For Quick Alerts
ALLOW NOTIFICATIONS  
For Daily Alerts
 

ಮತ್ತೆ ಮುಗ್ಗರಿಸಿದ ಕೊಹ್ಲಿ, ದ.ಆಫ್ರಿಕಾ ಗೆಲ್ಲಲು 211 ರನ್ ಬೇಕು: ಡಿಸೆಂಬರ್ 29ರ ಕ್ರಿಕೆಟ್ ರೌಂಡ್ಅಪ್

What happened in the cricket world on December 29

ಡಿಸೆಂಬರ್ 29ರ ಬುಧವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವು ವಿದ್ಯಮಾನಗಳು ಜರುಗಿದ್ದು ಒಂದೆಡೆ ಭಾರತ ಮತ್ತು ದ.ಆಫ್ರಿಕಾ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಮುಕ್ತಾಯವಾಗಿದ್ದು ದ. ಆಫ್ರಿಕಾಗೆ ಗೆಲ್ಲಲು 211 ರನ್‌ಗಳ ಅಗತ್ಯವಿದೆ. ಮತ್ತೊಂದೆಡೆ ಹಾಬರ್ಟ್ ಹರಿಕೇನ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ನಡುವೆ ನಡೆದ ಬಿಗ್ ಬ್ಯಾಷ್ ಲೀಗ್‌ನ ಪಂದ್ಯದಲ್ಲಿ ಹಾಬರ್ಟ್ ಹರಿಕೇನ್ಸ್ 85 ರನ್‌ಗಳ ಬೃಹತ್ ಗೆಲುವನ್ನು ದಾಖಲಿಸಿದೆ. ಹೀಗೆ ಡಿಸೆಂಬರ್ 29ರ ಕ್ರಿಕೆಟ್ ಸುದ್ದಿಗಳ ರೌಂಡ್ಅಪ್ ಈ ಕೆಳಕಂಡಂತಿದೆ.

* ಅಭಿಮಾನಿಯೋರ್ವ ಮುಂಬರುವ ಹರಾಜಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗೆ ಹರಾಜಾಗುವ ಸಾಧ್ಯತೆ ಇದೆಯಾ ಎಂದು ವಾರ್ನರ್‌ಗೆ ಪ್ರಶ್ನೆ ಹಾಕಿದ್ದಾನೆ. ಈ ಪ್ರಶ್ನೆಗೆ ಉತ್ತರಿಸಿದ ಡೇವಿಡ್ ವಾರ್ನರ್‌ ಅನುಮಾನ ಎಂದು ಪ್ರತಿಕ್ರಿಯಿಸಿದ್ದಾರೆ. ಹೀಗೆ ಸನ್ ರೈಸರ್ಸ್ ಹೈದರಾಬಾದ್ ಕುರಿತು ಡೇವಿಡ್ ವಾರ್ನರ್‌ ನೀಡಿರುವ ಪ್ರತಿಕ್ರಿಯೆ ಕುರಿತು ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ. ಫ್ರಾಂಚೈಸಿಯೊಂದು ತನ್ನನ್ನು ಉಳಿಸಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಫ್ರಾಂಚೈಸಿಯ ವಿರುದ್ಧ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

* ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿರುವ ವಿರಾಟ್ ಕೊಹ್ಲಿ ಮತ್ತೆ ಅದೇ ತಪ್ಪನ್ನು ಮಾಡಿದ್ದು ಆಫ್ ಸೈಡ್ ಎಸೆತಕ್ಕೆ ಹೊಡೆತ ಬಾರಿಸಲು ಹೋಗಿ ಔಟ್ ಆಗಿದ್ದಾರೆ. ಮಾರ್ಕೋ ಜೆನ್ಸೆನ್ ಎಸೆದ ಆಫ್ ಸೈಡ್ ಬಾಲನ್ನು ಹೊಡೆಯಲು ಹೋದ ವಿರಾಟ್ ಕೊಹ್ಲಿ ವಿಫಲರಾಗಿ ಕ್ವಿಂಟನ್ ಡಿ ಕಾಕ್ ಅವರಿಗೆ ಕ್ಯಾಚ್ ನೀಡಿ 18 ರನ್ ಗಳಿಸಿ ಔಟ್ ಆಗಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಆಫ್‌ಸೈಡ್ ಎಸೆತವನ್ನು ಹೊಡೆಯಲು ಹೋಗಿ ಎಡವಿದ್ದಾರೆ. ಹೀಗೆ ಪದೇ ಪದೇ ಆಫ್‌ಸೈಡ್ ಎಸೆತಗಳ ಎದುರು ಸೋಲುತ್ತಿರುವ ವಿರಾಟ್ ಕೊಹ್ಲಿ ಕುರಿತಾಗಿ ನೆಟ್ಟಿಗರು ಟೀಕೆಗಳನ್ನು ಮಾಡಿದ್ದಾರೆ.

* ಹೀಗೆ ವಿರಾಟ್ ಕೊಹ್ಲಿ ಮತ್ತೊಮ್ಮೆ ಆಫ್ ಸೈಡ್ ಎಸೆತವನ್ನು ಸರಿಯಾದ ರೀತಿ ಎದುರಿಸಲಾಗದೇ ಔಟ್ ಆಗಿರುವ ಕುರಿತು ನೆಟ್ಟಿಗರು ಹಾಗೂ ಹಲವಾರು ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದರೆ ಒಂದೆಡೆ ವಿಕೆಟ್ ಒಪ್ಪಿಸಿದ ನಂತರ ಪೆವಿಲಿಯನ್ ತಲುಪಿದ ವಿರಾಟ್ ಕೊಹ್ಲಿ ತಮ್ಮ ಔಟ್ ಕುರಿತು ತಾವೇ ಬೇಸರಕ್ಕೊಳಗಾಗಿದ್ದಾರೆ. ವಿಕೆಟ್ ಒಪ್ಪಿಸಿದ ನಂತರ ವಿರಾಟ್ ಕೊಹ್ಲಿ ಪೆವಿಲಿಯನ್ ತಲುಪಿ ತಮ್ಮ ವಿಕೆಟ್ ಕುರಿತು ಯೋಚಿಸುತ್ತಾ ನಿಂತಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಚಿತ್ರದ ಕುರಿತು ಭಿನ್ನ ವಿಭಿನ್ನ ಬರಹಗಳನ್ನು ಟ್ವಿಟ್ಟರ್ ಮೂಲಕ ಬರೆದುಕೊಂಡು ಟ್ವೀಟ್ ಮಾಡುತ್ತಿದ್ದಾರೆ.

* ಸೆಂಚುರಿಯನ್ ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಇನ್ನು ಕೇವಲ 6 ವಿಕೆಟ್‌ ಗಳಷ್ಟೇ ಬಾಕಿ ಉಳಿದಿದೆ. ಟೀಂ ಇಂಡಿಯಾ ನೀಡಿರುವ 305ರನ್‌ಗಳ ಗುರಿ ಬೆನ್ನತ್ತಿರುವ ದಕ್ಷಿಣ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 94 ರನ್‌ ಕಲೆಹಾಕಿದೆ. ದಕ್ಷಿಣ ಆಫ್ರಿಕ ಗೆಲುವಿಗೆ ಇನ್ನೂ 211ರನ್ ಬಾಕಿ ಉಳಿದಿದೆ. ಅದೇ ಭಾರತ ಗೆಲುವಿಗೆ ಇನ್ನು 6 ವಿಕೆಟ್‌ಗಳಷ್ಟೇ ಬಾಕಿ ಉಳಿದಿದೆ.

* ಖಾಸಗಿ ವೆಬ್‌ಸೈಟ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಗುರಿಯನ್ನು ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಟೆಸ್ಟ್ ಸರಣಿಯಲ್ಲಿ ಭಾರತವನ್ನು ಭಾರತದ ನೆಲದಲ್ಲಿ ನಾವು ಈವರೆಗೆ ಗೆದ್ದಿಲ್ಲ. ಅದು ಸಾಧ್ಯವಾದರೆ ಬಹಳ ಸಂತೋಷವಾಗಲಿದೆ ಎಂದು ಹೇಳಿದ್ದಾರೆ. ಇನ್ನು 2023ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಆಶಸ್ ಸರಣಿಯನ್ನು ಕೂಡ ಗೆಲ್ಲುವ ಗುರಿ ಹೊಂದಿರುವುದಾಗಿ ಡೇವಿಡ್ ವಾರ್ನರ್ ಹೇಳಿಕೊಂಡಿದ್ದಾರೆ.

Story first published: Wednesday, December 29, 2021, 23:19 [IST]
Other articles published on Dec 29, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+