Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಸೋತಾಗ ಆಪಾದನೆ, ಗೆದ್ದಾಗ ಆತ ಮರೆತು ಹೋಗುತ್ತಾನೆ'; ರಾಹುಲ್ ದ್ರಾವಿಡ್ ಬೆಂಬಲಕ್ಕೆ ನಿಂತ ದೊಡ್ಡ ಗಣೇಶ್

ಭಾನುವಾರ, ಸೆಪ್ಟೆಂಬರ್ 17ರಂದು ನಡೆದ 2023ರ ಏಷ್ಯಾ ಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ ಕ್ರಿಕೆಟ್ ತಂಡವು 10 ವಿಕೆಟ್‌ಗಳ ಅದ್ಭುತ ಗೆಲುವಿನೊಂದಿಗೆ ಏಷ್ಯಾದ ಅಧಿಪತಿಯಾಗಿದೆ.

ಫೈನಲ್‌ನಲ್ಲಿ ಭಾರತದ ಗೆಲುವಿನ ಪ್ರಮುಖ ಶಿಲ್ಪಿ ವೇಗಿ ಮೊಹಮ್ಮದ್ ಸಿರಾಜ್. 7 ಓವರ್‌ಗಳಲ್ಲಿ 21 ರನ್ ನೀಡಿ 6 ವಿಕೆಟ್‌ ಪಡೆಯುವ ಮೂಲಕ ಪ್ರಶಸ್ತಿ ಹಣಾಹಣಿಯಲ್ಲಿ ಶ್ರೀಲಂಕಾ ತಂಡದ ಅಗ್ರ ಕ್ರಮಾಂಕದ ಪೆವಿಲಿಯನ್ ಪರೇಡ್‌ಗೆ ಕಾರಣರಾದರು.

ಮೊಹಮ್ಮದ್ ಸಿರಾಜ್ ಅವರ ಕನಸಿನ ಸ್ಪೆಲ್ ಮತ್ತು ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಪ್ರಮುಖ ಕೊಡುಗೆಗಳು, ಭಾರತ ತಂಡವು ಆತಿಥೇಯ ಶ್ರೀಲಂಕಾವನ್ನು ಕೇವಲ 50 ರನ್‌ಗಳಿಗೆ ನಿಯಂತ್ರಿಸಿತು. ನಂತರ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಕೇವಲ 6.1 ಓವರ್‌ಗಳಲ್ಲಿ ಗುರಿ ಬೆನ್ನತ್ತಿ ಮುಗಿಸಿತು.

dodda-ganesh-says-about-rahul-dravid-as-the-coach

ಭಾರತ ತಂಡ ಐತಿಹಾಸಿಕ ಗೆಲುವು ದಾಖಲಿಸಿದಾಗಿನಿಂದ, ವಿಶ್ವದಾದ್ಯಂತ ಎಲ್ಲಾ ಸಾಮಾಜಿಕ ಮಾಧ್ಯಮಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಮೊಹಮ್ಮದ್ ಸಿರಾಜ್ ಸೇರಿದಂತೆ ಭಾರತ ತಂಡದ ಆಟಗಾರರನ್ನು ಶ್ಲಾಘಿಸುತ್ತಿದ್ದಾರೆ.

ಆದರೆ, ಫೈನಲ್ ಪಂದ್ಯದ ವೇಳೆ ಭಾರತದ ಮಾಜಿ ವೇಗಿ ಹಾಗೂ ಕನ್ನಡಿಗ ದೊಡ್ಡ ಗಣೇಶ್ ಅವರು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ತಂಡದ ವಿಜಯಕ್ಕಾಗಿ ದ್ರಾವಿಡ್‌ಗೆ ಕ್ರೆಡಿಟ್ ನೀಡಲು ಅಭಿಮಾನಿಗಳಿಗೆ ಕರೆ ನೀಡಿದರು.

"ಏಷ್ಯಾ ಕಪ್ ಫೈನಲ್ಸ್‌ನಲ್ಲಿ ಭಾರತ ತಂಡ ಭರ್ಜರಿ ಗೆಲುವಿನ ಅಂಚಿನಲ್ಲಿದೆ ಮತ್ತು ರಾಹುಲ್ ದ್ರಾವಿಡ್ ಇನ್ನೂ ಎಕ್ಸ್ (ಟ್ವಿಟ್ಟರ್‌) ನಲ್ಲಿ ಟ್ರೆಂಡಿಂಗ್ ಆಗಿಲ್ಲ. ಅಲ್ಲದೆ, ತಂಡವು ವಿಫಲವಾದಾಗ ರಾಹುಲ್‌ ದ್ರಾವಿಡ್‌ಗೆ ಮಾತ್ರ ಆಪಾದನೆ ಹೋಗುತ್ತದೆ. ಆದರೆ ತಂಡವು ಗೆದ್ದಾಗ, ಅವನು ಮರೆತುಹೋಗುತ್ತಾನೆ. ಹೌದು, ನಾವು ವಾಸಿಸುವ ಪ್ರಪಂಚ ಈ ರೀತಿಯಾಗಿದೆ".

"ರಾಹುಲ್ ದ್ರಾವಿಡ್ ಅವರ ಸಲುವಾಗಿ ಭಾರತವು 2023ರ ವಿಶ್ವಕಪ್ ಅನ್ನು ಗೆಲ್ಲಬೇಕೆಂದು ನಾನು ತುಂಬಾ ಬಯಸುತ್ತೇನೆ. ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್‌ನ ಅನ್‌ಸಂಗ್ ಹೀರೋ," ಎಂದು ಕರ್ನಾಟಕದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಎಕ್ಸ್ (ಟ್ವಿಟ್ಟರ್) ನಲ್ಲಿ ಬರೆದುಕೊಂಡಿದ್ದಾರೆ.

ಭಾರತ ತಂಡದಲ್ಲಿನ ಹೊಸ ಸಂಯೋಜನೆಗಳನ್ನು ಪರೀಕ್ಷಿಸುವ ಸಲುವಾಗಿ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಿದಾಗಿನಿಂದ ರಾಹುಲ್ ದ್ರಾವಿಡ್ ಸ್ಕ್ಯಾನಿಂಗ್‌ಗೆ ಒಳಗಾಗಿದ್ದಾರೆ.

ಏಷ್ಯಾ ಕಪ್ ಟ್ರೋಫಿಯನ್ನು ಯಶಸ್ವಿಯಾಗಿ ಗೆದ್ದ ನಂತರ, ಭಾರತ ತಂಡದ ಮುಂದಿನ ಕಾರ್ಯಯೋಜನೆಯು ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಆಗಿದೆ. ಶುಕ್ರವಾರ, ಸೆಪ್ಟೆಂಬರ್ 22ರಿಂದ ಸರಣಿ ಪ್ರಾರಂಭವಾಗಲಿದೆ.

dodda-ganesh-says-about-rahul-dravid-as-the-coach

ಸೋಮವಾರದಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮುಂಬರುವ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದರು.

ಸಕ್ರಿಯ ಕ್ರಿಕೆಟಿಗರಲ್ಲಿ ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಆಗಿರುವ ಅನುಭವಿ ರವಿಚಂದ್ರನ್ ಅಶ್ವಿನ್ ಅವರು ಜನವರಿ, 2022ರ ನಂತರ ಮತ್ತೆ ಏಕದಿನ ಪಂದ್ಯ ಆಡಲು ಸಿದ್ಧರಾಗಿದ್ದಾರೆ.

ಅಕ್ಟೋಬರ್ 5ರಂದು ಆರಂಭವಾಗುವ 2023ರ ಏಕದಿನ ವಿಶ್ವಕಪ್‌ಗೆ ಮೊದಲು ಆತಿಥೇಯ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯು ಅಂತಿಮ ಪೂರ್ವಾಭ್ಯಾಸವಾಗಿದೆ. ರವಿಚಂದ್ರನ್ ಅಶ್ವಿನ್ ವಿಶ್ವಕಪ್ ತಂಡದ ಭಾಗವಾಗಿಲ್ಲ, ಆದರೆ ಅವರ ಆಯ್ಕೆಯು ಕುತೂಹಲವನ್ನು ಹೆಚ್ಚಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ

ಮೊದಲ 2 ಪಂದ್ಯಗಳಿಗೆ ಭಾರತ ತಂಡ: ಕೆಎಲ್ ರಾಹುಲ್ (ನಾಯಕ/ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

3ನೇ ಏಕದಿನ ಪಂದ್ಯಕ್ಕೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್ (ಫಿಟ್ನೆಸ್ ಆಧಾರದ ಮೇಲೆ), ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

Story first published: Tuesday, September 19, 2023, 19:37 [IST]
Other articles published on Sep 19, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+