Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Babar Azam: ಬಾಬರ್ ಅಜಮ್‌ ಮತ್ತೆ ಪಟ್ಟ ಕಳೆದುಕೊಳ್ಳತ್ತಾರಾ?; ಪಾಕಿಸ್ತಾನ ತಂಡದ ಕೋಚ್‌ಗಳು ಹೇಳಿದ್ದೇನು?

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ನಾಯಕತ್ವದ ಬಗ್ಗೆ ಯಾವಾಗಲೂ ಚರ್ಚೆ ನಡೆಯುತ್ತಿರುತ್ತದೆ. ಒಬ್ಬ ನಾಯಕ ಒಂದೇ ಒಂದು ಸರಣಿ ಸೋತರ, ಅವರ ಬಗ್ಗೆ ಹಲವು ಪ್ರಶ್ನೆಗಳು ಏಳುತ್ತವೆ. ಇದಕ್ಕೆ ತಾಜಾ ಉದಾಹರಣೆ ಶಾನ್ ಮಸೂದ್.

ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 0-2 ಅಂತರದ ಸೋಲಿನ ನಂತರ ಅವರ ಮೇಲೆ ಪ್ರಶ್ನೆಗಳು ಎದ್ದಿವೆ. ಮಸೂದ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎಂಬ ಕೂಗುಗಳು ಕೇಳಿ ಬರುತ್ತಿವೆ. ಅವರ ಸ್ಥಾನಕ್ಕೆ ವಿಕೆಟ್‌ಕೀಪರ್ ಮೊಹಮ್ಮದ್ ರಿಜ್ವಾನ್ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ ಎಂದು ವರದಿಗಳು ಹೇಳುತ್ತಿವೆ.

What did Gary Kirsten and Jason Gillespie say about Babar Azam captaincy

ಶಾನ್ ಮಸೂದ್ ಹೊರತಾಗಿ, ವೈಟ್ ಬಾಲ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಅವರನ್ನು ಕೆಳಗಿಳಿಸುವ ಬಗ್ಗೆ ಕೂಡ ಚರ್ಚೆ ನಡೆದಿದೆ. ಬಾಬರ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡವು ಕಳೆದ ವರ್ಷ ಏಕದಿನ ವಿಶ್ವಕಪ್ ಮತ್ತು ಈ ವರ್ಷ ಟಿ20 ವಿಶ್ವಕಪ್‌ನಲ್ಲಿ ಹೀನಾಯವಾಗಿ ಸೋಲನ್ನು ಎದುರಿಸಿದೆ.

ಬಾಬರ್ ಬದಲಿಗೆ ರಿಜ್ವಾನ್‌ಗೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕಮಾಂಡ್ ಹಸ್ತಾಂತರಿಸಬೇಕೆಂಬ ಬೇಡಿಕೆ ಇದೆ. ಇದೀಗ ಪಾಕಿಸ್ತಾನದ ಟೆಸ್ಟ್ ಮತ್ತು ಸೀಮಿತ ಓವರ್‌ಗಳ ತಂಡದ ಮುಖ್ಯ ಕೋಚ್‌ಗಳಾದ ಗ್ಯಾರಿ ಕರ್ಸ್ಟನ್ ಮತ್ತು ಜೇಸನ್ ಗಿಲ್ಲೆಸ್ಪಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಂದೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಪಿಸಿಬಿಗೆ ಎಚ್ಚರಿಕೆ

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಿಂದ ಹೊರ ಬಿದ್ದ ನಂತರ ಸೀಮಿತ ಓವರ್‌ಗಳ ನಾಯಕತ್ವದಿಂದ ಬಾಬರ್ ಅಜಮ್ ಅವರನ್ನು ವಜಾಗೊಳಿಸಲಾಗಿತ್ತು. ಅವರ ಸ್ಥಾನದಲ್ಲಿ ಶಾಹೀನ್ ಶಾ ಆಫ್ರಿದಿಗೆ ಕಮಾಂಡ್ ನೀಡಲಾಗಿತ್ತು. ಆದರೆ ಕೇವಲ ಒಂದು ಸರಣಿಯ ನಂತರ ಅವರನ್ನು ಕೆಳಗಳಿಸಿ, ಬಾಬರ್ ಮತ್ತೆ ನಾಯಕತ್ವವನ್ನು ಹಸ್ತಾಂತರಿಸಲಾಗಿತ್ತು. ಈಗ ಗ್ಯಾರಿ ಕರ್ಸ್ಟನ್ ಮತ್ತು ಜೇಸನ್ ಗಿಲ್ಲೆಸ್ಪಿ ಇತ್ತೀಚೆಗೆ ವಿವಿಧ ಸ್ವರೂಪಗಳಲ್ಲಿ ಕಳಪೆ ಪ್ರದರ್ಶನದ ನಂತರ ಆತುರದಲ್ಲಿ ನಾಯಕರನ್ನು ಬದಲಾಯಿಸುವುದರ ವಿರುದ್ಧ ಪಿಸಿಬಿಗೆ ಎಚ್ಚರಿಕೆ ನೀಡಿದ್ದಾರೆ.

ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ

ಮಸೂದ್ ಮತ್ತು ಬಾಬರ್ ಅವರನ್ನು ನಾಯಕತ್ವದಿಂದ ವಜಾಗೊಳಿಸುವ ಕುರಿತು ಇತ್ತೀಚಿನ ಮಾಧ್ಯಮಗಳು ಪ್ರಸಾರ ಮಾಡುತ್ತಿರುವ ವರದಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಪಿಸಿಬಿ ಮೂಲಗಳು ತಿಳಿಸಿವೆ. ನಾಯಕರನ್ನು ಬದಲಾಯಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಏಕೆಂದರೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನಾಯಕತ್ವವನ್ನು ನಿರ್ಧರಿಸಲು ಇಬ್ಬರು ಕೋಚ್‌ಗಳು ಮತ್ತು ಆಯ್ಕೆದಾರರಿಗೆ ಬಿಟ್ಟಿದ್ದಾರೆ.

ಶಾನ್ ಮತ್ತು ಬಾಬರ್ ಅವರ ನಾಯಕತ್ವದ ಸಾಮರ್ಥ್ಯಗಳನ್ನು ನಿರ್ಣಯಿಸುವ ಮೊದಲು ಇಬ್ಬರಿಗೂ ಅವಕಾಶವನ್ನು ನೀಡಬೇಕು ಎಂದು ಕರ್ಸ್ಟನ್ ಮತ್ತು ಗಿಲ್ಲೆಸ್ಪಿ ಅವರಿಗೆ ಹೇಳಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಲಾಹೋರ್‌ನಲ್ಲಿ ನಡೆಯಲಿರುವ ಕ್ರಿಕೆಟ್ ಕನೆಕ್ಷನ್ ಹೆಸರಿನ ಕಾರ್ಯಕ್ರಮದಲ್ಲಿ ನಾಯಕತ್ವ ಅಥವಾ ಆಯ್ಕೆಗೆ ಸಂಬಂಧಿಸಿದಂತೆ ಯಾವುದೇ ಚರ್ಚೆ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೋಚ್‌ಗಳು ಹೇಳಿದ್ದೇನು?

ಎಲ್ಲಾ ಸ್ವರೂಪಗಳಲ್ಲಿ ಪಾಕಿಸ್ತಾನ ತಂಡದಿಂದ ಉತ್ತಮ ಫಲಿತಾಂಶಗಳನ್ನು ಪಡೆಯಲು ತಾಳ್ಮೆ ಮತ್ತು ಸ್ಥಿರತೆಯ ಅಗತ್ಯವಿದೆ ಎಂದು ಗಿಲ್ಲೆಸ್ಪಿ ಮತ್ತು ಕರ್ಸ್ಟನ್ ಪಿಸಿಬಿ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ಸರಣಿ ಅಥವಾ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ತಂಡ ನಾಯಕ ಯಾರು ಎಂಬ ಪ್ರಶ್ನೆಗೆ ಬಾಬರ್ ಅಜಮ್ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

Story first published: Tuesday, September 10, 2024, 8:27 [IST]
Other articles published on Sep 10, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+