For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯಕ್ಕಾಗಿ ಟೀಮ್ ಇಂಡಿಯಾ ಕಸರತ್ತು: ನ.16ರ ಕ್ರಿಕೆಟ್‌ ಸುದ್ದಿಗಳು

What happened in the cricket world on November 16

ನವೆಂಬರ್‌ 16ರ ಮಂಗಳವಾರದಂದು ಕ್ರಿಕೆಟ್‌ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿದ್ದು ಒಂದೆಡೆ ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಟಿ20 ಸರಣಿಯಿಂದ ನ್ಯೂಜಿಲೆಂಡ್‌ ತಂಡದ ನಾಯಕ ಕೇನ್ ವಿಲಿಯಮ್ಸನ್ ಹೊರಗುಳಿದಿದ್ದು ಟಿಮ್ ಸೌಥಿ ನಾಯಕ ಈ ಸರಣಿಯಲ್ಲಿ ನಾಯಕನಾಗಿ ನ್ಯೂಜಿಲೆಂಡ್‌ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ನ್ಯೂಜಿಲೆಂಡ್‌ ಕ್ರಿಕೆಟ್ ಪ್ರಕಟಿಸಿದ್ದರೆ, ಮತ್ತೊಂದೆಡೆ ಟೀಮ್ ಇಂಡಿಯಾ ನೂತನ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ಆಟಗಾರರಿಗೆ ತರಬೇತಿ ನೀಡುವುದರ ಮೂಲಕ ತಮ್ಮ ಕೆಲಸವನ್ನು ಆರಂಭಿಸಿದ್ದಾರೆ. ಹೀಗೆ ನವೆಂಬರ್‌ 16ರ ಕ್ರಿಕೆಟ್ ಸುದ್ದಿಗಳು ಈ ಕೆಳಕಂಡಂತಿವೆ.

* "ಡೇವಿಡ್ ವಾರ್ನರ್‌ಗೆ ನಿಸ್ಸಂಶಯವಾಗಿ, ಅವರು ಅಪ್ರತಿಮ ಟಿ20 ಆಟಗಾರರಾಗಿದ್ದಾರೆ. ಆದರೆ ವಾರ್ನರ್‌ನಂತಹವರನ್ನು ಈ ಸ್ವರೂಪದಲ್ಲಿ ಮಾತ್ರ ಗುರುತಿಸುವುದು ಅನ್ಯಾಯ. ಅವರು ಕೇವಲ ಚಾಂಪಿಯನ್ ಆಟಗಾರ. ಈ ವಿಶ್ವಕಪ್‌ಗೆ ಕಾರಣವಾದ ಅವರ ಪರಿಸ್ಥಿತಿ ಸ್ವಲ್ಪ ನಿರಾಶಾದಾಯಕವಾಗಿತ್ತು. ಸನ್ ರೈಸರ್ಸ್ ತಂಡದಿಂದ ಹೊರಗುಳಿದಿದ್ದರು. "ಆದರೆ ಅದರಲ್ಲಿ ಬಹಳಷ್ಟು ಸಮಯ ಸನ್‌ರೈಸರ್ಸ್ ಅವರು ಅರ್ಹತೆ ಗಳಿಸಲು ಸಾಧ್ಯವಾಗದ ಹಂತಕ್ಕೆ ಬಂದಿದ್ದರು. ಆದ್ದರಿಂದ ಜೇಸನ್ ರಾಯ್ ಮತ್ತು ತಂಡದಲ್ಲಿದ್ದ ಯುವ ಆಟಗಾರರಂತಹ ಆಟಗಾರರಿಗೆ ಅವಕಾಶ ಒದಗಿಸುವ ಸಂದರ್ಭವಾಗಿತ್ತು. ಇದರಿಂದಾಗಿ ವಾರ್ನರ್ ತಂಡದಿಂದ ಹೊರಬಿದ್ರು ಎಂದು ಸಂವಾದದಲ್ಲಿ ಮೂಡಿ ಹೇಳಿದರು.

* ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಆರಂಭವಾಗಲಿದ್ದು, ಮೊದಲನೇ ಟಿ ಟ್ವೆಂಟಿ ಪಂದ್ಯ ನವೆಂಬರ್‌ 17ರ ಬುಧವಾರದಂದು ರಾಜಸ್ತಾನದ ಜೈಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ಉಪನಾಯಕನಾಗಿ ಆಯ್ಕೆಯಾಗಿರುವ ಕೆ ಎಲ್ ರಾಹುಲ್ ಜೈಪುರದಲ್ಲಿ ಇರುವ ವಾಯು ಮಾಲಿನ್ಯದ ಕುರಿತಾಗಿ ಮಾತನಾಡಿದ್ದು ಕಿಡಿಕಾರಿದ್ದಾರೆ. ನಾವು ಕ್ರೀಡಾಂಗಣಕ್ಕೆ ಬಂದಿದ್ದೇವಷ್ಟೇ, ಆದರೆ ಕ್ರೀಡಾಂಗಣದಿಂದ ಹೊರಗೆ ಬಂದು ಸುತ್ತಾಡಿಲ್ಲ. ಹೀಗಾಗಿ ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣ ಎಷ್ಟಿದೆ ಎಂಬುದು ನನಗೆ ತಿಳಿದಿಲ್ಲ, ನಾನು ಕೈನಲ್ಲಿ ವಾಯುಮಾಲಿನ್ಯ ಮಾಪಕವನ್ನು ಇಟ್ಟುಕೊಂಡು ಓಡಾಡುತ್ತಿಲ್ಲ ಎಂದು ಕೆಎಲ್ ರಾಹುಲ್ ವಾಯು ಮಾಲಿನ್ಯದ ಕುರಿತು ಪತ್ರಕರ್ತ ಕೇಳಿದ ಪ್ರಶ್ನೆಗೆ ಉತ್ತರಿಸುವ ಮೂಲಕ ಕಿಡಿಕಾರಿದ್ದಾರೆ.

* ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ರೋಚಕ ಗೆಲುವು ಸಾಧಿಸಿದೆ. ಸೌರಾಷ್ಟ್ರ ವಿರುದ್ಧ ನಡೆದ ಈ ಪಂದ್ಯದಲ್ಲಿ ಅಂತಿಮ ಓವಲ್‌ನಲ್ಲಿ ಕರ್ನಾಟಕ ಪಡೆ 2 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದು ಸೌರಾಷ್ಟ್ರಕ್ಕೆ ಮನೆಯ ದಾರಿ ತೋರಿಸಿದೆ. ಕರ್ನಾಟಕ ಪರವಾಗಿ ಅಭಿನವ್ ಮನೋಹರ್ ನೀಡಿದ ಅದ್ಭುತ ಪ್ರದರ್ಶನ ಕರ್ನಾಟಕದ ಗೆಲುವಿಗೆ ಕಾರಣವಾಯಿತು. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ಕರ್ನಾಟಕಕ್ಕೆ 146 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು. ಇದನ್ನು ಬೆನ್ನಟ್ಟಿದ ಕರ್ನಾಟಕ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ ಮಧ್ಯಮ ಕ್ರಮಾಂಕದ ಆಟಗಾರ ಅಭಿನವ್ ಮನೋಹರ ಅವರ ಭರ್ಜರಿ ಪ್ರದರ್ಶನದಿಂದಾಗಿ ಕರ್ನಾಟಕ ಗೆಲುವಿನ ಭರವೆಸಯನ್ನು ಹೊಂದಿತ್ತು. ಇದಕ್ಕೆ ಪೂರಕವಾಗಿ ಅಂತಿಮ ಹಂತದವರೆಗೂ ಏಕಾಂಗಿಯಾಗಿ ಬ್ಯಾಟಿಂಗ್ ಮಾಡಿದ ಮನೋಹರ್ ತಂಡಕ್ಕೆ ಗೆಲುವನ್ನು ತಂದಿತ್ತು. ಕೊನೆಯ ಒಂದು ಎಸೆತ ಉಳಿದಿರುವಂತೆಯೇ ಕರ್ನಾಟಕ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

* ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಆಗಿ ನೇಮಕಗೊಂಡ ನಂತರ ತಂಡವನ್ನು ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯ ಮೂಲಕ ಮೊಟ್ಟಮೊದಲ ಬಾರಿಗೆ ಮುನ್ನಡೆಸಲಿದ್ದಾರೆ. ಹೀಗಾಗಿ ಈ ಪಂದ್ಯ ಆರಂಭವಾಗುವ ಮುನ್ನ ಟೀಮ್ ಇಂಡಿಯಾ ಆಟಗಾರರ ಜೊತೆ ಮೈದಾನಕ್ಕಿಳಿದಿರುವ ರಾಹುಲ್ ದ್ರಾವಿಡ್ ಆಟಗಾರರಿಗೆ ತರಬೇತಿ ನೀಡಿದ್ದಾರೆ.

{document1}

Story first published: Wednesday, November 17, 2021, 8:06 [IST]
Other articles published on Nov 17, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+