For Quick Alerts
ALLOW NOTIFICATIONS  
For Daily Alerts
 

ಕೀರನ್ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್, ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಜಯ

West Indies vs South Africa, 4th T20I, Kieron Pollard half century, West Indies won by 21 runs

ಗ್ರೆನೆಡಾ: ಗ್ರೆನೆಡಾದ ಸೇಂಟ್ ಜಾರ್ಜ್ಸ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ (ಜುಲೈ 1) ನಡೆದ ವೆಸ್ಟ್‌ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20ಐ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 21 ರನ್ ಜಯ ಗಳಿಸಿದೆ. ಕೀರನ್ ಪೊಲಾರ್ಡ್, ಲೆಂಡ್ಲ್ ಸಿಮನ್ ಬ್ಯಾಟಿಂಗ್ ಆರ್ಭಟ ಮತ್ತು ಡ್ವೇನ್ ಬ್ರಾವೋ ಮಾರಕ ಬೌಲಿಂಗ್‌ ನೆರವಿನೊಂದಿಗೆ ಕೆರಿಬಿಯನ್ ತಂಡ ಐದು ಪಂದ್ಯಗಳ ಈ ಟಿ20 ಸರಣಿಯಲ್ಲಿ 2-2ರ ಸಮಬಲ ಸಾಧಿಸಿದೆ.

ವೆಸ್ಟ್ ಇಂಡೀಸ್-ದಕ್ಷಿಣ ಆಫ್ರಿಕಾ ಈ ಟಿ20ಐ ಸರಣಿ ನಿಜಕ್ಕೂ ಕುತೂಹಲ ಮೂಡಿಸಿದೆ. ಯಾಕೆಂದರೆ ಸರಣಿಯ ಆರಂಭಿಕ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ ಇಂಡೀಸ್ ಗೆದ್ದಿತ್ತು. ಆ ಬಳಿಕ ದ್ವಿತೀಯ, ತೃತೀಯ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಜಯಿಸಿತ್ತು. ಈಗ ನಾಲ್ಕನೇ ಪಂದ್ಯ ಮತ್ತೆ ವಿಂಡೀಸ್ ಗೆದ್ದಿದೆ. ಹೀಗಾಗಿ ಕೊನೇ ಪಂದ್ಯ ಕುತೂಹಲ ಮೂಡಿಸಿದೆ.

ಪೊಲಾರ್ಡ್ ಬ್ಯಾಟಿಂಗ್‌ ಆರ್ಭಟ

ಪೊಲಾರ್ಡ್ ಬ್ಯಾಟಿಂಗ್‌ ಆರ್ಭಟ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್‌ ಇಂಡೀಸ್‌ ತಂಡದಿಂದ ನಾಯಕ ಕೀರನ್ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್‌ ನಡೆಸಿದರು. 6ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ಪೊಲಾರ್ಡ್ 25 ಎಸೆತಗಳಿಗೆ ಅಜೇಯ 51 ರನ್ ಬಾರಿಸಿದರು. ಇದರಲ್ಲಿ 2 ಬೌಂಡರಿ, 5 ಸಿಕ್ಸರ್‌ಗಳು ಸೇರಿದ್ದವು. ಇನ್ನು ಆರಂಭಿಕರಾಗಿ ಬಂದಿದ್ದ ಲೆಂಡ್ಲ್ ಸಿಮನ್ಸ್ 34 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ನೊಂದಿಗೆ 47 ರನ್ ಕೊಡುಗೆಯಿತ್ತರು.

ಪಂದ್ಯದ ಸಂಕ್ಷಿಪ್ತ ಸ್ಕೋರ್‌

ಪಂದ್ಯದ ಸಂಕ್ಷಿಪ್ತ ಸ್ಕೋರ್‌

ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್‌ ಇಂಡೀಸ್ ತಂಡ, ಲೆಂಡ್ಲ್ ಸಿಮನ್ಸ್ 47, ಎವಿನ್ ಲೂಯಿಸ್ 7, ಶಿಮ್ರನ್ ಹೆಟ್ಮೈರ್ 7, ನಿಕೋಲಸ್ ಪೂರನ್ 16, ಕೀರನ್ ಪೊಲಾರ್ಡ್ 51, ಆ್ಯಂಡ್ರೆ ರಸೆಲ್ 9, ಫ್ಯಾಬಿಯೆನ್ ಅಲೆನ್ 19 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್‌ ಕಳೆದು 167 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಕ್ವಿಂಟನ್ ಡಿ ಕಾಕ್ 60, ಐಡನ್ ಮಾರ್ಕ್ರಮ್ 20, ಡೇವಿಡ್ ಮಿಲ್ಲರ್ 12, ಕಾಗಿಸೊ ರಬಾಡ 16 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 146 ರನ್ ಗಳಿಸಿತು.

ಭಾರತ ಇಂಗ್ಲೆಂಡ್ ವಿರುದ್ಧ ಯಾವ ಆರಂಭಿಕರನ್ನ ಕಣಕ್ಕಿಳಿಸಿದೆ | Oneindia Kannada
ಬ್ರಾವೋ ಉತ್ತಮ ಬೌಲಿಂಗ್

ಬ್ರಾವೋ ಉತ್ತಮ ಬೌಲಿಂಗ್

ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ತಬ್ರೈಝ್ ಶಂಸಿ 2, ಜಾರ್ಜ್ ಲಿಂಡೆ 2, ಲುಂಗಿ ಎನ್‌ಗಿಡಿ 1, ರಬಾಡ 1 ವಿಕೆಟ್ ಪಡೆದರೆ, ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ವೆಸ್ಟ್‌ ಇಂಡೀಸ್‌ನ ಆಲ್ ರೌಂಡರ್ ಡ್ವೇನ್ ಬ್ರಾವೋ 19 ರನ್‌ಗೆ 4, ಆ್ಯಂಡ್ರೆ ರಸೆಲ್ 2, ಒಬೆಡ್ ಮೆಕಾಯ್ 1, ಕ್ರಿಸ್ ಗೇಲ್ 1, ಕೀರನ್ ಪೊಲಾರ್ಡ್ 1 ವಿಕೆಟ್ ಪಡೆದರು. ಪೊಲಾರ್ಡ್ ಪಂದ್ಯಶ್ರೇಷ್ಠರೆನಿಸಿದರು.

Story first published: Friday, July 2, 2021, 14:56 [IST]
Other articles published on Jul 2, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+