IPL 2024: ಪತ್ನಿ ಮುಂದೆ ಮಿಚೆಲ್ ಸ್ಟಾರ್ಕ್ ಅದ್ಭುತ ಬೌಲಿಂಗ್;ಪಂದ್ಯ ಬಳಿಕ ಹೆಂಡ್ತಿ ಬಗ್ಗೆ ವೆಂಕಟೇಶ್ ಆಯ್ಯರ್ ಹೀಗಾ ಕೇಳೋದು
ಮೇ 3 ಶುಕ್ರವಾರ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ 12 ವರ್ಷಗಳ ನಂತರ ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಗೆಲುವು ಸಾಧಿಸಿದೆ.
ಈ ಗೆಲುವಿನ ಹೀರೋ, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಯ ಆಟಗಾರನಾಗಿರುವ ಮಿಚೆಲ್ ಸ್ಟಾರ್ಕ್ 3.5 ಓವರ್ ಗಳಲ್ಲಿ 33 ರನ್ ನೀಡಿ 4 ವಿಕೆಟ್ ಪಡೆದರು. ಇದು ಈ ಋತುವಿನ ಐಪಿಎಲ್‌ನಲ್ಲಿ ಮೊಟ್ಟ ಮೊದಲ ಅದ್ಭುತ ಸ್ಪೆಲ್ ಆಗಿದೆ. ಇದಕ್ಕೂ ಮುನ್ನ ಮಿಚೆಲ್ ಸ್ಟಾರ್ಕ್ ಸಾಕಷ್ಟು ರನ್ ಬಿಟ್ಟುಕೊಟ್ಟು ವಿಕೆಟ್ ಪಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದರು.

ಆದರೆ ಮುಂಬೈ ವಿರುದ್ಧ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ತಮ್ಮ ಫಾರ್ಮ್ ಕಂಡುಕೊಂಡರು. ಇದೇ ವೇಳೆ ವಾಂಖೆಡೆ ಸ್ಟೇಡಿಯಂನಲ್ಲಿ ಅವರ ಪತ್ನಿ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್ ಅಲಿಸ್ಸಾ ಹೈಲಿ ಕೆಕೆಆರ್ ಜೆರ್ಸಿ ತೊಟ್ಟು ಉಪಸ್ಥಿತರಿದ್ದರು. ಮಿಚೆಲ್ ಸ್ಟಾರ್ಕ್ ಅವರ ಬೌಲಿಂಗ್ ಪ್ರದರ್ಶನವನ್ನು ಅಲಿಸ್ಸಾ ಹೈಲಿ ನೋಡಿ ಆನಂದಿಸಿದರು. ಇದೀಗ ಮಿಚೆಲ್ ಸ್ಟಾರ್ಕ್ ಅವರು ತಮ್ಮ ಪತ್ನಿಯ ಮುಂದೆ ಅದ್ಬುತ ಪ್ರದರ್ಶನ ನೀಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಒಬ್ಬ ಅಭಿಮಾನಿ ತಮ್ಮ ಪ್ರೀತಿಗಾಗಿ ಜನರು ಏನಲ್ಲಾ ಮಾಡುವುದಿಲ್ಲ ಎಂದು ಬರೆದಿದ್ದಾರೆ. ಮತ್ತೊರ್ವ ಟಿ20 ವಿಶ್ವಕಪ್‌ಗೂ ಮುನ್ನ ಸ್ಟಾರ್ಕ್ ತನ್ನ ಒಂದು ಝಲಕ್ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹಂಚಿಕೊಳ್ಳುತ್ತಿರುವ ಅಭಿಪ್ರಾಯಗಳ ನಡುವೆ, ಮುಂಬೈ ವಿರುದ್ಧ ಅದ್ಭುತವಾಗಿ ಬ್ಯಾಟ್ ಮಾಡಿದ ವೆಂಕಟೇಶ್ ಅಯ್ಯರ್ ಕೂಡ ಮಿಚೆಲ್ ಸ್ಟಾರ್ಕ್ ಅನ್ನು ಅಭಿನಂದಿಸಿದ್ದಾರೆ.
ಪಂದ್ಯ ಮುಗಿದ ಬಳಿಕ ಮಿಚೆಲ್ ಸ್ಟಾಕ್ ಅವರೊಂದಿಗೆ ವೆಂಕಟೇಶ್ ಮಾತನಾಡಿರುವುದು ಸಾಕಷ್ಟು ವೈರಲ್ ಆಗಿದೆ. ಮಿಚ್ ಚೆನ್ನಾಗಿ ಬೌಲಿಂಗ್ ಮಾಡಿದೀರಾ. ಆದರೆ ನೀವು ಇಲ್ಲಿಯವರೆಗೆ ಅಲಿಸ್ಸಾ ಹೀಲಿಯನ್ನು ಎಲ್ಲಿ ಮರೆಮಾಡಿದ್ದೀರಿ ಎಂದು ನಾನು ನಿಮ್ಮನ್ನು ಕೇಳಬೇಕಾಗಿದೆ ಎಂದು ಸ್ಟಾರ್ಕ್ ಅವರಿಗೆ ವೆಂಕಟೇಶ್ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಸ್ಟಾರ್ಕ್ ಮುಗುಳ್ನಕ್ಕು, ಮೊದಲು ಅವಳು ಮನೆಯಲ್ಲಿದ್ದಳು. ಆದರೆ ಈಗ ಅವಳು ಇಲ್ಲಿಗೆ ಬಂದಿರುವುದು ಒಳ್ಳೆಯ ಸಂಕೇತ ಎಂದು ಹೇಳಿದರು.
ಐಪಿಎಲ್‌ನಲ್ಲಿ ಕೋಟಿ ಬೌಲರ್ ಪ್ರದರ್ಶನ :
ಕಳೆದ ವರ್ಷ ನಡೆದ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರಿಗೆ ಬರೋಬ್ಬರ 24.75 ಕೋಟಿ ರೂ.ಗಳನ್ನು ನೀಡಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಕರೆ ತಂದಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮಿಚೆಲ್ ಸ್ಟಾರ್ಕ್ ಅತಿ ಹೆಚ್ಚು ಬೆಲೆಗೆ ಬಿಡ್ ಆದ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಈವರೆಗೆ ಕೆಕೆಆರ್ ಪರ 9 ಪಂದ್ಯಗಳಲ್ಲಿ ಕಣಕ್ಕೀಳಿದಿರುವ ಮಿಚೆಲ್ ಸ್ಟಾರ್ಕ್ ಒಟ್ಟು 11 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ 33 ರನ್ ಬಿಟ್ಟುಕೊಟ್ಟು 4 ವಿಕೆಟ್‌ಗಳನ್ನು ಉರುಳಿಸಿರುವುದು ಮಿಚೆಲ್ ಸ್ಟಾಕ್ ಅದ್ಭುತ ಸ್ಪೆಲ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications