For Quick Alerts
ALLOW NOTIFICATIONS  
For Daily Alerts
 

ಇಂಡಿಯಾ vs ವಿಂಡೀಸ್‌, 2ನೇ ಒಡಿಐ: ಕ್ಯಾಪ್ಟನ್‌ ಕೊಹ್ಲಿ ವಿರಾಟ ರೂಪ

virat kohli 2019 42nd odi 100.jpg

ಪೋರ್ಟ್‌ ಆಫ್‌ ಸ್ಪೇನ್‌, ಆಗಸ್ಟ್‌ 11: ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ಮಳೆಗೆ ಆಹುತಿಯಾದ ಬಳಿಕ ಮೊದಲ ಗೆಲುವಿಗಾಗಿ ಹಸಿದ ಹೆಬ್ಬುಲಿಯಂತಾಗಿರುವ ಟೀಮ್‌ ಇಂಡಿಯಾ, ದ್ವಿತೀಯ ಒಡಿಐನಲ್ಲಿ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 59 ರನ್‌ಗಳ ಜಯ ದಾಖಲಿಸಿ ಹಸಿವು ನೀಗಿಸಿಕೊಂಡಿದೆ.

1
46248

ಇಲ್ಲಿನ ಕ್ವೀನ್ಸ್‌ ಓವಲ್‌ ಕ್ರೀಡಾಂಗಣದಲ್ಲಿ ಭಾನುವಾರ ಸತತ ಐದನೇ ಬಾರಿ ಟಾಸ್‌ ಗೆಲ್ಲುವಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಬೃಹತ್‌ ಮೊತ್ತ ದಾಖಲಿಸುವ ಲೆಕ್ಕಾಚಾರದಲ್ಲಿ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿದರು. ಆದರೆ, ಮೊದಲ ಓವರ್‌ನಲ್ಲೇ ಶೆಲ್ಡನ್‌ ಕಾಟ್ರೆಲ್‌ ಬೌಲಿಂಗ್‌ನಲ್ಲಿ ಶಿಖರ್‌ ಧವನ್‌ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಆದರೆ ತಂಡಕ್ಕೆ ಬೃಹತ್‌ ಮೊತ್ತ ತಂದುಕೊಡುವ ಜವಾಬ್ದಾರಿ ಹೊತ್ತ ನಾಯಕ ಕೊಹ್ಲಿ ವೃತ್ತಿ ಜೀವನದ 42ನೇ ಏಕದಿನ ಶತಕ ಬಾರಿಸಿ ಹಲವು ದಾಖಲೆಗಳನ್ನು ನುಚ್ಚು ನೂರು ಮಾಡಿದರು. ಕೊಹ್ಲಿ ಅವರ 125 ಎಸೆತಗಳಲ್ಲಿನ 120 ರನ್‌ಗಳ ಅಮೋಘ ಇನಿಂಗ್ಸ್‌ ನೆರವಿನಿಂದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 279 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು.

ಬಳಿಕ ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್‌ ತಂಡಕ್ಕೆ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 46 ಓವರ್‌ಗಳಲ್ಲಿ 270 ರನ್‌ಗಳ ಗುರಿ ನೀಡಲಾಯಿತು. ಆರಂಭಿಕ ಬ್ಯಾಟ್ಸ್‌ಮನ್‌ ಎವಿನ್‌ ಲೂಯಿಸ್‌ (65) ಅರ್ಧಶತಕದಿಂದ ಹೋರಾಟ ನಡೆಸಿದ ವಿಂಡೀಸ್‌ 42 ಓವರ್‌ಗಳಲ್ಲಿ 210 ರನ್‌ಗಳನ್ನು ಗಳಿಸಿ ಆಲ್‌ಔಟ್‌ ಆಯಿತು.

ಇದಕ್ಕೂ ಮುನ್ನ ಕೊಹ್ಲಿಗೆ ಉತ್ತಮ ಸಾಥ್‌ ನೀಡಿದ ಶ್ರೇಯಸ್‌ ಅಯ್ಯರ್‌, 68 ಎಸೆತಗಳಲ್ಲಿ 5 ಪೋರ್‌ ಮತ್ತು 1 ಸಿಕ್ಸರ್‌ ಒಳಗೊಂಡ 71 ರನ್‌ ಗಳಿಸಿ ಗಮನ ಸೆಳೆದರು. ಆದರೆ, ಕೊಹ್ಲಿ ಮತ್ತು ಶ್ರೇಯಸ್‌ ನಂತರ ಇನಿಂಗ್ಸ್‌ ಅಂತ್ಯದಲ್ಲಿ ಚುರುಕಿನ ರನ್‌ ಗಳಿಸುವಲ್ಲಿ ಮಧ್ಯಮ ಕ್ರಮಾಂಕ ವಿಫಲವಾಯಿತು.

ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಬುಧವಾರ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ.

ವಿಂಡೀಸ್‌ ಪರ ಕಾರ್ಲೊಸ್‌ ಬ್ರಾತ್‌ವೇಟ್‌ 53ಕ್ಕೆ 3 ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು. ಉಳಿದಂತೆ ಶೆಲ್ಡನ್‌ ಕಾಟ್ರೆಲ್‌, ಜೇಸನ್‌ ಹೋಲ್ಡರ್‌ ಮತ್ತು ರಾಸ್ಟನ್‌ ಚೇಸ್‌ ತಲಾ 1 ವಿಕೆಟ್‌ ಸಂಪಾದಿಸಿದರು.

ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಸಿದ್ದ ತಂಡವನ್ನೇ ಕಾಯ್ದುಕೊಂಡರೆ, ಫಿಟ್ನೆಸ್‌ ಸಮಸ್ಯೆ ಎದುರಿಸಿರುವ ಫೇಬಿಯನ್‌ ಆಲೆನ್‌ ಅವರ ಸ್ಥಾನದಲ್ಲಿ ವೆಸ್ಟ್‌ ಇಂಡೀಸ್‌ ತಂಡ ವೇಗದ ಬೌಲರ್‌ ಒಶೇನ್‌ ಥಾಮಸ್‌ ಅವರನ್ನು ಕಣಕ್ಕಿಳಿಸಿತ್ತು.

ಸಂಕ್ಷಿಪ್ತ ಸ್ಕೋರ್‌

ಭಾರತ: 50 ಓವರ್‌ಗಳಲ್ಲಿ 279/7 (ರೋಹಿತ್‌ ಶರ್ಮಾ 18, ವಿರಾಟ್‌ ಕೊಹ್ಲಿ 120, ರಿಷಭ್‌ ಪಂತ್‌ 20, ಶ್ರೇಯಸ್‌ ಅಯ್ಯರ್‌ 71; ಬ್ರಾತ್‌ವೇಟ್‌ 53ಕ್ಕೆ 3).

ವೆಸ್ಟ್‌ ಇಂಡೀಸ್‌: 42 ಓವರ್‌ಗಳಲ್ಲಿ 210/10 (ಎವಿನ್‌ ಲೂಯಿಸ್‌ 65, ನಿಕೋಲಸ್‌ ಪೂರನ್‌ 42; ಭುವನೇಶ್ವರ್‌ ಕುಮಾರ್‌ 31ಕ್ಕೆ 4, ಮೊಹಮ್ಮದ್‌ ಶಮಿ 39ಕ್ಕೆ 2).

ಗೇಲ್‌ 300ರ ದಾಖಲೆ
ಕ್ರಿಸ್‌ ಗೇಲ್‌ ಅವರ ಏಕದಿನ ಕ್ರಿಕೆಟ್‌ ವೃತ್ತಿಬದುಕಿನ 300ನೇ ಪಂದ್ಯ ಇದಾಗಿದ್ದು, ಮಾಜಿ ನಾಯಕ ಬ್ರಿಯಾನ್‌ ಲಾರಾ ಅವರನ್ನು ಹಿಂದಿಕ್ಕಿ ವೆಸ್ಟ್‌ ಇಂಡೀಸ್‌ ಪರ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳುವ ಉತ್ತಮ ಅವಕಾಶ ಹೊಂದಿದ್ದಾರೆ. ಇನ್ನು 300ನೇ ಪಂದ್ಯವನ್ನಾಡುವ ಮೂಲಕ ಕೆರಿಬಿಯನ್ನರ ಪರ ಅತಿ ಹೆಚ್ಚು ಒಡಿಐ ಪಂದ್ಯಗಳನ್ನಾಡಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಬ್ರಿಯಾನ್‌ ಲಾರಾ 299 ಪಂದ್ಯಗಳನ್ನಾಡಿದ್ದರು.

ತಂಡಗಳ ವಿವರ
ವೆಸ್ಟ್‌ ಇಂಡೀಸ್‌: ಕ್ರಿಸ್‌ ಗೇಯ್ಲ್‌, ಎವಿನ್‌ ಲೂಯಿಸ್‌, ಶೇಯ್‌ ಹೋಪ್‌ (ವಿಕೆಟ್‌ಕೀಪರ್‌), ನಿಕೋಲಸ್‌ ಪೂರನ್‌, ಶಿಮ್ರಾನ್‌ ಹೆಟ್ಮಾಯೆರ್‌, ರಾಸ್ಟನ್‌ ಚೇಸ್‌, ಜೇಸನ್‌ ಹೋಲ್ಡರ್‌ (ನಾಯಕ), ಕಾರ್ಲೋಸ್‌ ಬ್ರಾತ್‌ವೇಟ್‌, ಕೆಮಾರ್‌ ರೋಚ್‌, ಶೆಲ್ಡನ್‌ ಕಾಟ್ರೆಲ್‌, ಒಶೇನ್‌ ಥಾಮಸ್‌.

ಭಾರತ: ರೋಹಿತ್‌ ಶರ್ಮಾ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್ (ವಿಕೆಟ್‌ಕೀಪರ್‌), ಕೇದಾರ್‌ ಜಾಧವ್‌, ರವೀಂದ್ರ ಜಡೇಜಾ, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಮೊಹಮ್ಮದ್‌ ಶಮಿ, ಖಲೀಲ್‌ ಅಹ್ಮದ್‌.

Story first published: Monday, August 12, 2019, 14:58 [IST]
Other articles published on Aug 12, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+