ಒಂದು ವೇಳೆ 2025ರ ಚಾಂಪಿಯನ್ಸ್ ಟ್ರೋಫಿಯಿಂದ ಭಾರತ ಹಿಂದೆ ಸರಿದರೆ ಮುಂದೇನು?
1996ರಿಂದ ಪಾಕಿಸ್ತಾನ ಒಮ್ಮೆಯೂ ಐಸಿಸಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿಲ್ಲ. 2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಆತಿಥ್ಯ ವಹಿಸುವ ಅವರ ಕನಸು ನಾಶವಾಗಿತ್ತು. ಗಮನಾರ್ಹವಾಗಿ ಶ್ರೀಲಂಕಾ ವಿರುದ್ಧವೇ 10 ವರ್ಷಗಳ ನಂತರ ಪಾಕಿಸ್ತಾನ ತಂಡ ತನ್ನ ಮೊದಲ ತವರಿನ ಸರಣಿಯನ್ನು ಆಡಿತು.
ಸಾರ್ವಕಾಲಿಕ ಹೆಚ್ಚಿನ ಭದ್ರತಾ ಕಾಳಜಿಯೊಂದಿಗೆ ಚಾಂಪಿಯನ್ಸ್ ಟ್ರೋಫಿ 2025ರ ಆತಿಥ್ಯದ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಯಶಸ್ವಿಯಾಗಿದೆ. ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ತಂಡದ ಭಾಗವಹಿಸುವಿಕೆಯ ಮೇಲೆ ಪ್ರಶ್ನೆಯು ಮೂಡಿದೆ.

ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ತಮ್ಮ ಸ್ವಾತಂತ್ರ್ಯದ ನಂತರ, ಭೌಗೋಳಿಕ ಹಾಗೂ ರಾಜಕೀಯ ಉದ್ವಿಗ್ನತೆಗಳ ಮೇಲೆ ಸುದೀರ್ಘ ಪೈಪೋಟಿಯನ್ನು ಹೊಂದಿದ್ದವು ಎಂಬುದು ಗೊತ್ತಿರದ ವಿಷಯವೇನಲ್ಲ.
2008ರಲ್ಲಿ ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆಸಿದ ಆರೋಪದ ನಂತರ, ಉಭಯ ದೇಶಗಳ ನಡುವಿನ ವಿಷಯಗಳು ಮತ್ತಷ್ಟು ಉಲ್ಬಣಗೊಂಡವು. 2013ರಿಂದ ಭಾರತ ತಂಡ ಎಂದಿಗೂ ಪಾಕಿಸ್ತಾನಕ್ಕೆ ಪ್ರವಾಸ ಮಾಡಿಲ್ಲ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಗಾಗಿ ನಿಲುವು ಒಂದೇ ಆಗಿದೆ.
ಭಾರತ ಸರ್ಕಾರವು ತನ್ನ ಆಟಗಾರರನ್ನು ಗಡಿ ರಾಷ್ಟ್ರಕ್ಕೆ ಕಳುಹಿಸಲು ಉತ್ಸುಕವಾಗಿಲ್ಲ. ಇದೇ ವೇಳೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಲ್ಲ.
"ಚಾಂಪಿಯನ್ಸ್ ಟ್ರೋಫಿಯ ಸಂದರ್ಭದಲ್ಲಿ ಭಾರತ ಸರ್ಕಾರ ನಮಗೆ ಏನು ಮಾಡಬೇಕೆಂದು ಹೇಳುತ್ತದೆಯೋ ಅದನ್ನು ಮಾಡುತ್ತೇವೆ. ಭಾರತ ಸರ್ಕಾರವು ನಮಗೆ ಅನುಮತಿ ನೀಡಿದಾಗ ಮಾತ್ರ ನಾವು ನಮ್ಮ ತಂಡವನ್ನು ಕಳುಹಿಸುತ್ತೇವೆ. ಹಾಗಾಗಿ ನಾವು ಭಾರತ ಸರ್ಕಾರದ ನಿರ್ಧಾರದ ಪ್ರಕಾರ ಹೋಗುತ್ತೇವೆ," ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿರುವುದನ್ನು ಹಿಂದೂಸ್ತಾನ್ ಟೈಮ್ಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಭಾರತ ಹಿಂದೆ ಸರಿದರೆ ಶ್ರೀಲಂಕಾ ತಂಡ ಪ್ರವೇಶಿಸಿಲಿದೆ
2025ರ ಚಾಂಪಿಯನ್ಸ್ ಟ್ರೋಫಿಗಾಗಿ ಟೀಮ್ ಇಂಡಿಯಾ ನೆರೆಯ ದೇಶಕ್ಕೆ ಪ್ರಯಾಣಿಸುವುದಿಲ್ಲ ಎಂದು ಅಚಲವಾಗಿ ಉಳಿದರೆ ಮತ್ತು ಐಸಿಸಿ ತಟಸ್ಥ ಸ್ಥಳವನ್ನು ಆಯ್ಕೆ ಮಾಡದಿದ್ದರೆ, ಶ್ರೀಲಂಕಾ ತಂಡವು ಭಾರತದ ಸ್ಥಾನವನ್ನು ಆಕ್ರಮಿಸಿಕೊಳ್ಳುವುದನ್ನು ನೋಡಬಹುದು.
2025ರ ಚಾಂಪಿಯನ್ಸ್ ಟ್ರೋಫಿ ಎಂಟು ತಂಡಗಳ ನಡುವಿನ 50-ಓವರ್‌ಗಳ ಪಂದ್ಯಾವಳಿಯಾಗಿದೆ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ 2023ರ ಏಕದಿನ ವಿಶ್ವಕಪ್‌ನಲ್ಲಿ ಅವರ ಸ್ಥಾನವನ್ನು ಆಧರಿಸಿ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ.
ಒಂಬತ್ತನೇ ಸ್ಥಾನದಲ್ಲಿರುವ ಶ್ರೀಲಂಕಾ ತಂಡ ಸದ್ಯ ಪಂದ್ಯಾವಳಿಯಿಂದ ಹೊರಗುಳಿದಿದೆ. ಇದೀಗ ಭಾರತ ತಂಡವು ಪಂದ್ಯಾವಳಿಯಿಂದ ಹಿಂದೆ ಸರಿದರೆ, ಶ್ರೀಲಂಕಾ ತಂಡ ತನ್ನ ಸ್ಥಾನವನ್ನು ಆಧರಿಸಿ ಸ್ವಯಂಚಾಲಿತವಾಗಿ ಭರ್ತಿ ಮಾಡುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications