ಟೀಂ ಇಂಡಿಯಾ ಪರ ಪದಾರ್ಪಣೆ ಮಾಡುವಾಗ, ನನ್ನಪ್ಪ ಇದ್ದಿದ್ರೆ ಚೆನ್ನಾಗಿರ್ತಿತ್ತು: ಮೊಹಮ್ಮದ್ ಸಿರಾಜ್

ಆಸ್ಟ್ರೇಲಿಯ ಪ್ರವಾಸದಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡುವ ಸಂದರ್ಭದಲ್ಲಿ ತಂದೆ ಜೊತೆಗಿದ್ದರೆ ಚೆನ್ನಾಗಿರ್ತಿತ್ತು ಎಂದು ಟೀಂ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ. ಡಿಸೆಂಬರ್ 26, 2020ರಂದು ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಸಿರಾಜ್ ಉತ್ತಮ ಪ್ರದರ್ಶನ ನೀಡಿದ್ದರು.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮೆಲ್ಬರ್ನ್ ಟೆಸ್ಟ್‌ನಲ್ಲಿ ಚೊಚ್ಚಲ ಟೆಸ್ಟ್ ಕ್ಯಾಪ್ ತೊಟ್ಟ ಸಿರಾಜ್, ಭಾರತದ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ, ದುರಂತ ಏನಂದ್ರೆ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಮೊಹಮ್ಮದ್ ಸಿರಾಜ್ ತೀರಿಕೊಂಡಿದ್ದರು. ಈ ವೇಳೆ ಅದಾಗಲೇ ಸಿರಾಜ್ ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ಸ್ಕ್ವಾಡ್‌ನಲ್ಲಿದ್ದ ಕಾರಣ ಅವರ ಅಂತ್ಯ ಸಂಸ್ಕಾರಕ್ಕೂ ಸಹ ಬರಲು ಸಾಧ್ಯವಾಗಲಿಲ್ಲ. ತಂದೆ ಆಸೆಯನ್ನ ಈಡೇರಿಸಲು ಟೀಂ ಇಂಡಿಯಾ ಜೆರ್ಸಿ ತೊಟ್ಟು ಕಣಕ್ಕಿಳಿದರು.

ಎದೆಯಲ್ಲಿ ತುಂಬಿದ ನೋವು, ಮೈಮೇಲೆ ಟೀಂ ಇಂಡಿಯಾ ಜೆರ್ಸಿ
ಎದೆಯಲ್ಲಿ ತುಂಬಾ ನೋವನ್ನು ಬಚ್ಚಿಟ್ಟುಕೊಂಡು, ಟೀಂ ಇಂಡಿಯಾ ಜೆರ್ಸಿ ತೊಟ್ಟು ಕಣಕ್ಕಿಳಿದ ಮೊಹಮ್ಮದ್ ಸಿರಾಜ್‌ಗೆ ಮೆಲ್ಬರ್ನ್ ಟೆಸ್ಟ್ ಪಂದ್ಯವನ್ನ ಎಂದೂ ಮರೆಯಲು ಸಾಧ್ಯವಿಲ್ಲ.
ಪಂದ್ಯಕ್ಕೂ ಮೊದಲು ರಾಷ್ಟ್ರಗೀತೆಯನ್ನು ಗುನುಗುವಾಗ ಕಣ್ಣಂಚಿನಲ್ಲಿ ಕಣ್ಣೀರು ಜಿನುಗಿತು.
ಇದೇ ನೋವಿನಲ್ಲಿ ಭಾರತ ಪರ ಆಡಿದ ಸಿರಾಜ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಮೆಲ್ಬರ್ನ್ ಟೆಸ್ಟ್‌ನಲ್ಲಿ ಒಟ್ಟು ಐದು ವಿಕೆಟ್ ಪಡೆದ ಹೈದ್ರಾಬಾದ್ ಬೌಲರ್ ಗಬ್ಬಾದಲ್ಲಿ ನಡೆದ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿ ತಮ್ಮ ಛಾಪು ಮೂಡಿಸಿದರು.
ರಣಜಿ 2022ರ ನಾಕೌಟ್‌ನಲ್ಲಿ ಕಣಕ್ಕಿಳಿದಿದ್ದಾರೆ ಭಾರತದ ಈ ನಾಲ್ಕು ಸ್ಟಾರ್ ಆಟಗಾರರು

ನನ್ನಪ್ಪ ಇದ್ದಿದ್ರೆ ಚೆನ್ನಾಗಿರ್ತಿತ್ತು, ಸಿರಾಜ್ ನೋವಿನ ಹೇಳಿಕೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಅಧಿಕೃತ ವೆಬ್‌ಸೈಟ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸಿರಾಜ್ ಈ ಹೇಳಿಕೆಗಳನ್ನು ನೀಡಿದ್ದಾರೆ.
''ನನ್ನ ಚೊಚ್ಚಲ ಪ್ರವಾಸ ಅತ್ಯಂತ ಕಠಿಣವಾಗಿತ್ತು. ಹಿಂದಿನ ಐಪಿಎಲ್ ವೇಳೆ ನಮ್ಮ ತಂದೆಯ ಆರೋಗ್ಯ ಹದಗೆಟ್ಟಿತ್ತು. ನಮ್ಮ ಕುಟುಂಬದ ಸದಸ್ಯರು ನನಗೆ ವಿಷಯ ತಿಳಿಸಿರಲಿಲ್ಲ. ಆಸ್ಟ್ರೇಲಿಯಕ್ಕೆ ಬಂದಿಳಿದಾಗಲೇ ಅಸಲಿ ವಿಷಯ ತಿಳಿಯಿತು. ಆಗ ಕೊರೊನಾ ನಿಯಮಗಳು ಇನ್ನಷ್ಟು ಕಠಿಣವಾಗಿದ್ದವು. ಇದರೊಂದಿಗೆ ನಾವು ಕ್ವಾರಂಟೈನ್‌ನಲ್ಲಿ ಇರಬೇಕಾಯಿತು. ನಂತರ ನಾವು ಅಭ್ಯಾಸ ಮಾಡುತ್ತಿದ್ದಾಗ ನನ್ನ ತಂದೆ ನಿಧನರಾಗಿದ್ದಾರೆ ಎಂದು ನನಗೆ ತಿಳಿಯಿತು, "ಎಂದು ಸಿರಾಜ್ ಹೇಳಿದರು.
ಸಚಿನ್ ದಾಖಲೆ ಮುರಿಯುವ ಅವಕಾಶ ಜೋ ರೂಟ್‌ಗೆ ಇದೆ: ಮೈಕಲ್ ವಾನ್ ಪ್ರತಿಕ್ರಿಯೆ

ಅಪ್ಪನ ಆಸೆ ಈಡೇರಿಸಿದೆ ಎಂದ ಸಿರಾಜ್
''ಆ ಸಮಯದಲ್ಲಿಯೇ ನಮ್ಮ ತಾಯಿ ನನ್ನೊಂದಿಗೆ ಮಾತನಾಡಿ ಅಪ್ಪನ ಆಸೆಯನ್ನು ಈಡೇರಿಸಿ ದೇಶವೇ ಹೆಮ್ಮೆ ಪಡುವಂತೆ ಮಾಡು'' ಎಂದು ಹೇಳಿದ್ದರು. ಅದೇ ನನಗೆ ಸ್ಫೂರ್ತಿ. ಆದರೆ, ಟೆಸ್ಟ್ ತಂಡದಲ್ಲಿ ಸ್ಥಾನ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಈಗಾಗಲೇ ಟೀಂ ಇಂಡಿಯಾದಲ್ಲಿ ಹಿರಿಯ ಆಟಗಾರರಿದ್ದಾರೆ. ಆದರೆ, ಎರಡನೇ ಟೆಸ್ಟ್‌ಗೂ ಮುನ್ನ ಮೊಹಮ್ಮದ್ ಶಮಿ ಗಾಯಗೊಂಡಾಗ ನನಗೆ ಅವಕಾಶ ಸಿಕ್ಕಿತು. ಇದರೊಂದಿಗೆ ನಾನು ಮೆಲ್ಬೋರ್ನ್‌ನಲ್ಲಿ ಟೆಸ್ಟ್ ಕ್ಯಾಪ್ ಪಡೆದೆ ಎಂದಿದ್ದಾರೆ.

ಗಬ್ಬಾ ಟೆಸ್ಟ್‌ನಲ್ಲಿ ಐದು ವಿಕೆಟ್ ಪಡೆದ ಬೌಲರ್
ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ ಪಡೆದ ಸಂದರ್ಭದಲ್ಲಿ ನಮ್ಮ ಅಪ್ಪ ಇದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಂಡೆ. ಭಾರತದ ಪರ ಉತ್ತಮ ಪ್ರದರ್ಶನ ನೀಡಿದ್ರೂ ಸಹ ತಂದೆ ಜೊತೆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಸಿರಾಜ್ ನೋವಿನ ಮಾತನಾಡಿದ್ದಾರೆ.
ಆದಾಗ್ಯೂ, ಅವರು ಎರಡನೇ ಟೆಸ್ಟ್‌ನಲ್ಲಿ ಒಟ್ಟು 5 ವಿಕೆಟ್‌ಗಳನ್ನು ಪಡೆದರು ಮತ್ತು ನಂತರ ಗಬ್ಬಾದಲ್ಲಿ ನಡೆದ ನಾಲ್ಕನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದರು. ಟೀಂ ಇಂಡಿಯಾ ಪರ ಅವರು ಎಂದೆಂದಿಗೂ ನೆನಪಿನಲ್ಲಿ ಉಳಿಯುವಂತೆ ಅದ್ಭುತ ಚೊಚ್ಚಲ ಪಂದ್ಯವನ್ನು ಆಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications