For Quick Alerts
ALLOW NOTIFICATIONS  
For Daily Alerts
 

ಲಿಂಡೆ, ರಬಾಡ ಸಾಹಸ: ವೆಸ್ಟ್‌ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ರೋಚಕ ಗೆಲುವು

West Indies vs South Africa: George Linde, Tabraiz Shamsis spin won in 2nd T20I

ಗ್ರೆನೆಡಾ: ಗ್ರೆನೆಡಾದ ಸೇಂಟ್ ಜಾರ್ಜ್ಸ್ ನಲ್ಲಿರುವ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಜೂನ್ 27) ನಡೆದ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಟಿ20ಐ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ರೋಚಕ 16 ರನ್ ಜಯ ಗಳಿಸಿದೆ. ಜಾರ್ಜ್ ಲಿಂಡೆ, ತಬ್ರೈಝ್ ಶಂಶಿ ಮತ್ತು ಕಾಗಿಸೊ ರಬಾಡ ಮಾರಕ ಬೌಲಿಂಗ್‌ನೊಂದಿಗೆ ದಕ್ಷಿಣ ಆಫ್ರಿಕಾ ಗೆಲುವು ದಾಖಲಿಸಿದೆ (ಚಿತ್ರಕೃಪೆ: ಐಸಿಸಿ ಟ್ವೀಟ್).

ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟಿ20ಐ ಸರಣಿಯೀಗ 1-1ರಿಂದ ಸಮಬಲಗೊಂಡಿದೆ. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ, ರೀಝ ಹೆಂಡ್ರಿಕ್ಸ್ 42, ಕ್ವಿಂಟನ್ ಡಿ ಕಾಕ್ 26, ನಾಯಕ ತೆಂಬ ಬವುಮಾ 46, ಡೇವಿಡ್ ಮಿಲ್ಲರ್ 11, ಹೆನ್ರಿಕ್ ಕ್ಲಾಸೆನ್ 10 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 166 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್, ಎವಿನ್ ಲೂಯಿಸ್ 21, ಆ್ಯಂಡ್ರೆ ಫ್ಲೆಚರ್ 35, ಜೇಸನ್ ಹೋಲ್ಡರ್ 20, ಫ್ಯಾಬಿಯೆನ್ ಅಲೆನ್ 34, ಡ್ವೇನ್ ಬ್ರಾವೋ 10, ನಿಕೋಲಸ್ ಪೂರನ್ 9, ಕ್ರಿಸ್ ಗೇಲ್ 8 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 150 ರನ್ ಗಳಿಸಲಷ್ಟೇ ಶಕ್ತವಾಯ್ತು.

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ನ ಕೆವಿನ್ ಸಿಂಕ್ಲೇರ್ 2, ಆ್ಯಂಡ್ರೆ ರಸೆಲ್ 1, ಜೇಸನ್ ಹೋಲ್ಡರ್ 1 ವಿಕೆಟ್ ಪಡೆದರೆ, ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನಲ್ಲಿ ಸೌತ್ ಆಫ್ರಿಕಾದ ಜಾರ್ಜ್ ಲಿಂಡೆ 2, ಲುಂಗಿ ಎನ್‌ಗಿಡಿ 1, ಕಾಗಿಸೋ ರಬಾಡ 3, ಅನ್ರಿಕ್ ನಾರ್ಟ್ಜೆ 1, ತಬ್ರೈಝ್ ಶಂಶಿ 1 ವಿಕೆಟ್‌ನೊಂದಿಗೆ ಗಮನ ಸೆಳೆದರು. ಲಿಂಡೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Story first published: Monday, June 28, 2021, 9:52 [IST]
Other articles published on Jun 28, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+