Asia cup 2023: ಭಾರತ vs ಪಾಕ್ ಪಂದ್ಯ ಮಳೆಯಿಂದ ರದ್ದಾದರೆ ಏನಾಗಲಿದೆ? ಮೀಸಲು ದಿನದಲ್ಲಿ ನಡೆಯಲಿದೆಯಾ ಪಂದ್ಯ?
ಏಷ್ಯಾಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಮುಖಾಮುಖಿಯನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸುದೀರ್ಘ ಕಾಲದ ಬಳಿಕ ಏಕದಿನ ಮಾದರಿಯಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿದ್ದು ಮುಂಬರುವ ವಿಶ್ವಕಪ್ ದೃಷ್ಟಿಯಿಣದಲೂ ಈ ಪಂದ್ಯ ಮಹತ್ವ ಪಡೆದುಕೊಳ್ಳಲಿದೆ.
ಆದರೆ ಈ ಪಂದ್ಯದ ರೋಚಕತೆಗೆ ತಣ್ಣೀರೆರಚಲು ಮಳೆರಾಯ ಕಾದುಕುಳಿತಂತಿದೆ. ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಮಳೆಯ ಆತಂಕವಿದೆ ಎನ್ನುವ ಹವಾಮಾನ ವರದಿ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಹಾಗಾದರೆ ಈ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿದರೆ ಏನಾಗಲಿದೆ? ಮೀಸಲು ದಿನದಲ್ಲಿ ಈ ಪ್ರಮುಖ ಪಂದ್ಯವನ್ನು ಆಡಿಸಲಾಗುತ್ತದೆಯಾ? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಮೆಲ್ಬರ್ನ್‌ನಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಮರಣೀಯ ಗೆಲುವು ಸಾಧಿಸಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿದೆ. ಆದರೆ ಈ ಪಂದ್ಯಕ್ಕೆ ಮುನ್ನ ಪಂದ್ಯ ನಡೆಯಲಿರುವ ಕ್ಯಾಂಡಿಯಲ್ಲಿ ಮಳೆಯಾಗಲಿದೆ ಎನ್ನುವ ಮುನ್ಸೂಚನೆಯನ್ನು ನೀಡುತ್ತಿದೆ ಅಕ್ಯುವೆದರ್.
ಅಕ್ಯುವೆದರ್ ವರದಿಯಲ್ಲಿ ಏನಿದೆ?
ಅಕ್ಯುವೆದರ್ ನೀಡುತ್ತಿರುವ ಮಾಹಿತಿಯ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೂ ಸೇರಿದಂತೆ ಕ್ಯಾಂಟಿಯಲ್ಲಿ ನಡೆಯಲಿರುವ ಹೆಚ್ಚಿನ ಪ್ರಮುಖ ಪಂದ್ಯಗಳಿಗೆ ಮಳೆ ಅಡ್ಡಿಯುಂಟು ಮಾಡುವ ಆತಂಕವಿದೆ. ಭಾರತ ಹಾಗೂ ಪಾಕ್ ಪಂದ್ಯ ನಡೆಯಲಿರುವ ಸಪ್ಟೆಂಬರ್ 2ರಂದು ಹಗಲಿನ ಸಮಯದಲ್ಲಿ 94ರಷ್ಟು ಭಾಗದಲ್ಲಿ ಮಳೆಯಾಗುವ ಮುನ್ಸೂಚನೆಯಿದ್ದರೆ ರಾತ್ರಿ ಸಂದರ್ಭದಲ್ಲಿ 87% ಭಾಗದಲ್ಲಿ ಮಳೆಯಾಗುವ ಮುನ್ಸೂಚನೆಯಿದೆ.
ಸಂಜೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಮಳೆಸತತವಾಗಿ ಸುರಿಯುವ ಲಕ್ಷಣಗಳು ಇರುವುದು ಆತಂಕ ಮೂಡಿಸಿದೆ. ಹಾಗಾದರಲ್ಲಿ ಈ ಬಹು ನಿರೀಕ್ಷಿತ ಪಂದ್ಯ ಸಂಪೂರ್ಣವಾಗಿ ಮಳೆಗೆ ಆಹುತಿಯಾಗುವುದು ನಿಶ್ಚಿತ. ಕೋಟ್ಯಂತರ ಅಭಿಮಾನಿಗಳು ಕಾಯುತ್ತಿರುವ ಪಂದ್ಯ ಮಳೆಯಿಂದಾಗಿ ರದ್ದಾದರೆ ನಿರಾಸೆಯೂಂಟಾಗುವುದು ಖಂಡಿತ.
ಮೀಸಲು ದಿನ ಇದೆಯಾ?
ಭಾರತ ಹಾಗೂ ಪಾಕಿಸ್ತಾನದ ನಡುವಿನ ಈ ಪಂದ್ಯಕ್ಕೆ ಮೀಸಲು ದಿನ ಇಲ್ಲ. ಮಳೆಯಿಂದಾಗಿ ಪಂದ್ಯಕ್ಕೆ ಅವಕಾಶ ದೊರೆಯದೆ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಈ ಪಂದ್ಯದಲ್ಲಿ ಪಡೆಯುವ ಅಂಕಗಳನ್ನು ಎರಡು ತಂಡಗಳು ಕೂಡ ಹಂಚಿಕೊಳ್ಳಲಿದೆ.
ಡಕ್ವರ್ತ್ ಲೂಯಿಸ್ ನಿಯಮ ಯಾವಾಗ ಅನ್ವಯ?
ಇನ್ನು ಈ ಪಂದ್ಯದಲ್ಲಿ ಎತರಡು ತಂಡಗಳು ಕೂಡ ಕನಿಷ್ಠ 20 ಓವರ್‌ಗಳ ಪಂದ್ಯವನ್ನಾಡಲು ಅವಕಾಶ ದೊರೆತರೆ ಮಾತ್ರವೇ ಫಲಿತಾಂಶ ಕಂಡುಕೊಳ್ಳಲು ಸಾಧ್ಯ. ಮೊದಲ ಇನ್ನಿಂಗ್ಸ್‌ನಲ್ಲಿಯೇ ಪಂದ್ಯಕ್ಕೆ ಮಖೆ ಅಡ್ಡುಯುಂಟು ಮಾಡಿದರೆ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಎರಡನೇ ಇನ್ನಿಂಗ್ಸ್‌ನಲ್ಲಿ 20 ಓವರ್‌ಗಳ ಆಟದ ಬಳಿಕ ಮಳೆ ಅಡ್ಡಿಯುಂಟು ಮಾಡಿದರೆ ಮಾತ್ರ ಡಕ್ವರ್ತ್ ಲೂಯೀಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲಾಗುತ್ತದೆ.
ಇನ್ನು ಮಳೆಯಿಂದಾಗಿ ಪಂದ್ಯ ರದ್ದಾದರೆ ಎರಡು ತಂಡಗಳು ಕೂಡ ತಲಾ ಒಂದೊಂದು ಅಂಕಗಳನ್ನು ಹಂಚಿಕೊಳ್ಳಲಿದೆ. ಪಾಕಿಸ್ತಾನ ನೇಪಾಳದ ವಿರುದ್ಧ ಈಗಾಗಲೇ ಒಂದು ಪಂದ್ಯವನ್ನು ಗೆದ್ದುಕೊಂಡಿರುವ ಕಾರಣ ಮೂರು ಅಂಕಗಳೊಂದಿಗೆ ಪಾಕಿಸ್ತಾನ ಸೂಪರ್ 4 ಹಂತಕ್ಕೆ ಪ್ರವೇಶಿಸಲಿದೆ. ಇನ್ನು ಭಾರತ ಲೀಗ್ ಹಂತದ ಕೊನೆಯ ಪಂದ್ಯವನ್ನು ನೇಪಾಳದ ವಿರುದ್ಧ ಆಡಲಿದ್ದು ಅಲ್ಲಿ ಗೆದ್ದರೆ ಸೂಪರ್ 4ಗೆ ಪ್ರವೇಶ ಪಡೆಯಲಿದೆ. ಸೆಪ್ಟೆಂಬರ್ 4ರಂದು ನೇಪಾಳ ವಿರುದ್ಧ ಭಾರತ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications