For Quick Alerts
ALLOW NOTIFICATIONS  
For Daily Alerts
 

ಶ್ರೇಯಸ್ ಐಯ್ಯರ್ ದಾಖಲೆಯ ಶತಕ, ಮತ್ತೆ ನೆಲಕಚ್ಚಿದ ಸಹಾ: ನವೆಂಬರ್‌ 26ರ ಕ್ರಿಕೆಟ್ ಸುದ್ದಿಗಳು

What happened in the cricket world on November 26

ನವೆಂಬರ್‌ 26ರ ಶುಕ್ರವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರಗಿದ್ದು, ಒಂದೆಡೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಕಾನ್ಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಶ್ರೇಯಸ್ ಅಯ್ಯರ್ ದ್ವಿತೀಯ ದಿನದಾಟದಂದು ಶತಕ ಬಾರಿಸುವ ಮೂಲಕ ದಾಖಲೆ ಬರೆದಿದ್ದರೆ, ಮತ್ತೊಂದೆಡೆ ದಕ್ಷಿಣ ಆಫ್ರಿಕಾದಲ್ಲಿ ಕೊರೋನಾವೈರಸ್ ಹೆಚ್ಚಳವಾಗುತ್ತಿದ್ದು ಭಾರತ ಪ್ರವಾಸದ ಮೇಲೆ ಪರಿಣಾಮ ಬೀರುವ ಮುನ್ಸೂಚನೆ ಸಿಕ್ಕಿದೆ. ಹೀಗೆ ನವೆಂಬರ್‌ 26ರಂದು ಜರುಗಿದ ಕ್ರಿಕೆಟ್ ವಿದ್ಯಮಾನಗಳ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ ಓದಿ..

* ಬ್ಯಾಟಿಂಗ್‌ನಲ್ಲಿ ಮಂಕಾಗಿರುವ, ಬೌಲಿಂಗ್‌ನಲ್ಲೂ ಸಂಪೂರ್ಣ ಲಯ ಕಳೆದುಕೊಂಡಿರುವ ಹಾರ್ದಿಕ್ ಪಾಂಡ್ಯರ ಭವಿಷ್ಯ ಕ್ರಿಕೆಟ್ ವೃತ್ತಿಜೀವನ ಏನು ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. ಹೀಗಿರುವಾಗ ಹಾರ್ದಿಕ್ ಪಾಂಡ್ಯ ನಿಯಮಿತವಾಗಿ ಬೌಲಿಂಗ್ ಮಾಡದ ಕಾರಣ ಅವರನ್ನು ಆಲ್ ರೌಂಡರ್ ಎಂದು ಪರಿಗಣಿಸಬಹುದೇ ಎಂದು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಪ್ರಶ್ನಿಸಿದ್ದಾರೆ.

* ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶಗಳು ಸಿಗದೇ ಕಂಗೆಟ್ಟಿದ್ದ ವೃದ್ಧಿಮಾನ್ ಸಾಹಗೆ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ತಂಡದ ಪ್ರಮುಖ ವಿಕೆಟ್ ಕೀಪರ್ ರಿಷಭ್ ಪಂತ್ ಅಲಭ್ಯರಾದ ಕಾರಣ ಕಣಕ್ಕಿಳಿಯುವ ಅವಕಾಶ ಸಿಕ್ಕಿತ್ತು. ಹೀಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರದರ್ಶನ ನೀಡುವಲ್ಲಿ ವೃದ್ಧಿಮನ್ ಸಹಾ ಎಡವಿದ್ದು ಕೇವಲ 1 ರನ್ ಕಲೆಹಾಕಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು. ಹೀಗೆ ಈ ಇನ್ನಿಂಗ್ಸ್‌ನಲ್ಲಿ 1 ರನ್ ಗಳಿಸಿ ಕಳಪೆ ಪ್ರದರ್ಶನ ನೀಡಿರುವ ವೃದ್ದಿಮಾನ್ ಸಹಾ ವಿರುದ್ಧ ನೆಟ್ಟಿಗರು ದೊಡ್ಡ ಮಟ್ಟದಲ್ಲಿ ಕಿಡಿಕಾರಿದ್ದಾರೆ.

* ಶ್ರೇಯಸ್ ಐಯ್ಯರ್ ಅವರ ನ್ಯೂಜಿಲೆಂಡ್ ವಿರುದ್ಧದ ಸಾಧನೆಗೆ ಸಚಿನ್ ತೆಂಡೂಲ್ಕರ್ ಟ್ವಿಟ್ಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ . "ನಿಮ್ಮ ಟೆಸ್ಟ್ ವೃತ್ತಿ ಜೀವನಕ್ಕೆ ಶ್ರೇಷ್ಠವಾದ ಆರಂಭ ಶ್ರೇಯಸ್ ಐಯ್ಯರ್. ಟೀಮ್ ಇಂಡಿಯಾ ಪರವಾಗಿ ಬಿಳಿ ಜರ್ಸಿಯಲ್ಲಿ ನಿಮ್ಮನ್ನು ನೋಡಲು ಹರ್ಷವಾಗುತ್ತದೆ. ಒಳ್ಳೆಯದಾಗಲಿ" ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಶ್ರೇಯಸ್ ಐಯ್ಯರ್‌ಗೆ ಶುಭ ಹಾರೈಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿರಾಟ್ ಕೊಹ್ಲಿ "ಅದ್ಭುತವಾಗಿ ಆಡಿದ್ದೀರಿ, ಪದಾರ್ಪಣಾ ಪಂದ್ಯದಲ್ಲಿಯೇ ಶತಕ ಸಿಡಿಸಿರುವುದಕ್ಕೆ ಅಭಿನಂದನೆಗಳು ಶ್ರೇಯಸ್ ಐಯ್ಯರ್" ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.

* ಪದಾರ್ಪಣೆ ಮಾಡಿದ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿಯೇ ಶತಕವನ್ನು ಬಾರಿಸುವ ಮೂಲಕ ಶ್ರೇಯಸ್ ಅಯ್ಯರ್ ಈ ಹಿಂದೆ ತನ್ನ ಕೋಚ್ ಪ್ರವೀಣ್ ಆಮ್ರೆ ವಿಧಿಸಿದ್ದ ಷರತ್ತನ್ನು ಗೆದ್ದಿದ್ದಾರೆ. ಹೌದು, "ನೀನು ಯಾವ ದಿನ ಅಂತರರಾಷ್ಟ್ರೀಯ ಟೆಸ್ಟ್ ಶತಕವನ್ನು ಬಾರಿಸುತ್ತೀಯೋ, ಅಂದೇ ನಾನು ನಿಮ್ಮ ಮನೆಗೆ ಊಟಕ್ಕೆ ಬರುತ್ತೇನೆ. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ನನ್ನನ್ನು ಆಹ್ವಾನಿಸಬೇಡ" ಎಂದು ತರಬೇತುದಾರ ಪ್ರವೀಣ್ ಆಮ್ರೆ ಶ್ರೇಯಸ್ ಅಯ್ಯರ್ ಅವರಿಗೆ ಷರತ್ತನ್ನು ವಿಧಿಸಿದ್ದರು. ಹೀಗೆ ಈ ಹಿಂದೆ ತನ್ನ ಕೋಚ್ ಪ್ರವೀಣ್ ಆಮ್ರೆ ವಿಧಿಸಿದ್ದ ಷರತ್ತನ್ನು ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ಗೆದ್ದಿರುವ ಶ್ರೇಯಸ್ ಅಯ್ಯರ್ ಇನಿಂಗ್ಸ್ ಮುಗಿದ ಬಳಿಕ ಮಾತನಾಡಿದ್ದು "ಇಂದಿನ ಪಂದ್ಯ ಮುಗಿದ ನಂತರ, ನಿಜ ಹೇಳಬೇಕೆಂದರೆ ಪಂದ್ಯವಲ್ಲ ಇಂದಿನ ಶತಕ ಮುಗಿದ ನಂತರ ನಾನು ನನ್ನ ಕೋಚ್ ಪ್ರವೀಣ್ ಆಮ್ರೆ ಅವರಿಗೆ ಸಂದೇಶ ಕಳುಹಿಸುವುದರ ಮೂಲಕ ಊಟಕ್ಕೆ ಆಹ್ವಾನಿಸಲಿದ್ದೇನೆ" ಎಂದು ಹೇಳಿಕೆಯನ್ನು ನೀಡಿದರು.

Story first published: Friday, November 26, 2021, 23:42 [IST]
Other articles published on Nov 26, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+