ಆಟೋಗ್ರಾಫ್ ಕೊಡುವ ಬದಲು ತಾನೇ ಪಡೆದುಕೊಂಡ ವಿರಾಟ್ ಕೊಹ್ಲಿ!

ಕಿಂಗ್‌ಸ್ಟನ್, ಸೆಪ್ಟೆಂಬರ್ 4: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉಳಿದೆಲ್ಲ ಆಟಗಾರರಿಗಿಂತ ಕೊಂಚ ಭಿನ್ನವೆ. ಅದು ಮೈದಾನದಲ್ಲಿರಲಿ, ಮೈದಾನದ ಹೊರಗಿರಲಿ; ಕೊಹ್ಲಿ ತನ್ನ ಭಿನ್ನ ನಡೆಗಾಗಿ ಆಗಾಗ ಗಮನ ಸೆಳೆಯುತ್ತಿರುತ್ತಾರೆ. ಮಂಗಳವಾರ (ಸೆಪ್ಟೆಂಬರ್ 3) ಕೊಹ್ಲಿ ಮತ್ತೆ ಇಂಥದ್ದೇ ವರ್ತನೆಯಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಪಂದ್ಯದ ಸಲುವಾಗಿ ಕೊಹ್ಲಿ ಎಲ್ಲಾದರೂ ಓಡಾಡುತ್ತಿದ್ದರೆ, ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು, ಆಟೋಗ್ರಾಫ್ ಪಡೆಯಲು ಅಭಿಮಾನಿಗಳು ದುಂಬಾಲು ಬೀಳೋದನ್ನು ನೋಡಿದ್ದೇವೆ. ಆದರೆ ಕೊಹ್ಲಿಯೇ ಅಭಿಮಾನಿಯ ಆಟಗ್ರಾಫ್ ಪಡೆದುಕೊಂಡಿದ್ದನ್ನು ನೋಡಿದ್ದೀರ?
ಜಮೈಕಾದ ಕಿಂಗ್ಸ್‌ನಲ್ಲಿ ವಿಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಭಾರತ 257 ರನ್‌ಗಳ ಜಯದೊಂದಿಗೆ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0ಯಿಂದ ಜಯಿಸಿತ್ತು. ಈ ಟೆಸ್ಟ್ ಪಂದ್ಯಕ್ಕಾಗಿ ಕೊಹ್ಲಿ ಸಬೀನಾ ಪಾರ್ಕ್ ಸ್ಟೇಡಿಯಂನಲ್ಲಿದ್ದಾಗ ಜಮೈಕಾದಲ್ಲಿದ್ದ ಭಾರತೀಯ ಅಭಿಮಾನಿಯೊಬ್ಬರು ಟೀಮ್ ಇಂಡಿಯಾ ನಾಯಕನ ಆಟೋಗ್ರಾಫ್ ಪಡೆಯಲು ಬಂದರು.
ಆಟೋಗ್ರಾಫ್‌ಗಾಗಿ ಬಳಿ ಬಂದ 7ರ ಪೋರನೆದರು ತರಲೆ ಮಾಡಬೇಕನ್ನಿಸಿತೋ ಏನೋ ಕೊಹ್ಲಿಗೆ. ಆತನಿಗೆ ಆಟೋಗ್ರಾಫ್ ಗೀಚುವ ಬದಲು ತಾನೇ ಆತನಿಂದ ಆಟೋಗ್ರಾಫ್ ಪಡೆದು ನಗುತ್ತಾ ಅಲ್ಲಿಂದ ನಡೆದರು. ಆ ವೇಳೆ ಕೊಹ್ಲಿ ಜೊತೆಯಿದ್ದ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ನಗು ಚೆಲ್ಲುತ್ತಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications