
ಐಪಿಎಲ್ 13ನೇ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಲೀಗ್‌ನಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯ ಗೆದ್ದಿದ್ದು, 8 ಪಾಯಿಂಟ್ಸ್ ಕಲೆಹಾಕಿದೆ.
ಯುವ ಆಟಗಾರರಿಂದ ಕೂಡಿರುವ, ಅದರಲ್ಲೂ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳೆಲ್ಲಾ ಭಾರತದವರೇ ಆಗಿದ್ದಾರೆ. ಆದರೆ ಇಷ್ಟಾದರೂ ಟೀಮ್ ಇಂಡಿಯಾದ ಹಿರಿಯ ಬ್ಯಾಟ್ಸ್‌ಮನ್ ಹಾಗೂ ಭಾರತ ಟೆಸ್ಟ್ ತಂಡದ ಉಪ ನಾಯಕ ಅಜಿಂಕ್ಯಾ ರಹಾನೆ ಅವರನ್ನು ಅಂತಿಮ 11 ರಲ್ಲಿ ಏಕೆ ಅವಕಾಶ ನೀಡುತ್ತಿಲ್ಲ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ.
ಈ ಬಗ್ಗೆ ಎಎನ್‌ಐ ಜತೆ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ಅಧಿಕಾರಿಯೊಬ್ಬರು, ಅಜಿಂಕ್ಯಾ ರಹಾನೆ ಅದ್ಭುತ ಆಟಗಾರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅವರಿಂದ ತಂಡಕ್ಕೆ ಇನ್ನಷ್ಟು ಬಲ ಬರುವುದು ಖಂಡಿತಾ ನಿಜ. ಆದರೆ, ಪೃಥ್ವಿ ಶಾ ಹಾಗೂ ಶಿಖರ್ ಧವನ್ ಇಬ್ಬರೂ ಅದ್ಭುತ ಲಯದಲ್ಲಿದ್ದಾರೆ ಎಂದು ಹೇಳಿದ್ದಾರೆ.
"ಸೋಶಿಯಲ್ ಮೀಡಿಯಾದಲ್ಲಿ ಏನು ಹೇಳಲಾಗುತ್ತದೆಯೋ ಅದು ತಂಡದ ಆಯ್ಕೆಯ ಮಾನದಂಡವಾಗಿಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ರಹಾನೆ ಅದ್ಭುತ ಆಟಗಾರ ಹಾಗೂ ಅವರ ಅನುಭವದಿಂದ ತಂಡಕ್ಕೆ ಸಾಕಷ್ಟು ನೆರವಾಗುತ್ತದೆ. ಸಾಮಾನ್ಯ ವಿಷಯವೇನೆಂದರೆ, ಶಿಖರ್ ಧವನ್ ಹಾಗೂ ಪೃಥ್ವಿ ಶಾ ಅದ್ಭುತ ಲಯದಲ್ಲಿದ್ದಾರೆ," ಎಂದಿದ್ದಾರೆ
ಯಾವುದೇ ಜೊತೆಯಾಟ ಮುರಿಯದ ಹೊರತು ನಾವು ಏನನ್ನೂ ನಿರ್ಧರಿಸಲು ಸಾಧ್ಯವಿಲ್ಲ. ಏಕೆಂದರೆ ಧವನ್ ಹಾಗೂ ಪೃಥ್ವಿ ಉತ್ತಮವಾಗಿ ಆಡುತ್ತಿರುವುದರಿಂದ ರಹಾನೆ ಇನ್ನಷ್ಟು ದಿನ ಕಾಯಬೇಕು ಎಂದು ಅಧಿಕಾರಿ ಎಎನ್‌ಐಗೆ ತಿಳಿಸಿದ್ದಾರೆ.
ಯಾವುದೂ ಮುರಿಯದ ಹೊರತು ನೀವು ಏನನ್ನೂ ಫಿಕ್ಸ್ ಮಾಡಲು ಸಾಧ್ಯವಿಲ್ಲ. ಕಳೆದ ಎರಡು ಆವೃತ್ತಿಗಳಿಂದ ಆಡುತ್ತಿರುವ ಆಟಗಾರರ ಮೇಲೆ ನಂಬಿಕೆ ಇಡಬೇಕಾಗುತ್ತದೆ. ಧವನ್ ಹಾಗೂ ಪೃಥ್ವಿ ಉತ್ತಮವಾಗಿ ಆಡುತ್ತಿರುವುದರಿಂದ ರಹಾನೆ ಇನ್ನಷ್ಟು ದಿನ ಕಾಯಬೇಕು ಎಂದು ಅಧಿಕಾರಿ ಎಎನ್‌ಐಗೆ ತಿಳಿಸಿದ್ದಾರೆ.
ಇದರ ಜೊತೆಗೆ ಅಜಿಂಕ್ಯ ರಹಾನೆಯವರನ್ನು ಸೀಸನ್‌ನ ಮಧ್ಯದಲ್ಲಿ ಬೇರೆ ತಂಡಗಳಿಗೆ ಟ್ರೇಡ್ ಮಾಡುವುದಿಲ್ಲ ಎಂಬುದನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಸ್ಪಷ್ಟಪಡಿಸಿದೆ.