ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಕೈವಶ ಮಾಡಿಕೊಂಡ ಟೀಮ್ ಇಂಡಿಯಾ; ನ. 21ರ ಕ್ರೀಡಾ ಸುದ್ದಿಗಳು

ನವೆಂಬರ್ 21ರ ಭಾನುವಾರದಂದು ಕ್ರೀಡಾ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿದ್ದು ಒಂದೆಡೆ ನ್ಯೂಜಿಲೆಂಡ್ ವಿರುದ್ಧದ ತೃತೀಯ ಟಿ20 ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ ಕೈವಶ ಮಾಡಿಕೊಂಡಿದ್ದರೆ, ಮತ್ತೊಂದೆಡೆ ಐಎಸ್ಎಲ್ ಟೂರ್ನಿಯಲ್ಲಿನ ತನ್ನ ಮೊದಲನೇ ಪಂದ್ಯದಲ್ಲಿ ಬೆಂಗಳೂರು ಜಯಸಾಧಿಸಿದೆ. ಹೀಗೆ ನವೆಂಬರ್ 21ರ ಕ್ರೀಡಾ ಸುದ್ದಿಗಳು ಈ ಕೆಳಕಂಡಂತಿವೆ.
* ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ನವೆಂಬರ್ 21 ) ನಡೆದ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 73 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು ಭಾರತ ಸಂಪೂರ್ಣವಾಗಿ ಗೆಲ್ಲುವುದರ ಮೂಲಕ ವೈಟ್ ವಾಷ್ ಮಾಡಿ ಟಿ ಟ್ವೆಂಟಿ ವಿಶ್ವಕಪ್ ಸೋಲಿನ ಸೇಡನ್ನು ನ್ಯೂಜಿಲೆಂಡ್ ವಿರುದ್ಧ ತೀರಿಸಿಕೊಂಡಿದೆ.
*ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶ್ವ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧ ಶತಕ ಗಳಿಸಿದ ದಾಖಲೆಯನ್ನು ರೋಹಿತ್ ಶರ್ಮಾ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈವರೆಗೆ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅರ್ಧ ಶತಕ ಗಳಿಸುವ ಮೂಲಕ ರೋಹಿತ್ ಶರ್ಮಾ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಈಗ 30 ಅರ್ಧ ಶತಕ ಗಳಿಸಿ ಸಾಧನೆಯನ್ನು ಮಾಡಿದ್ದಾರೆ. ವಿರಾಟ್ ಕೊಹ್ಲಿ 29 ಅರ್ಧ ಶತಕಗಳನ್ನು ಟಿ20 ಕ್ರಿಕೆಟ್‌ನಲ್ಲಿ ಗಳಿಸಿದ್ದಾರೆ. ಈ ಸರಣಿಯಿಂದ ಕೊಹ್ಲಿ ವಿಶ್ರಾಂತಿಯನ್ನು ಪಡೆದುಕೊಂಡಿದ್ದು ಟಿ20 ವಿಶ್ವಕಪ್‌ನ ನಂತರ ಚುಟುಕು ಕ್ರಿಕೆಟ್‌ನ ನಾಯಕತ್ವ ಕೂಡ ತ್ಯಜಿಸಿದ್ದಾರೆ.
* ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಮುಕ್ತಾಯದ ಬಳಿಕ ಈ ಎರಡು ತಂಡಗಳೂ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಈ ಟಿ20 ಸರಣಿಯಲ್ಲಿ ಭಾಗವಹಿಸುವ ಸಲುವಾಗಿ ನ್ಯೂಜಿಲೆಂಡ್ ತಂಡದ ಅನುಭವಿ ಆಟಗಾರ ರಾಸ್ ಟೇಯ್ಲರ್ ಈಗಾಲೇ ಭಾರತಕ್ಕೆ ಆಗಮಿಸಿದ್ದು ಭರ್ಜರಿ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಬೌಲಿಂಗ್ ದಾಳಿಯ ವಿರುದ್ಧ ಮೇಲುಗೈ ಸಾಧಿಸಲು ವಿಶೇಷ ರಣತಂತ್ರವನ್ನು ಮಾಡಿರುವುದು ಸ್ಪಷ್ಟವಾಗಿದೆ. ಆದರೆ ಆರ್ ಅಶ್ವಿನ್ ಅವರ ವಿರುದ್ಧ ಯಾವ ರೀತಿಯ ಯೋಜನೆ ಹಾಕಿಕೊಂಡಿದ್ದೀರಿ ಎಂಬ ಪ್ರಶ್ನೆ ರಾಸ್ ಟೇಯ್ಲರ್ ಮುಂದೆ ಬಂದಾಗ ಈ ವಿಚಾರವನ್ನು ಬಹಿರಂಗಪಡಿಸಲು ಟೇಯ್ಲರ್ ನಿರಾಕರಿಸಿದ್ದಾರೆ.
* ವಿದೇಶದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದ ನಂತರ ರವಿ ಶಾಸ್ತ್ರಿ ತಂಡದ ಗೆಲುವಿನ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತಾ ಕೆಲ ಹೇಳಿಕೆಗಳನ್ನು ನೀಡಿದ್ದರು. ವಿಶ್ವದ ಶ್ರೇಷ್ಠ ತಂಡ ತಮ್ಮದು, 1983ರಲ್ಲಿ ಗೆದ್ದ ವಿಶ್ವಕಪ್‌ಗಿಂತಲೂ ಈ ಗೆಲುವು ಶ್ರೇಷ್ಠವಾದದ್ದು ಎಂಬಂತಾ ಹೇಳಿಕೆಗಳನ್ನು ಶಾಸ್ತ್ರಿ ಹೇಳಿದ್ದರು. ಇಂತಾ ಮಾತು ರವಿ ಶಾಸ್ತ್ರಿಯವರಿಂದ ಬಂದಿದ್ದು ನನಗೆ ಅಚ್ಚರಿಯುಂಟು ಮಾಡಿತ್ತು. ಅದ್ಭುತವಾಗಿ ಆಡಿ ಗೆದ್ದಂತಾ ಸಂದರ್ಭದಲ್ಲಿ ನೀವು ಅದನ್ನು ಮಾತನಾಡಬಾರದು. ಇತರರು ಮಾತನಾಡುವಂತಾಗಬೇಕು. 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ ಯಾರೂ ಕೂಡ ಈ ತಂಡ ವಿಶ್ವದ ಅತ್ಯಂತ ಬಲಿಷ್ಠ ತಂಡ ಎಂದು ಯಾರೂ ಹೇಳಿರಲಿಲ್ಲ" ಎಂದಿದ್ದಾರೆ ಗೌತಮ್ ಗಂಭೀರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications