ಪಾಕಿಸ್ತಾನ ತಂಡದ ಗುಂಪುಗಾರಿಕೆ ರಹಸ್ಯ ಬಯಲು ಮಾಡಿದ ನಾಯಕ ಶಾನ್ ಮಸೂದ್
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ಪಾಕಿಸ್ತಾನ ತಂಡ ಟೀಕೆಗೆ ಗುರಿಯಾಗಿದೆ. ಮೊದಲ ಟೆಸ್ಟ್ ಪಂದ್ಯದ ನಡೆದ ಒಂದು ಘಟನೆಯಿಂದ ಪಾಕಿಸ್ತಾನ ತಂಡದಲ್ಲಿನ ಗುಂಪುಗಾರಿಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಪಾಕಿಸ್ತಾನ ನಾಯಕ ಶಾನ್ ಮಸೂದ್ ಮತ್ತು ವೇಗದ ಬೌಲರ್ ಶಾಹೀನ್ ಅಫ್ರಿದಿ ಅವರ ವೀಡಿಯೊ ವೈರಲ್ ಆಗಿದೆ. ಇದಾದ ನಂಗತರ ಪಾಕಿಸ್ತಾನ ತಂಡದಲ್ಲಿ ಗುಂಪುಗಾರಿಕೆ ಇರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ ಈ ವಿಡಿಯೋ ಸತ್ಯಾಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ನಾಯಕ ಶಾನ್ ಮಸೂದ್ ಮಾಹಿತಿ ನೀಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?
ಪಾಕಿಸ್ತಾನ ತಂಡವನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ ಎಂದು ಹಲವು ತಿಂಗಳುಗಳಿಂದ ತಿಳಿದುಬಂದಿದೆ. ಕೆಲವು ಆಟಗಾರರು ಬಾಬರ್ ಅಜಮ್ ಜೊತೆಯಲ್ಲಿದ್ದರೆ, ಇನ್ನು ಕೆಲವರು ಶಾಹೀನ್ ಅಫ್ರಿದಿ ಗುಂಪಿನಲ್ಲಿದ್ದಾರೆ. ತಂಡ ಒಗ್ಗಟ್ಟಾಗಿ ಆಡದ ಪರಿಣಾಮ ಸೋಲಿನ ಸುಳಿಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ.
ಈ ವಿಚಾರವಾಗಿ ಪಾಕಿಸ್ತಾನದ ಹಲವು ಮಾಜಿ ಕ್ರಿಕೆಟಿಗರು ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ವೇಳೆ ವೈರಲ್ ಆದ ವಿಡಿಯೋದಲ್ಲಿ ಪಾಕ್ ತಂಡದ ಗುಂಪುಗಾರಿಕೆ ಇರುವುದು ಕಂಡು ಬಂದಿತ್ತು. ವಿಡಿಯೋದಲ್ಲಿ ನಾಯಕ ಶಾನ್ ಮಸೂದ್ ಒಂದು ಕಡೆ ಬಾಬರ್ ಅಜಮ್ ಅವರ ಭುಜದ ಮೇಲೆ ಮತ್ತು ಇನ್ನೊಂದು ಬದಿಯಲ್ಲಿ ಶಾಹೀನ್ ಅಫ್ರಿದಿ ಭುಜದ ಮೇಲೆ ಕೈ ಹಾಕಿದರು.
ಈ ಸಂದರ್ಭದಲ್ಲಿ ಶಾಹೀನ್ ತಮ್ಮ ಭುಜದ ಮೇಲೆ ಇದ್ದ ಮಸೂದ್ ಕೈಯನ್ನು ತೆಗೆಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೇಳೆ ಶಾಹೀನ್ ಅಫ್ರಿದಿ ಟೀಕೆಗಳನ್ನು ಎದುರಿಸುವಂತಾಗಿತ್ತು. ಬಳಿಕ ವೈಯಕ್ತಿಕ ಕಾರಣಗಳಿಂದ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು.
ರಹಸ್ಯ ಬಯಲು
ಬಾಂಗ್ಲಾದೇಶ ಎದುರು ಟೆಸ್ಟ್ ಸರಣಿ ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ಶಾನ್ ಮಸೂದ್ ವೈರಲ್ ಆದ ವಿಡಿಯೋ ಬಗ್ಗೆ ತಿಳಿಸಿದ್ದಾರೆ. ' ಪಂದ್ಯದ ವೇಳೆ ಶಾಹೀನ್‌ಗೆ ಭುಜದ ನೋವು ಕಾಣಿಸಿಕೊಂಡಿತ್ತು. ಆದರೆ ನನಗೆ ಈ ಬಗ್ಗೆ ತಿಳಿಯದೆ ಅವರ ಭುಜದ ಮೇಲೆ ಕೈ ಹಾಕಿದ್ದೆ. ಹಾಗಾಗಿ ಶಾಹೀನ್ ನನ್ನ ಕೈ ತೆಗೆಯುವಂತೆ ಕೇಳಿಕೊಂಡರು. ನಮ್ಮ ನಡುವೆ ಯಾವುದೇ ವಿವಾದ ಅಥವಾ ಭಿನ್ನಾಭಿಪ್ರಾಯವಿಲ್ಲ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಕ್ಷಮೆಯಾಚಿಸಿದ ನಾಯಕ
ಪಾಕ್ ನಾಯಕ ಶಾನ್ ಮಸೂದ್ ನಾಯಕತ್ವದಲ್ಲಿ ತಂಡ ಹೀನಾಯ ಪ್ರದರ್ಶನ ನೀಡುವ ಮೂಲಕ ಸೋಲು ಕಂಡಿದೆ. ತವರಿನಲ್ಲಿ ಪಾಕಿಸ್ತಾನ ತಂಡ ತನ್ನ ಪ್ರಾಬಲ್ಯ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಸೋಲಿನಿಂದ ಶಾನ್ ಮಸೂದ್ ನಿರಾಶೆಗೊಂಡಿದ್ದು, ಸೋಲಿನ ಹೊಣೆ ಹೊತ್ತು ದೇಶದ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications