Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

David Miller: ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಬಗ್ಗೆ ಡೇವಿಡ್ ಮಿಲ್ಲರ್ ಹೇಳಿದ್ದೇನು?

ಜುಲೈ 3 ಬುಧವಾರ, ಐಸಿಸಿ 2024ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸಿ ಮೊದಲ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು ಮುರಿದಿದೆ. ಈ ಸೋಲಿನ ನಂತರ ದಕ್ಷಿಣ ಆಫ್ರಿಕಾದ ಕ್ರಿಕೆಟಿಗರು ನೋವಿನಲ್ಲಿ ಮುಳುಗಿದ್ದಾರೆ.

ಈ ಸೋಲು ಎಷ್ಟು ನೋವನ್ನು ತಂದಿದೆ ಎಂಬುದನ್ನು ಮೈದಾನದಲ್ಲಿದ್ದ ಹಲವು ದಕ್ಷಿಣ ಆಫ್ರಿಕಾ ಆಟಗಾರರ ಮುಖವೇ ಹೇಳುತ್ತಿತ್ತು. ಇದರ ಬೆನ್ನಲ್ಲೇ ಹರಿಣಗಳ ಪಡೆಯ ಸ್ಪೋಟಕ ಬ್ಯಾಟರ್‌ ಡೇವಿಡ್ ಮಿಲ್ಲರ್ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿವೆ.

What did David Miller say about announcing his retirement from T20 cricket

ಸಾಮಾಜಿಕ ಜಾಲತಾಣದಲ್ಲಿ ಡೇವಿಡ್‌ ಮಿಲ್ಲರ್‌ ಟಿ20 ಕ್ರಿಕೆಟ್‌ನಿಂದ ಹೊರಗುಳಿಯುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೀಗ ಮಿಲ್ಲರ್ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ನಾನು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿಲ್ಲ. ನಾನು ಪ್ರೋಟೀಸ್ ಪರ ಆಡುವುದನ್ನು ಮುಂದುವರಿಸುತ್ತೇನೆ. ಉತ್ತಮವಾದುದು ಮುಂದೆ ಇದೆ ಎಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

'ನನಗೆ ತುಂಬಾ ದುಃಖವಾಗಿದೆ. ಎರಡು ದಿನಗಳ ಹಿಂದೆ ನಡೆದ ಘಟನೆಯನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ. ನನಗೆ ಹೇಗೆ ಅನಿಸುತ್ತಿದೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ ಎಂದು ಫೈನಲ್‌ ನೋವನ್ನು ಹೊರ ಹಾಕಿದ್ದಾರೆ.

ಈ ಸಂದರ್ಭದಲ್ಲಿ ಮಿಲ್ಲರ್‌ ತಮ್ಮ ತಂಡವನ್ನು ಹೊಗಳಿದ್ದಾರೆ. 'ನಾನು ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ನನ್ನ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ. ಈ ಪ್ರಯಾಣ ಬಹಳ ಅದ್ಭುತವಾಗಿತ್ತು. ಇಡೀ ತಿಂಗಳು ಏರಿಳಿತಗಳಿಂದ ತುಂಬಿತ್ತು. ನಾವು ನೋವನ್ನು ಸಹಿಸಿಕೊಂಡಿದ್ದೇವೆ. ಆದರೆ ಈ ತಂಡಕ್ಕೆ ಶಕ್ತಿ ಇದೆ ಎಂದು ನನಗೆ ತಿಳಿದಿದೆ ಎಂದು ತಿಳಿಸಿದ್ದಾರೆ.

ಟೀಮ್‌ ಇಂಡಿಯಾ ಎದುರು ದಕ್ಷಿಣ ಆಫ್ರಿಕಾ ಸೋತ ಬಳಿಕ ಮಿಲ್ಲರ್ ಮೈದಾನದಲ್ಲಿ ಕಣ್ಣೀರಿಟ್ಟರು. ಈ ವೇಳೆ ಮಿಲ್ಲರ್‌ ಅವರನ್ನು ಅಪ್ಪಿಕೊಂಡು ಪತ್ನಿ ಸಾಂತ್ವನ ಹೇಳಿದ್ದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಗೆಲುವಿನ ಸನಿಹದಲ್ಲಿ ಎಡವಿದ ಹರಿಣಗಳ ಪಡೆ

ಟಿ20 ವಿಶ್ವಕಪ್‌ 2024ರ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ 30 ಎಸೆತಗಳಲ್ಲಿ 30 ರನ್‌ಗಳ ಅಗತ್ಯವಿತ್ತು. ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಜೋಡಿ ಕ್ರೀಸ್‌ನಲ್ಲಿ ನೆಲೆಯೂರಿತ್ತು. ಆದರೆ ಅಮೋಘ ಬ್ಯಾಟಿಂಗ್ ಮಾಡುತ್ತಿದ್ದ ಕ್ಲಾಸೆನ್ ಅವರನ್ನು ಔಟ್ ಮಾಡುವ ಮೂಲಕ ಹಾರ್ದಿಕ್ ಪಾಂಡ್ಯ ಟೀಮ್‌ ಇಂಡಿಯಾ ಪರ ಪಂದ್ಯವನ್ನು ತಿರುಸಿದರು.

ಇದಾದ ಬಳಿಕ ಹರಿಣಗಳ ಪಡೆ ಮಿಲ್ಲರ್ ಅವರಿಂದ ಕಪ್‌ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್‌ಗಳ ಅಗತ್ಯವಿತ್ತು.

ಈ ವೇಳೆ ದಾಳಿಗಿಳಿದ ಹಾರ್ದಿಕ್ ಅವರ ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ಮಿಲ್ಲರ್ ಲಾಂಗ್ ಆಫ್ ಕಡೆಗೆ ದೊಡ್ಡ ಹೊಡೆತವನ್ನು ಬಾರಿಸಿದರು. ಬೌಂಡರಿಯಲ್ಲಿ ನಿಂತಿದ್ದ ಸೂರ್ಯಕುಮಾರ್ ಯಾದವ್ ಅದ್ಭುತ ಕ್ಯಾಚ್ ಪಡೆದು ಟ್ರೋಫಿ ಗೆಲ್ಲುವ ದಕ್ಷಿಣ ಆಫ್ರಿಕಾದ ಆಸೆಗೆ ಕನ್ನ ಹಾಕಿದರು. ಮಿಲ್ಲರ್ ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾದ ಚಾಂಪಿಯನ್ ಆಗುವ ಕನಸು ಭಗ್ನಗೊಂಡಿತ್ತು.

Story first published: Wednesday, July 3, 2024, 12:08 [IST]
Other articles published on Jul 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+