ಕ್ರಿಕೆಟ್ ಜಗತ್ತಿನಲ್ಲಿ ಆಗಸ್ಟ್ 12ರಂದು ನಡೆದದ್ದೇನು?

ಆಗಸ್ಟ್ 12 ಗುರುವಾರದಂದು ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಆರಂಭವಾಗಿರುವುದರ ಜೊತೆಗೆ ಇನ್ನೂ ಹಲವಾರು ಪ್ರಮುಖ ಕ್ರಿಕೆಟ್ ವಿದ್ಯಮಾನಗಳು ಜರುಗಿವೆ. ಹೀಗೆ ಆಗಸ್ಟ್ 12ರಂದು ನಡೆದ ಪ್ರಮುಖ ಕ್ರಿಕೆಟ್ ಘಟನೆಗಳ ಕಿರು ನೋಟ ಇಲ್ಲಿದೆ ನೋಡಿ..

ಭಾರತ vs ಇಂಗ್ಲೆಂಡ್: ಸಿರಾಜ್ ನಡೆದುಕೊಂಡ ರೀತಿ ಸರಿಯಲ್ಲ ಎಂದು ಬುದ್ಧಿ ಹೇಳಿದ ದಿನೇಶ್ ಕಾರ್ತಿಕ್ಭಾರತ vs ಇಂಗ್ಲೆಂಡ್: ಸಿರಾಜ್ ನಡೆದುಕೊಂಡ ರೀತಿ ಸರಿಯಲ್ಲ ಎಂದು ಬುದ್ಧಿ ಹೇಳಿದ ದಿನೇಶ್ ಕಾರ್ತಿಕ್

* ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಡುವ ಬಳಗದಿಂದ ರವಿಚಂದ್ರನ್ ಅಶ್ವಿನ್ ಅವರನ್ನು ಕೈಬಿಡಲಾಗಿದೆ.

ಭಾರತ vs ಇಂಗ್ಲೆಂಡ್: ದ್ವಿತೀಯ ಟೆಸ್ಟ್‌ನಲ್ಲೂ ಅಶ್ವಿನ್‌ಗೆ ಸ್ಥಾನ ನೀಡದೇ ತಪ್ಪು ಮಾಡಿದ್ರಾ ಕೊಹ್ಲಿ?ಭಾರತ vs ಇಂಗ್ಲೆಂಡ್: ದ್ವಿತೀಯ ಟೆಸ್ಟ್‌ನಲ್ಲೂ ಅಶ್ವಿನ್‌ಗೆ ಸ್ಥಾನ ನೀಡದೇ ತಪ್ಪು ಮಾಡಿದ್ರಾ ಕೊಹ್ಲಿ?

* ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಆಡುವ ಬಳಗದಿಂದ ರವಿಚಂದ್ರನ್ ಅಶ್ವಿನ್ ಅವರನ್ನು ಕೈಬಿಟ್ಟಿದ್ದಕ್ಕೆ ನೆಟ್ಟಿಗರು ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ.

'ಅಭಿಮಾನಿಗಳು ನನ್ನ ಸುಡುತ್ತಿದ್ದರು': ಸಚಿನ್‌ಗೆ ತಮಾಷೆ ಮಾಡೋಕೆ ಹೋಗಿ ಎಡವಟ್ಟಾಗಿದ್ದ ಕ್ಷಣ ನೆನೆದ ಶೋಯೆಬ್ ಅಖ್ತರ್'ಅಭಿಮಾನಿಗಳು ನನ್ನ ಸುಡುತ್ತಿದ್ದರು': ಸಚಿನ್‌ಗೆ ತಮಾಷೆ ಮಾಡೋಕೆ ಹೋಗಿ ಎಡವಟ್ಟಾಗಿದ್ದ ಕ್ಷಣ ನೆನೆದ ಶೋಯೆಬ್ ಅಖ್ತರ್

* ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ರವಿಚಂದ್ರನ್ ಅಶ್ವಿನ್ ಬದಲು ಇಶಾಂತ್ ಶರ್ಮಾಗೆ ಅವಕಾಶ ನೀಡಿದ್ದರ ಹಿಂದಿನ ಕಾರಣವನ್ನು ವಿರಾಟ್ ಕೊಹ್ಲಿ ಬಿಚ್ಚಿಟ್ಟಿದ್ದಾರೆ. ಅಶ್ವಿನ್ ಅವರನ್ನು ಎರಡನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿತ್ತು ಆದರೆ ಪಿಚ್ ವರದಿಯ ನಂತರ ತಂಡಕ್ಕೆ ಸ್ಪಿನ್ನರ್‌ಗಿಂತ ವೇಗಿಯ ಅಗತ್ಯತೆ ಹೆಚ್ಚಿದೆ ಎಂಬುದು ತಿಳಿಯಿತು. ಹೀಗಾಗಿ ರವಿಚಂದ್ರನ್ ಅಶ್ವಿನ್ ಬದಲು ಇಶಾಂತ್ ಶರ್ಮಾಗೆ ತಂಡದಲ್ಲಿ ಸ್ಥಾನ ನೀಡಲಾಯಿತು ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

* ಭಾರತದ ಆಲ್ ರೌಂಡರ್ ಶ್ರೇಯಸ್ ಗೋಪಾಲ್ ಗೆಳತಿ ನಿಕಿತಾ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಈ ವಿಷಯವನ್ನು ರಾಜಸ್ಥಾನ್ ರಾಯಲ್ಸ್ ತಂಡ ಟ್ವಿಟರ್ ಮೂಲಕ ಟ್ವೀಟ್ ಮಾಡಿ ಜೋಡಿಗೆ ಶುಭ ಹಾರೈಸಿದೆ.

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಈ ಆಟಗಾರ ಇನ್ನೂ ಚೆನ್ನಾಗಿ ಆಟವಾಡಬೇಕಿದೆ ಎಂದ ಕೊಹ್ಲಿಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಈ ಆಟಗಾರ ಇನ್ನೂ ಚೆನ್ನಾಗಿ ಆಟವಾಡಬೇಕಿದೆ ಎಂದ ಕೊಹ್ಲಿ

* ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಚೇತೇಶ್ವರ್ ಪೂಜಾರ ಕಳಪೆ ಪ್ರದರ್ಶನ ಮುಂದುವರಿದಿದ್ದು 9 ರನ್‌ ಗಳಿಸಿ ಮತ್ತೆ ನಿರಾಸೆ ಮೂಡಿಸಿದ್ದಾರೆ. ಚೇತೇಶ್ವರ್ ಪೂಜಾರ ಎರಡನೇ ಪಂದ್ಯದಲ್ಲಿಯೂ ವಿಫಲರಾಗುತ್ತಿದ್ದಂತೆ ಚೇತೇಶ್ವರ್ ಪೂಜಾರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿವೆ.

* ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಗುರುವಾರದಂದು (ಆಗಸ್ಟ್ 12 ) ಆರಂಭವಾಗಿದೆ. ಈ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಟಾಸ್ ಸೋತಿದ್ದು, ಪದೇ ಪದೇ ಟಾಸ್ ಸೋಲುತ್ತಿರುವುದಕ್ಕೆ ವಿರಾಟ್ ಕೊಹ್ಲಿಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಭಾರತ vs ಇಂಗ್ಲೆಂಡ್: ಸಿರಾಜ್ ನಡೆದುಕೊಂಡ ರೀತಿ ಸರಿಯಲ್ಲ ಎಂದು ಬುದ್ಧಿ ಹೇಳಿದ ದಿನೇಶ್ ಕಾರ್ತಿಕ್ಭಾರತ vs ಇಂಗ್ಲೆಂಡ್: ಸಿರಾಜ್ ನಡೆದುಕೊಂಡ ರೀತಿ ಸರಿಯಲ್ಲ ಎಂದು ಬುದ್ಧಿ ಹೇಳಿದ ದಿನೇಶ್ ಕಾರ್ತಿಕ್

* ಇನ್ನು ಮುಂದುವರೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ಚೆನ್ನೈನಿಂದ ದುಬೈಗೆ ಪ್ರಯಾಣ ಬೆಳೆಸಲು ಬಂದಿರುವ ಎಂಎಸ್ ಧೋನಿ ಚೆನ್ನೈ ನಗರದಲ್ಲಿ ವಿಜಯ್ ಅಭಿನಯದ ಬೀಸ್ಟ್ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ತಮಿಳು ನಟ ವಿಜಯ್ ಮತ್ತು ಮಹೇಂದ್ರ ಸಿಂಗ್ ಧೋನಿ ಪರಸ್ಪರ ಭೇಟಿಯಾಗಿದ್ದು ಮಾತನಾಡಿದ್ದಾರೆ. ಇಬ್ಬರ ಈ ಚಿತ್ರಗಳು ಇಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡುವ ಆಸೆ ವ್ಯಕ್ತಪಡಿಸಿದ ರವೀಂದ್ರ ಜಡೇಜಾಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡುವ ಆಸೆ ವ್ಯಕ್ತಪಡಿಸಿದ ರವೀಂದ್ರ ಜಡೇಜಾ

* ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿತ್ತು ಮೊದಲ ದಿನದಾಟದಂತ್ಯಕ್ಕೆ ಅಜೇಯ 127 ರನ್ ಬಾರಿಸಿದ್ದಾರೆ. ಈ ಮೂಲಕ ಕೆಎಲ್ ರಾಹುಲ್ ತಮ್ಮ ಟೆಸ್ಟ್ ಕ್ರಿಕೆಟ್‌ನ ಆರನೇ ಶತಕವನ್ನು ಬಾರಿಸಿದಂತಾಗಿದೆ ಹಾಗೂ ಇಂಗ್ಲೆಂಡ್ ವಿರುದ್ಧ ಕೆಎಲ್ ರಾಹುಲ್ ಬಾರಿಸಿರುವ ಮೂರನೇ ಟೆಸ್ಟ್ ಶತಕ ಇದಾಗಿದೆ.

ಭಾರತ vs ಇಂಗ್ಲೆಂಡ್, ದ್ವಿತೀಯ ಟೆಸ್ಟ್‌: ಕೆಎಲ್ ರಾಹುಲ್ ಶತಕದಾಟಭಾರತ vs ಇಂಗ್ಲೆಂಡ್, ದ್ವಿತೀಯ ಟೆಸ್ಟ್‌: ಕೆಎಲ್ ರಾಹುಲ್ ಶತಕದಾಟ

* ಕಳೆದ 4 ಟೆಸ್ಟ್ ಇನ್ನಿಂಗ್ಸ್‌ನಲ್ಲಿ 40ರ ಗಡಿ ದಾಟುವಲ್ಲಿ ವಿಫಲರಾಗಿ ಟ್ರೋಲಿಗರಿಗೆ ಆಹಾರವಾಗಿದ್ದ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆಟವನ್ನು ಆಡುವುದರ ಮೂಲಕ ಲಯ ಕಂಡುಕೊಂಡಿದ್ದಾರೆ. ಕೆಎಲ್ ರಾಹುಲ್ ಜತೆ ಆರಂಭಿಕರಾಗಿ ಬಂದ ರೋಹಿತ್ ಶರ್ಮಾ 145 ಎಸೆತಗಳಲ್ಲಿ 83 ರನ್ ಬಾರಿಸಿ ಮಿಂಚಿದರು. ಹೀಗೆ ರೋಹಿತ್ ಶರ್ಮಾ ನರ್ವಸ್ ಥರ್ಟಿ ಎದುರಿಸುತ್ತಿದ್ದಾರೆ ಎಂದು ಟೀಕಿಸುತ್ತಿದ್ದವರಿಗೆ ರೋಹಿತ್ ಶರ್ಮಾ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ.

ಭಾರತ vs ಇಂಗ್ಲೆಂಡ್: ಸಿರಾಜ್ ನಡೆದುಕೊಂಡ ರೀತಿ ಸರಿಯಲ್ಲ ಎಂದು ಬುದ್ಧಿ ಹೇಳಿದ ದಿನೇಶ್ ಕಾರ್ತಿಕ್ಭಾರತ vs ಇಂಗ್ಲೆಂಡ್: ಸಿರಾಜ್ ನಡೆದುಕೊಂಡ ರೀತಿ ಸರಿಯಲ್ಲ ಎಂದು ಬುದ್ಧಿ ಹೇಳಿದ ದಿನೇಶ್ ಕಾರ್ತಿಕ್

* ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿ ನಿರತರಾಗಿರುವ ಭಾರತ ತಂಡದ ಆಲ್ ರೌಂಡರ್ ರವೀಂದ್ರ ಜಡೇಜಾ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಕುರಿತು ಮಾತನಾಡಿದ್ದು ಅತ್ಯುತ್ತಮ ಆಟವನ್ನಾಡಿ ಟೀಮ್ ಇಂಡಿಯಾಗೆ ಟಿ ಟ್ವೆಂಟಿ ವಿಶ್ವ ಕಪ್ ಗೆಲ್ಲಿಸಿಕೊಡುವುದು ನನ್ನ ಗುರಿ ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ.

69 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದ ರೋಹಿತ್-ರಾಹುಲ್ ಜೊತೆಯಾಟ | Oneindia Kannada

* ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದು ಇದೀಗ ಕರ್ನಾಟಕದ ಮತ್ತೋರ್ವ ಬ್ಯಾಟ್ಸ್‌ಮನ್‌ ಮಯಾಂಕ್ ಅಗರ್ವಾಲ್ ಅವರಿಗೆ ಟೀಮ್ ಇಂಡಿಯಾ ತಂಡದಲ್ಲಿ ಅವಕಾಶ ಪಡೆದುಕೊಳ್ಳಲು ಅಡ್ಡಿಯನ್ನುಂಟು ಮಾಡುವ ಸಾಧ್ಯತೆ ಇದೆ ಎಂಬಂತೆ ಕಾಣುತ್ತಿದೆ. ಹೌದು ಮಯಾಂಕ್ ಅಗರ್ವಾಲ್ ಬದಲು ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಕೆಎಲ್ ರಾಹುಲ್ ಮೊದಲನೇ ಟೆಸ್ಟ್ ಪಂದ್ಯ ಮತ್ತು ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದು ಮುಂದಿನ ಪಂದ್ಯಗಳಲ್ಲಿ ಮಯಂಕ್ ಅಗರವಾಲ್ ಅವರಿಗೆ ಅವಕಾಶ ಸಿಗುವುದು ಸುಲಭದ ಮಾತಲ್ಲ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, August 12, 2021, 23:03 [IST]
Other articles published on Aug 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X