ಟಿ20 ಸರಣಿ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯಗೆ ಭಾರತ ತಂಡದ ಮಾಜಿ ನಾಯಕ ಹೇಳಿದ್ದೇನು?

ಹಾರ್ದಿಕ್ ಪಾಂಡ್ಯ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಕನಸನ್ನು ಹೊಂದಿದ್ದರು ಮತ್ತು ಅವರು ನಾಯಕನ ಸ್ಥಾನದಲ್ಲಿ ನಿಂತು ಫ್ರಾಂಚೈಸಿ ಗುಜರಾತ್ ಟೈಟನ್ಸ್‌ನ ಮೊದಲ ಋತುವಿನಲ್ಲಿ ಪ್ರಶಸ್ತಿ ಗೆಲ್ಲಿಸಿಕೊಟ್ಟರು. ಹಾರ್ದಿಕ್ ಪಾಂಡ್ಯ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಮಿಂಚಿದರು.
ಹಾರ್ದಿಕ್ ಪಾಂಡ್ಯ ಆಡಿದ 15 ಪಂದ್ಯಗಳಲ್ಲಿ 44.27 ಸರಾಸರಿಯಲ್ಲಿ 487 ರನ್ ಗಳಿಸುವ ಮೂಲಕ ಗುಜರಾತ್ ಟೈಟನ್ಸ್‌ನ ಅಗ್ರ ಸ್ಕೋರರ್ ಆಗಿದ್ದಾರೆ. ಇನ್ನು ಬಾಲ್‌ನೊಂದಿಗೆ ಹಾರ್ದಿಕ್ ಪಾಂಡ್ಯ ಎಂಟು ವಿಕೆಟ್ ಪಡೆದರು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪ್ರಶಸ್ತಿ ಹಣಾಹಣಿಯಲ್ಲಿ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ತಂಡವನ್ನು ಸ್ವತಃ ಉತ್ತಮ ಪ್ರದರ್ಶನ ನೀಡಿ ಮುನ್ನಡೆಸಿದರು. ಫೈನಲ್‌ನಲ್ಲಿ 'ಪ್ಲೇಯರ್ ಆಫ್ ದಿ ಮ್ಯಾಚ್' ಎಂಬ ಗೌರವವನ್ನೂ ಪಡೆದರು.

ಬೌಲಿಂಗ್ ಮಾಡಬೇಕೆಂದು ನಾವು ಬಯಸುತ್ತೇವೆ
ಇದೀಗ ಹಾರ್ದಿಕ್ ಪಾಂಡ್ಯ ಜೂನ್ 9ರಂದು ದೆಹಲಿಯಲ್ಲಿ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದಾರೆ. ಅದಕ್ಕೂ ಮೊದಲು ಹಾರ್ದಿಕ್ ಪಾಂಡ್ಯಗೆ ಮಾಜಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಸಲಹೆಯನ್ನು ನೀಡಿದ್ದಾರೆ.
"ಅವರಿಗೆ (ಹಾರ್ದಿಕ್ ಪಾಂಡ್ಯ) ಸಾಮರ್ಥ್ಯವಿದೆ, ಅವರು ಭಾರತ ತಂಡಕ್ಕೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಗಾಯದ ಕಾರಣ ಅವರು ತಂಡದಲ್ಲಿ ಸ್ಥಿರವಾಗಿ ಇರಲಿಲ್ಲ, ಅವರು ಈಗ ಹಿಂತಿರುಗಿದ್ದಾರೆ. ಅವರು ತಮ್ಮ ನಾಲ್ಕು ಓವರ್‌ಗಳನ್ನು ಬೌಲಿಂಗ್ ಮಾಡುತ್ತಿದ್ದಾರೆ. ಅವರು ಎಷ್ಟು ಸಮಯ ಬೌಲ್ ಮಾಡುತ್ತಾರೆಂದು ನಮಗೆ ನಿಜವಾಗಿಯೂ ಗೊತ್ತಿಲ್ಲ. ಆದರೆ ಅವರು ಆಲ್‌ರೌಂಡರ್ ಆಗಿರುವುದರಿಂದ ಅವರು ಖಂಡಿತವಾಗಿಯೂ ಬೌಲಿಂಗ್ ಮಾಡಬೇಕೆಂದು ನಾವು ಬಯಸುತ್ತೇವೆ," ಎಂದು ಮೊಹಮ್ಮದ್ ಅಜರುದ್ದೀನ್ ಖಲೀಜ್ ಟೈಮ್ಸ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ನಾಲ್ಕು ಓವರ್‌ಗಳಲ್ಲಿ ಮೂರು ವಿಕೆಟ್
"ಐಪಿಎಲ್ ಫೈನಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹಾರ್ದಿಕ್ ಪಾಂಡ್ಯ ಆಟವನ್ನು ಸಂಪೂರ್ಣವಾಗಿ ಬದಲಾಯಿಸಿದರು. ನಾಲ್ಕು ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆದದ್ದಲ್ಲದೇ, ನಂತರ ಅವರು ತ್ವರಿತವಾಗಿ 34 ರನ್ ಗಳಿಸಿದರು. ಅವರು ಉತ್ತಮ ಪ್ರತಿಭೆಯಾಗಿದ್ದು, ಕೇವಲ ಸ್ಥಿರತೆಯ ಅಗತ್ಯವಿದೆ," ಎಂದು ಮಾಜಿ ಕ್ರಿಕೆಟಿಗ ಅಜರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.
'ಹಳೆಯ ಹಾರ್ದಿಕ್ ಹಿಂತಿರುಗುತ್ತಾರೆ' ಎಂದು ಹೇಳುವ ಮೂಲಕ ತನ್ನ ಐಪಿಎಲ್ ಪ್ರದರ್ಶನವನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪುನರಾವರ್ತಿಸಲು ನೋಡುತ್ತೇನೆ ಎಂದು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಹೇಳಿದ್ದರು.

ಹಳೆಯ ಹಾರ್ದಿಕ್ ಹಿಂತಿರುಗುತ್ತಾರೆ
"ಹಳೆಯ ಹಾರ್ದಿಕ್ ಹಿಂತಿರುಗುತ್ತಾರೆ. ಈಗ ಅಭಿಮಾನಿಗಳು ಹಿಂತಿರುಗಿದ್ದಾರೆ, ನಾನು ಪುನರಾಗಮನ ಮಾಡುವ ಸಮಯ ಬಂದಿದೆ. ಬಹಳಷ್ಟು ಪಂದ್ಯಗಳು ನಡೆಯಲಿವೆ ಮತ್ತು ನಾನು ಅದನ್ನು ಎದುರು ನೋಡುತ್ತಿದ್ದೇನೆ. ನನ್ನ ಫ್ರಾಂಚೈಸಿಗಾಗಿ ನಾನು ಏನು ಆಡಿದ್ದೇನೆ, ಅದನ್ನು ಭಾರತೀಯ ತಂಡಕ್ಕೂ ಕೂಡ ಆಡುತ್ತೇನೆ. ನನ್ನ ದೇಶಕ್ಕಾಗಿ ನಾನು ಅದೇ ರೀತಿ ಆಡಬಲ್ಲೆ ಎಂದು ಖಚಿತಪಡಿಸಿಕೊಳ್ಳಿ," ಎಂದು ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ಟ್ವಿಟರ್ ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.
ಐಪಿಎಲ್‌ಗೆ ಮೊದಲು, ಹಾರ್ದಿಕ್ ದೀರ್ಘಕಾಲದ ಬೆನ್ನುನೋವಿನಿಂದಾಗಿ ಸಾಕಷ್ಟು ಅಂತರರಾಷ್ಟ್ರೀಯ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಫಿಟ್ನೆಸ್ ಸಮಸ್ಯೆಯಿಂದಾಗಿ ಹಾರ್ದಿಕ್ ತಂಡದಿಂದ ಕೈಬಿಡಲಾಗಿದೆ ಎಂಬ ಊಹಾಪೋಹಗಳು ಇದ್ದವು. ಆದರೆ ಆಲ್‌ರೌಂಡರ್ ಆಟದಿಂದ ವಿರಾಮ ತೆಗೆದುಕೊಂಡಿರುವುದು ತಮ್ಮ ನಿರ್ಧಾರ ಎಂದು ತಿಳಿಸಿದರು.

ನನ್ನನ್ನು ಕೈಬಿಡಲಾಗಿದೆ ಎಂಬುದು ತಪ್ಪುಗ್ರಹಿಕೆ
"ನಾನು ತಂಡದಿಂದ ಹೊರನಡೆದಿದ್ದೇನೆ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಇದು ನನ್ನ ನಿರ್ಧಾರ. ನನ್ನನ್ನು ಕೈಬಿಡಲಾಗಿದೆ ಎಂಬುದು ಬಹಳಷ್ಟು ತಪ್ಪುಗ್ರಹಿಕೆಯಾಗಿದೆ. ನೀವು ಲಭ್ಯವಿದ್ದಾಗ ನಿಮ್ಮನ್ನು ಕೈಬಿಡಲಾಗುತ್ತದೆ. ತನಗೆ ದೀರ್ಘ ವಿರಾಮ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರಿಂದ ಬಿಸಿಸಿಐಗೆ ಧನ್ಯವಾದಗಳು. ನನ್ನನ್ನು ಮರಳಿ ಬರುವಂತೆ ಒತ್ತಾಯಿಸಲೂ ಇಲ್ಲ," ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.
2021ರಲ್ಲಿ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ 28ರ ಹರೆಯದ ಹಾರ್ದಿಕ್ ಪಾಂಡ್ಯ ಕೊನೆಯ ಬಾರಿ ಭಾರತ ತಂಡದ ಪರ ಆಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications