Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಂಎಸ್ ಧೋನಿ ಬಗ್ಗೆ ಭಾವನಾತ್ಮಕ ಘಟನೆ ಬಿಚ್ಚಿಟ್ಟ ಪಾಕಿಸ್ತಾನ ನಟಿ ಮತಿರಾ!

ಧೋನಿ ಬಗ್ಗೆ ಈ ಪಾಕಿಸ್ತಾನಿ ನಟಿ ಹೇಳಿದ್ದೇನು ಗೊತ್ತಾ..? | Oneindia Kannada
When MS Dhonis kind gesture melted Pakistani actress Mathiras heart

ನವದೆಹಲಿ, ಜುಲೈ 23: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಬರೀ ಪ್ರತಿಭೆಗಾಗಿ ಕ್ರಿಕೆಟ್ ಅಭಿಮಾನಿಗಳಿಗೆ ನೆಚ್ಚಿನ ಆಟಗಾರರಾಗಿಲ್ಲ. ಧೋನಿಯ ಅಪರೂಪದ ವ್ಯಕ್ತಿತ್ವವೂ ಅಭಿಮಾನಿಗಳ ಅತೀವ ಪ್ರೀತಿಗೆ. ಪಾಕಿಸ್ತಾನ ನಟಿಯೊಬ್ಬಳು ಧೋನಿ ಬಗ್ಗೆ ವಿವರಿಸಿದ ಘಟನೆ ಕೂಲ್ ಕ್ಯಾಪ್ಟನ್ ಮೇಲೆ ನಮಗಿರುವ ಪ್ರೀತಿ-ಗೌರವನ್ನು ಇನ್ನಷ್ಟು ಹೆಚ್ಚಿಸುವಂತಿದೆ.

ಮತಿರಾ ಮೊಹಮ್ಮದ್ ಎನ್ನುವ ಪಾಕ್ ನಟಿಯೊಬ್ಬಳು ವಿವರಿಸಿದ ಘಟನೆಯಿದು. ಇದಾಗಿದ್ದು ಏಷ್ಯಾಕಪ್‌ ಒಂದರ ವೇಳೆ ಅಂತ ಅವರೇ ಘಟನೆಯ ದಿನವನ್ನು ನೆನಪಿಸಿಕೊಳ್ಳುತ್ತಾರೆ. ಈ ಸಂಗತಿ ನಡೆದ ಬಳಿಕ ಆಕೆ ಧೋನಿಯ ಅಪ್ಪಟ ಅಭಿಮಾನಿಯಾಗಿಬಿಟ್ಟರಂತೆ.

ಮತಿರಾ ಅವರೇ ಹೇಳುವಂತೆ, ಆ ದಿನ ಮತಿರಾ ಉಳಿದಿದ್ದ ಅದೇ ಹೋಟೆಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಕ್ರಿಕೆಟಿಗರೂ ತಂಗಿದ್ದರಂತೆ. ಮತಿರಾ ಅವರು ತನ್ನ ನೆಚ್ಚಿನ ಪಾಕ್ ಕ್ರಿಕೆಟಿಗರೊಬ್ಬರ ಆಟೋಗ್ರಾಫ್ ಪಡೆಯಲು ಹೋದರಂತೆ. ಆಗ ಅದೇಕೋ ಆ ಕ್ರಿಕೆಟಿಗ ಈಕೆಗೆ ಆಟೋಗ್ರಾಫ್ ನೀಡಲು ಕಠೋರವಾಗಿ ನಿರಾಕರಿಸಿದರಂತೆ.

ಆಟೋಗ್ರಾಫ್‌ಗೆ ನಿರಾಕರಿಸಿದ್ದರಿಂದ ಮತಿರಾ ಮನಸ್ಸಿಗೆ ನೋವು ಮಾಡಿಕೊಂಡಿದ್ದನ್ನು ಗಮನಿಸಿದ ಧೋನಿ, ಈಕೆಯ ಬಳಿಗೆ ಹೋದವರೇ, 'ನಾವೂ ಕ್ರಿಕೆಟಿಗರೆ, ನಮ್ಮ ಆಟೋಗ್ರಾಫ್ ತಗೋತೀರಾ?,' ಎಂದು ಕೇಳಿದರಂತೆ. ಈಕೆ ಖುಷಿಯಿಂದ ಒಪ್ಪಿಕೊಂಡಾಗ ಧೋನಿ ತನ್ನ ಆಟೋಗ್ರಾಫ್ ನೀಡಿದ್ದರಂತೆ.

ಮತಿರಾಗೆ ಆಟೋಗ್ರಾಫ್ ನೀಡಿದ ಬಳಿಕ ಆಕೆ ಜೊತೆ ಕೂತು ಕೊಂಚ ಮಾತುಕತೆಯೂ ಆಡಿ ಆಕೆಗೆ ಸಮಾಧಾನ ಹೇಳಿದ ಧೋನಿ ಮತ್ತೆ ಅಲ್ಲಿಂದ ನಡೆದ ನಡೆದರಂತೆ. ಈ ಘಟನೆ ಬಳಿಕ ಧೋನಿ ತನ್ನ ನೆಚ್ಚಿನ ಕ್ರಿಕೆಟಿಗರಾದರು. ನಾನು ಅವರ ಅಪ್ಪಟ ಅಭಿಮಾನಿಯಾದೆ ಎಂದು ಮತಿರಾ ಮೊಹಮ್ಮದ್ ಹೇಳಿಕೊಂಡಿದ್ದಾರೆ.

Story first published: Thursday, July 25, 2019, 11:00 [IST]
Other articles published on Jul 25, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+