ಕ್ರಿಕೆಟ್ ಜಗತ್ತಿನಲ್ಲಿ ಆಗಸ್ಟ್ 31ರಂದು ನಡೆದದ್ದೇನು?

ಆಗಸ್ಟ್ 31 ರ ಮಂಗಳವಾರದಂದು ಕ್ರಿಕೆಟ್‌ ಜಗತ್ತಿನಲ್ಲಿ ಹಲವಾರು ಪ್ರಮುಖ ಘಟನೆಗಳು ನಡೆದಿದ್ದು, ಒಂದೆಡೆ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡೇಲ್ ಸ್ಟೇನ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯವನ್ನು ಹೇಳಿದ್ದರೆ, ಮತ್ತೊಂದೆಡೆ 8 ತಂಡಗಳನ್ನು ಹೊಂದಿರುವ ಐಪಿಎಲ್‌ನಲ್ಲಿ ಮುಂದಿನ ಆವೃತ್ತಿಗಾಗಿ ಮತ್ತೆರಡು ತಂಡಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು ಈ ಹೊಸ ತಂಡಗಳಿಗೆ ಬಿಸಿಸಿಐ 2000 ಕೋಟಿ ರೂಪಾಯಿ ಮೂಲ ಬೆಲೆಯನ್ನು ನಿಗದಿಪಡಿಸಿದೆ, ಈ ಬಿಡ್ಡಿಂಗ್‌ನ ಅಂತ್ಯದಲ್ಲಿ ಎರಡು ತಂಡಗಳ ಮಾರಾಟದಿಂದ ಕನಿಷ್ಠ 5000 ಕೋಟಿ ರೂಪಾಯಿ ಲಾಭಗಳಿಸುವ ನಿರೀಕ್ಷೆಯನ್ನು ಹೊಂದಿದೆ. ಹೀಗೆ ಆಗಸ್ಟ್ 31ರ ಮಂಗಳವಾರದಂದು ಕ್ರಿಕೆಟ್‌ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿದ್ದು ಅವುಗಳ ಕಿರುನೋಟ ಈ ಕೆಳಕಂಡಂತಿದೆ ನೋಡಿ..

ಐಪಿಎಲ್ 2021: ಹೊಸ ಆಟಗಾರರ ಸೇರ್ಪಡೆಯ ನಂತರ ಎಲ್ಲಾ 8 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿಐಪಿಎಲ್ 2021: ಹೊಸ ಆಟಗಾರರ ಸೇರ್ಪಡೆಯ ನಂತರ ಎಲ್ಲಾ 8 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ

* ಐಪಿಎಲ್ 14ನೇ ಆವೃತ್ತಿಯ ಉಳಿದ ಪಂದ್ಯಗಳ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಮಧ್ಯೆ ಬಿಸಿಸಿಐ 2022ರ ಐಪಿಎಲ್‌ಗೆ 2 ಹೊಸ ತಂಡಗಳನ್ನು ಸೇರ್ಪಡೆಗೊಳಿಸಲು ಅಂತಿಮ ಹಂತದ ಸಿದ್ಧತೆಯನ್ನು ನಡೆಸುತ್ತಿದೆ. ಎರಡು ಹೊಸ ತಂಡಗಳ ಹರಾಜಿಗೆ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದ್ದು ಮೂಲಬೆಲೆಯನ್ನು ಕೂಡ ನಿಗದಿಪಡಿಸಲಾಗಿದೆ. ಈಗಾಗಲೇ 8 ತಂಗಳನ್ನು ಹೊಂದಿರುವ ಐಪಿಎಲ್‌ನಲ್ಲಿ ಮುಂದಿನ ಆವೃತ್ತಿಗಾಗಿ ಮತ್ತೆರಡು ತಂಡಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಈ ಹೊಸ ತಂಡಗಳಿಗೆ ಬಿಸಿಸಿಐ 2000 ಕೋಟಿ ರೂಪಾಯಿ ಮೂಲ ಬೆಲೆಯನ್ನು ನಿಗದಿಪಡಿಸಿದೆ. ಈ ಬಿಡ್ಡಿಂಗ್‌ನ ಅಂತ್ಯದಲ್ಲಿ ಎರಡು ತಂಡಗಳ ಮಾರಾಟದಿಂದ ಕನಿಷ್ಠ 5000 ಕೋಟಿ ರೂಪಾಯಿ ಲಾಭಗಳಿಸುವ ನಿರೀಕ್ಷೆಯನ್ನು ಹೊಂದಿದೆ ಬಿಸಿಸಿಐ.

* ವಿರಾಟ್ ಕೊಹ್ಲಿ ಸದ್ಯ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಸತತವಾಗಿ ಎಡವುತ್ತಿದ್ದು ಸಮಸ್ಯೆಗೆ ಸಿಲುಕಿಹಾಕಿಕೊಂಡಿದ್ದಾರೆ. ಈ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ವಿರಾಟ್ ಕೊಹ್ಲಿ ರೋಷಾವೇಶದ ಗುಣವೇ ಅವರನ್ನು ಸಮಸ್ಯೆಗೆ ಸಿಲುಕಿಸುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ವೇಳೆ ಇಂಗ್ಲೆಂಡ್ ತಂಡದ ಬೌಲರ್‌ಗಳ ವಿರುದ್ಧ ತಾಂತ್ರಿಕವಾಗಿ ಬ್ಯಾಟ್ ಬೀಸುವ ಬದಲಾಗಿ ಹಿಡಿತವನ್ನು ಸಾಧಿಸಲು ಮುಂದಾಗುತ್ತಿದ್ದಾರೆ. ಹೀಗಾಗಿಯೇ ವಿರಾಟ್ ಕೊಹ್ಲಿ ಒಳ್ಳೆಯ ಹೊಡೆತವನ್ನು ಬಾರಿಸದೆ ಕ್ಯಾಚ್ ನೀಡಿ ಔಟ್ ಆಗುತ್ತಿದ್ದಾರೆ ಎಂದು ಇರ್ಫಾನ್ ಪಠಾಣ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

* ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮಗೋಷ್ಠಿಯಲ್ಲಿ ಜೋ ರೂಟ್ ಮಾತನಾಡಿದ್ದು ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ತಮ್ಮ ತಂಡ ಸುಮ್ಮನಾಗಯವಂತೆ ಮಾಡಬೇಕು. ಹಾಗಿದ್ದಾಗ ಮಾತ್ರವೇ ತಮಗೆ ಯಶಸ್ಸು ಗಳಿಸಲು ಸಾಧ್ಯವಿದೆ ಎಂದಿದ್ದಾರೆ ಜೋ ರೂಟ್.

* ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್‌ಸಿಎ) ಫಸ್ಟ್ ಡಿವಿಶನ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ರಾಜಾಜಿನಗರ ಕ್ರಿಕೆಟರ್ಸ್ ಕ್ಲಬ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ನಾಯಕ ನಿಹಾಲ್ ಉಲ್ಲಾಳ್ ಮತ್ತು ಬೌಲರ್ ಶರತ್ ಎಚ್‌ಎಚ್ ಅಮೋಘ ಆಟದ ನೆರವಿನಿಂದ ರಾಜಾಜಿನಗರ ಕ್ರಿಕೆಟರ್ಸ್ ಚಾಂಪಿಯನ್ಸ್ ಆಗಿ ಮಿನುಗಿದೆ. ಲೀಗ್‌ನಲ್ಲಿ ನಡೆದ ಒಟ್ಟು 11 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದಿರುವ ರಾಜಾಜಿನಗರ ಕ್ರಿಕೆಟರ್ಸ್ ಟೂರ್ನಿಯ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ.

* ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ತಮ್ಮ ತಂಡದ ಆಟಗಾರರಿಗೆ ವಿಶ್ರಾಂತಿ ನೀಡುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಇಂಗ್ಲೆಂಡ್ ತಂಡದ ಹೆಡ್ ಕೋಚ್ ಕ್ರಿಸ್ ಸಿಲ್ವರ್‌ವುಡ್ ಭಾರತದ ವಿರುದ್ಧ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರನ್ನು ತಂಡದಿಂದ ಹೊರಗಿಡುವ ಸುಳಿವನ್ನು ನೀಡಿದ್ದಾರೆ. ಪ್ರಸ್ತುತ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಆಟಗಾರರನ್ನು ನಾಲ್ಕನೇ ಟೆಸ್ಟ್ ಪಂದ್ಯದಿಂದ ಕೈಬಿಟ್ಟು ವಿಶ್ರಾಂತಿ ನೀಡುವುದಾಗಿ ಕ್ರಿಸ್ ಸಿಲ್ವರ್‌ವುಡ್ ತಿಳಿಸಿದ್ದಾರೆ. ಇಂಗ್ಲೆಂಡ್ ತಂಡದ ಹೆಡ್ ಕೋಚ್ ಕ್ರಿಸ್ ಸಿಲ್ವರ್‌ವುಡ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಜೇಮ್ಸ್ ಆ್ಯಂಡರ್ಸನ್ ಅವರನ್ನು ನಾಲ್ಕನೇ ಟೆಸ್ಟ್ ಪಂದ್ಯದಿಂದ ಕೈಬಿಟ್ಟು ವಿಶ್ರಾಂತಿ ನೀಡುವ ಚಿಂತನೆಯಲ್ಲಿ ಇರುವುದನ್ನು ತಿಳಿಸಿದ್ದಾರೆ.

ಭಾರತ vs ಇಂಗ್ಲೆಂಡ್: ಓವಲ್ ಅಂಗಳದಲ್ಲಿ ಭಾರತಕ್ಕಿದೆ ಅತಿ ಕೆಟ್ಟ ಇತಿಹಾಸ, ಕಳಪೆ ಪಂದ್ಯಗಳ ಪಟ್ಟಿ ಇಲ್ಲಿದೆಭಾರತ vs ಇಂಗ್ಲೆಂಡ್: ಓವಲ್ ಅಂಗಳದಲ್ಲಿ ಭಾರತಕ್ಕಿದೆ ಅತಿ ಕೆಟ್ಟ ಇತಿಹಾಸ, ಕಳಪೆ ಪಂದ್ಯಗಳ ಪಟ್ಟಿ ಇಲ್ಲಿದೆ

ಟೀಮ್ ಇಂಡಿಯಾವನ್ನ ಹೇಗೆ ಕಟ್ಟಿಹಾಕ್ಬೇಕು ಅಂತ ನಮ್ಗೆ ಚನ್ನಾಗಿ ಗೊತ್ತು | Oneindia Kannada

* ಭಾರತ ಕಂಡ ಅತ್ಯಂತ ಪ್ರತಿಭಾನ್ವಿತ ವೇಗಿಗಳಲ್ಲಿ ಕರ್ನಾಟಕದ ಜಾವಗಲ್ ಶ್ರೀನಾಥ್ ಅಗ್ರಗಣ್ಯರು ಎಂಬುದರಲ್ಲಿ ಅನುಮಾನವಿಲ್ಲ. ಸ್ಪಿನ್‌ ಬೌಲರ್‌ಗಳನ್ನೇ ನೆಚ್ಚಿಕೊಂಡಿದ್ದ ಭಾರತ ತಂಡಕ್ಕೆ ವೇಗದ ಬೌಲಿಂಗ್‌ನ ಮೂಲಕ ಶಕ್ತಿಯನ್ನು ತುಂಬುದವರು ಈ ಕನ್ನಡಿಗ. ನಿರಂತರವಾಗಿ 140 ಕಿ.ಮೀ ಗೂ ವೇಗದಲ್ಲಿ ಸತತವಾಗಿ ಚೆಂಡನ್ನು ಎಸೆಯುವ ಸಾಮರ್ಥ್ಯವನ್ನು ಹೊಂದಿದ್ದರು ಶ್ರೀನಾಥ್. ಪ್ರಸಕ್ತ ಮ್ಯಾಚ್ ರೆಫ್ರಿಯಾಗಿ ಬ್ಯುಸಿಯಾಗಿರುವ ಶ್ರೀನಾಥ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 31, 2021, 22:51 [IST]
Other articles published on Aug 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X