ಇದುವರೆಗಿನ ಪಂದ್ಯದಲ್ಲಿ ಆರ್‌ಸಿಬಿ ಸ್ಟ್ರೈಕ್ ಬೌಲರ್ ಯಜುವೇಂದ್ರ ಚಹಾಲ್ ಕೊಡುಗೆ ಏನು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಐದು ಪಂದ್ಯಗಳನ್ನಾಡಿ ಆರು ಪಾಯಿಂಟ್ ನೊಂದಿಗೆ ಅಂಕ ಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನದಲ್ಲಿದೆ. ಮುಂಬೈ ಮತ್ತು ಡೆಲ್ಲಿ ತಂಡ ಮೊದಲೆರಡನೇ ಸ್ಥಾನದಲ್ಲಿದೆ.
ತಂಡದ ಪ್ರಮುಖ ಬೌಲರ್, ಬಲಗೈ ಸ್ಪಿನ್ನರ್ ಯಜುವೇಂದ್ರ ಚಹಾಲ್ ನ ಇದುವರೆಗಿನ ಪಂದ್ಯದಲ್ಲಿ ಅವರ ಪರ್ಫಾರ್ಮೆನ್ಸ್ ಹೇಗಿದೆ ಎಂದು ಅವಲೋಕಿಸಿದಾಗ, ಒಂದು ಪಂದ್ಯವನ್ನು ಹೊರತು ಪಡಿಸಿದರೆ, ಮಿಕ್ಕ ಪಂದ್ಯದಲ್ಲಿ ಅಂತಹ ಕಳಪೇನೂ ಇಲ್ಲ.
ಟಿ20 ಪಂದ್ಯಗಳಲ್ಲಿ ಪ್ರಮುಖವಾಗಿರುವ ಇಕಾನಮಿ ರೇಟ್ ನಲ್ಲೂ ಚಹಾಲ್ ಬೌಲಿಂಗ್ ಉತ್ತಮವಾಗಿಯೇ ಇದೆ. ಅವರ ಬೌಲಿಂಗ್ ಅನ್ನು ಭಾರತ ತಂಡದ ಮಾಜಿ ನಾಯಕರುಗಳಾದ ಸುನಿಲ್ ಗವಾಸ್ಕರ್ ಮತ್ತು ಗೌತಂ ಗಂಭೀರ್ ಕೂಡಾ ಹೊಗಳಿದ್ದಾರೆ.
ಮೈದಾನದಲ್ಲಿ ಮತ್ತು ಪೆವಲಿಯನ್ ನಲ್ಲಿ ಲವಲವಿಕೆಯಿಂದ ಇರುವ ಚಹಾಲ್, ಇಡೀ ತಂಡದ ಅಚ್ಚುಮೆಚ್ಚಿನ ಪ್ಲೇಯರ್. ಕಳೆದ ಐದು ಪಂದ್ಯದಲ್ಲಿ ಚಹಾಲ್ ಬೌಲಿಂಗ್ ಹೇಗಿತ್ತು, ಎಷ್ಟು ವಿಕೆಟ್ ಪಡೆದುಕೊಂಡಿದ್ದಾರೆ, ಅದರ ವಿವರ ಹೀಗಿದೆ:

ಸುನಿಲ್ ಗವಾಸ್ಕರ್ ಹೇಳಿಕೆ
"ಈ ಬಾರಿಯ ಐಪಿಎಲ್ ಪಂದ್ಯಾವಳಿ, ಸ್ಪಿನ್ನರ್ ಗಳಿಗೆ ಹೆಚ್ಚಿನ ಸಹಕಾರಿಯಾಗಲಿದೆ. ಹಾಗಾಗಿ, ಆ ತಂಡದ ಪ್ರಮುಖ ಸ್ಪಿನ್ನರ್ ಮ್ಯಾಚ್ ವಿನ್ನರ್ ಆಗಲಿದ್ದಾರೆ. ಲೆಗ್ ಸ್ಪಿನ್ನರ್ ಆಗಿರುವ ಚಾಹಲ್ ಈ ಬಾರಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ" ಎಂದು ಸುನಿಲ್ ಗವಾಸ್ಕರ್ ಹೇಳಿದ್ದರು.

ಹೈದರಾಬಾದ್ ತಂಡದ ವಿರುದ್ದ ಮೂರು ವಿಕೆಟ್
ಬೆಂಗಳೂರು ತಂಡ ಆರಂಭಿಕ ಪಂದ್ಯದಲ್ಲಿ ಹೈದರಾಬಾದ್ ತಂಡದ ವಿರುದ್ದ ಹತ್ತು ರನ್ ಗಳಿಂದ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಯಜುವೇಂದ್ರ ಚಹಾಲ್ ನಾಲ್ಕು ಓವರ್ ನಲ್ಲಿ ಹದಿನೆಂಟು ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಇದಾದ ನಂತರ ಪಂಜಾಬ್ ವಿರುದ್ದದ ಪಂದ್ಯದಲ್ಲಿ ಹೀನಾಯವಾಗಿ ಸೋತರೂ, ಚಾಹಲ್, ನಾಲ್ಕು ಓವರ್ ನಲ್ಲಿ ಕೇವಲ್ 25 ರನ್ ನೀಡಿ, ಒಂದು ವಿಕೆಟ್ ಪಡೆದಿದ್ದರು.

ಮುಂಬೈ ವಿರುದ್ದದ ಪಂದ್ಯದಲ್ಲಿ ಚಹಾಲ್
ಮುಂಬೈ ವಿರುದ್ದದ ಪಂದ್ಯದಲ್ಲಿ ಬೆಂಗಳೂರು ಸೂಪರ್ ಓವರ್ಸ್ ನಲ್ಲಿ ಗೆದ್ದಿತ್ತು. ಆ ಪಂದ್ಯದಲ್ಲಿ ಮಾತ್ರ ಚಹಾಲ್ ದುಬಾರಿಯಾದರು. ನಾಲ್ಕು ಓವರ್ ನಲ್ಲಿ 48 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಇದಾದ ನಂತರ, ರಾಜಸ್ಥಾನ ಜೊತೆಗಿನ ಪಂದ್ಯದಲ್ಲಿ ನಾಲ್ಕು ಓವರ್ ನಲ್ಲಿ 24 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು.

19 ಓವರ್ ನಲ್ಲಿ 144 ರನ್ ನೀಡಿ, ಎಂಟು ವಿಕೆಟ್
ಇನ್ನು ಐದನೇ ಪಂದ್ಯದಲ್ಲಿ ಡೆಲ್ಲಿ ವಿರುದ್ದ, ಮೂರು ಓವರ್ ಬೌಲ್ ಮಾಡಿದ್ದ ಚಹಾಲ್ ವಿಕೆಟ್ ಪಡೆಯದೇ 29 ರನ್ ನೀಡಿದ್ದರು. ಒಟ್ಟಾರೆಯಾಗಿ, ಐದು ಪಂದ್ಯದಲ್ಲಿ 19 ಓವರ್ ನಲ್ಲಿ 144 ರನ್ ನೀಡಿ, ಎಂಟು ವಿಕೆಟ್ ಅನ್ನು ಪಡೆದಿದ್ದಾರೆ. ಅಂದರೆ, ಅವರ ಇಕಾನಮಿ ರೇಟ್ 7.5. ಐಪಿಎಲ್ ನಲ್ಲಿ ಇದು ಉತ್ತಮ ಇಕಾನಮಿ ರೇಟ್ ಎಂದೇ ಹೇಳಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications