಂಡಕ್ಕೆ ಮರಳಿದ್ದಾರೆ. ಇದೇ ವೇಳೆ ಚಹರ್‌ ಸಹೋದರರಾದ ರಾಹುಲ್‌ ಮತ್ತು ದೀಪಕ್‌ಗೆ ಟೀಮ್‌ ಇಂಡಿಯಾಗೆ ಪದಾರ್ಪಣೆ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಸಂಕ್ಷಿಪ್ತ ಸ್ಕೋರ್‌

ವೆಸ್ಟ್‌ ಇಂಡೀಸ್‌: 20 ಓವರ್‌ಗಳಲ್ಲಿ 146/6 (ಕೈರೊನ್‌ ಪೊಲಾರ್ಡ್‌ 58, ರೋವ್ಮನ್‌ ಪೊವೆಲ್‌ 32*; ದೀಪಕ್‌ ಚಹರ್‌ 4ಕ್ಕೆ 3, ನವದೀಪ್‌ ಸೈನಿ 34ಕ್ಕೆ 2).

ಭಾರತ: 19.1 ಓವರ್‌ಗಳಲ್ಲಿ 150/3 (ಕೆ.ಎಲ್‌ ರಾಹುಲ್‌ 20, ವಿರಾಟ್‌ ಕೊಹ್ಲಿ 55, ಪಂತ್‌ ಅಜೇಯ 65; ಒಶೇನ್‌ ಥಾಮಸ್‌ 29ಕ್ಕೆ 2).

ತಂಡಗಳ ವಿವರ

ವೆಸ್ಟ್‌ ಇಂಡೀಸ್‌: ಸುನಿಲ್‌ ನರೈನ್‌, ಎವಿನ್‌ ಲೂಯಿಸ್‌, ನಿಕೋಲಸ್‌ ಪೂರನ್‌ (ವಿಕೆಟ್‌ಕೀಪರ್‌), ಕೈರೊನ್‌ ಪೊಲಾರ್ಡ್‌, ಶಿಮ್ರಾನ್‌ ಹೆಟ್ಮಾಯೆರ್‌, ಕಾರ್ಲೋಸ್‌ ಬ್ರಾತ್‌ವೇಟ್‌ (ನಾಯಕ), ರೋವ್ಮನ್‌ ಪೊವೆಲ್‌, ಕೀಮೊ ಪೌಲ್‌, ಫೇಬಿಯಾನ್‌ ಆಲೆನ್‌, ಶೆಲ್ಡನ್‌ ಕಾಟ್ರೆಲ್‌, ಒಶೇನ್‌ ಥಾಮಸ್‌.

ಭಾರತ: ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ರಿಷಭ್‌ ಪಂತ್‌ (ವಿಕೆಟ್‌ಕೀಪರ್‌), ಮನೀಶ್‌ ಪಾಂಡೆ, ಕೃಣಾಲ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ರಾಹುಲ್‌ ಚಹರ್‌, ಭುವನೇಶ್ವರ್‌ ಕುಮಾರ್‌, ದೀಪಕ್‌ ಚಹರ್‌, ನವದೀಪ್‌ ಸೈನಿ.

Story first published: Wednesday, August 7, 2019, 0:38 [IST]
Other articles published on Aug 7, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+