IPL Turning Point: ಹೈದರಾಬಾದ್ ಐತಿಹಾಸಿಕ ಗೆಲುವಿಗೆ ಕಾರಣವಾಯ್ತು ಮೆಂಡಿಸ್ ಹಿಡಿದ ಅದ್ಭುತ ಕ್ಯಾಚ್
ಐಪಿಎಲ್ 2025 ರ 43ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸನ್‌ರೈಸರ್ಸ್ ಹೈದರಾಬಾದ್ 5 ವಿಕೆಟ್‌ಗಳಿಂದ ಸೋಲಿಸಿತು. ಎಂಎಸ್ ಧೋನಿ ಪಡೆ ತವರಿನಲ್ಲಿ ಕಳಪೆ ಪ್ರದರ್ಶನ ನೀಡಿತು. ಇದರೊಂದಿಗೆ ಐಪಿಎಲ್ 2025 ರಲ್ಲಿ 7ನೇ ಸೋಲಿನೊಂದಿಗೆ ಚೆನ್ನೈ ಪ್ಲೇ ಆಫ್ ರೇಸ್‌ನಿಂದ ಹೊರಗುಳಿಯುವ ಹಂತಕ್ಕೆ ತಲುಪಿದೆ. ಅಲ್ಲದೆ, ಸಿಎಸ್‌ಕೆ ತವರಿನಲ್ಲಿ ಎದುರಿಸಿದ ಸತತ ನಾಲ್ಕನೇ ಹೀನಾಯ ಸೋಲು ಇದು.
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ (ಚೆಪಾಕ್) ಈ ಗೆಲುವು ಹೈದರಾಬಾದ್ ತಂಡಕ್ಕೆ ಐತಿಹಾಸಿಕವಾಗಿದೆ. ಏಕೆಂದರೆ ಸಿಎಸ್‌ಕೆ ತಂಡವನ್ನು ಮೊದಲ ಬಾರಿಗೆ ಚೆಪಾಕ್ ಅಂಗಳದಲ್ಲಿ ಸೋಲಿಸಿದ ದಾಖಲೆಯನ್ನು ಹೈದರಾಬಾದ್ ಮಾಡಿದೆ.

ಹೈದರಾಬಾದ್ ತಂಡದ ವೇಗಿ ಹರ್ಷಲ್ ಪಟೇಲ್ ಉರಿ ಬೌಲಿಂಗ್ ದಾಳಿಗೆ ತತ್ತರಿಸಿದ ಸಿಎಸ್‌ಕೆ ತಂಡ 154 ರನ್‌ಗಳನ್ನು ಕಲೆ ಹಾಕಿತು. ಈ ಸುಲಭ ಗುರಿ ಬೆನ್ನಟ್ಟಿದ ಬಲಿಷ್ಠ ಹೈದರಾಬಾದ್ ಪರ ಇಶಾನ್ ಕಿಶನ್ ಮತ್ತು ಕಮಿಂದು ಮೆಂಡಿಸ್ 8 ಎಸೆತಗಳು ಬಾಕಿ ಇರುವಾಗಲೇ 155 ರನ್ ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದು ಕೊಟ್ಟರು. ಆದರೆ, ಪಂದ್ಯಕ್ಕೆ ಡೆವಾಲ್ಡ್ ಬ್ರೆವಿಸ್ ಅವರ ಕ್ಯಾಚ್ ಹಿಡಿದು ಕಮಿಂದು ಮೆಂಡಿಸ್ ತಿರುವು ಕೊಟ್ಟರು.
ಚೆನ್ನೈ ಸೂಪರ್ ಕಿಂಗ್ ಮೊದಲು ಬ್ಯಾಟಿಂಗ್ ಬಂದಿತು. ಚೆನ್ನೈ ಪರ ಡೆವಾಲ್ಡ್ ಬ್ರೆವಿಸ್ ಉತ್ತಮ ಇನ್ನಿಂಗ್ಸ್ ಆಡುತ್ತಿದ್ದರು. ಆದರೆ ಲಾಂಗ್ ಆಫ್‌ನಲ್ಲಿ ಅದ್ಭುತ ಕ್ಯಾಚ್ ಹಿಡಿದ ಕಮಿಂದು ಮೆಂಡಿಸ್ ಅವರ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. ಚೆನ್ನೈ ಇನ್ನಿಂಗ್ಸ್ ವೇಳೆ ಹರ್ಷಲ್ ಪಟೇಲ್ ಎಸೆದ 13ನೇ ಓವರ್‍ನಲ್ಲಿ ಔಟಾದರು.
ಹರ್ಷಲ್ ಪಟೇಲ್ ದಾಳಿಗಿಳಿಯುವ ಮುನ್ನ ಬ್ರೆವಿಸ್ 12ನೇ ಓವರ್‍ನಲ್ಲಿ ಮೂರು ಸಿಕ್ಸರ್ ಬಾರಿಸಿ ಮಿಂಚಿದರು. ಹೀಗಾಗಿ ಹರ್ಷಲ್ ಪಟೇಲ್ ಅವರ ಓವರ್‍ನಲ್ಲಿಯೂ ತಮ್ಮ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಲು ಮುಂದಾದರು. ನಾ;ನೇ ಎಸೆತದಲ್ಲಿ ಬ್ರೆವಿಸ್ ಸಿಕ್ಸರ್ ಬಾರಿಸುವಲ್ಲಿ ಯಶಸ್ವಿಯಾದರು. ಐದನೇ ಎಸೆತದಲ್ಲಿಯೂ ಅವರು ಲಾಂಗ್ ಆಫ್ ಕಡೆಗೆ ಸಿಕ್ಸರ್ ಹೊಡೆಯಲು ಪ್ರಯತ್ನಿಸಿದರು. ಗಾಳಿಯಲ್ಲಿ ಚೆಂಡನ್ನು ಗಮನಿಸಿದ ಮೆಂಡಿಸ್ ಓಡಿ ಹೋಗಿ ಡೈವ್ ಮಾಡುವ ಮೂಲಕ ಎರಡೂ ಕೈಗಳಿಂದ ಕ್ಯಾಚ್ ಹಿಡಿದರು. ಮೆಂಡಿಸ್ ಅವರ ಈ ಅದ್ಭುತ ಕ್ಯಾಚ್ ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು.
ಡೆವಾಲ್ಡ್ ಬ್ರೆವಿಸ್ ಒಂದು ವೇಳೆ ವಿಕೆಟ್ ಕಳೆದುಕೊಳ್ಳದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತಷ್ಟು ರನ್‌ಗಳನ್ನು ಕಲೆ ಹಾಕುತ್ತಿದ್ದರು. ಚೆನ್ನೈ ಪರ ಚೊಚ್ಚಲ ಪಂದ್ಯವನ್ನು ಆಡಿದ ಬ್ರೆವಿಸ್ 25 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ನೆರವಿನಿಂದ 42 ರನ್‌ಗಳನ್ನು ಕಲೆ ಹಾಕಿದರು. ಬ್ರೆವಿಸ್ ಪಂದ್ಯಕ್ಕೆ ಮಹತ್ವದ ತಿರುವು ಕೊಟ್ಟಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications