ತಮ್ಮ ವೃತ್ತಿಜೀವನದ ಕೊನೆಯ ಎಸೆತದಲ್ಲಿ ವಿಕೆಟ್ ಪಡೆದ 4 ಶ್ರೇಷ್ಠ ಬೌಲರ್‌ಗಳು ಯಾರು ಗೊತ್ತೇ?
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್‌ನ ದೊಡ್ಡ ಕನಸು. ಬ್ಯಾಟರ್‌ಗಳನ್ನ ರನ್ ಗಳಿಸದಂತೆ ಕಟ್ಟಿ ಹಾಕಲು ಬೌಲರ್‌ಗಳು ವಿಭಿನ್ನ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಹಾಗೆಯೇ ಕೆಲವು ಬೌಲರ್‌ಗಳನ್ನು ಎದುರಿಸುವುದು ಬ್ಯಾಟರ್‌ಗಳಿಂದ ಸವಾಲಾಗಿದೆ.
ಕ್ರಿಕೆಟ್ ಇತಿಹಾಸದಲ್ಲಿ 4 ಶ್ರೇಷ್ಠ ಬೌಲರ್‌ಗಳಿದ್ದಾರೆ. ಅವರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಸಾಕಷ್ಟು ವಿಕೆಟ್‌ಗಳನ್ನು ಪಡೆದಿದ್ದಾರೆ. ಕುತೂಹಲಕಾರಿ ವಿಷಯವೆಂದರೆ ಈ 4 ಬೌಲರ್‌ಗಳು ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನದ ಕೊನೆಯ ಎಸೆತದಲ್ಲಿಯೂ ವಿಕೆಟ್ ಕಬಳಿಸಿರುವುದು ಅಚ್ಚರಿ. ಈ 4 ಬೌಲರ್‌ಗಳು ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಮುತ್ತಯ್ಯ ಮುರಳೀಧರನ್
ಕ್ರಿಕೆಟ್ ಇತಿಹಾಸದ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಮುತ್ತಯ್ಯ ಮುರಳೀಧರನ್ ಒಬ್ಬರು. ತಮ್ಮ ಮಾಂತ್ರಿಕ ಸ್ಪಿನ್ನ ಬೌಲಿಂಗ್‌ಗೆ ಹೆಸುವಾಸಿಯಾಗಿದ್ದರು. ಅವರ ಕಾಲದ ಎಲ್ಲಾ ದಿಗ್ಗಜ ಬ್ಯಾಟರ್‌ಗಳ ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ಯಾವುದೇ ಬ್ಯಾಟರ್ ಮುರುಳೀಧರನ್ ಅವರ ಬೌಲಿಂಗ್‌ನಲ್ಲಿ ಆಡುವುದು ಸುಲಭವಾಗಿರಲಿಲ್ಲ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 800 ಮತ್ತು ಏಕದಿನ ಕ್ರಿಕೆಟ್‌ನಲ್ಲಿ 534 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದ ಕೊನೆಯ ಎಸೆತದಲ್ಲಿ ಭಾರತದ ಪ್ರಗ್ಯಾನ್ ಓಜಾ ಅವರ ವಿಕೆಟ್ ಕಬಳಿಸಿದ್ದಾರೆ.
ಗ್ಲೆನ್ ಮೆಕ್‌ಗ್ರಾತ್
ಆಸ್ಟ್ರೇಲಿಯಾದ ಅಪಾಯಕಾರಿ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಗ್ಲೆನ್ ಮೆಕ್‌ಗ್ರಾತ್ ಆನೇಕ ದಾಖಲೆ ಬರೆದಿದ್ದಾರೆ. ತಮ್ಮ ನಿಖರವಾದ ಲೈನ್ ಲೆಂಗ್ತ್ ಬೌಲಿಂಗ್ ಶೈಲಿಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಕಣ್ಣು ಮಿಟುಕಿಸುವಷ್ಟರಲ್ಲಿ ಬ್ಯಾಟರ್‌ನನ್ನು ಔಟ್ ಮಾಡುವಂತಹ ಕೌಶಲ್ಯ ಹೊಂದಿದ್ದ ಅವರು ಆಸ್ಟ್ರೇಲಿಯಾ ಪರ ಎಲ್ಲಾ ಮೂರು ಸ್ವರೂಪಗಳನ್ನು ಆಡಿದ್ದರು.
ಮೆಕ್‌ಗ್ರಾತ್ ಎಲ್ಲಾ ಮೂರು ಮಾದರಿಗಳಿಂದ ಒಟ್ಟು 949 ವಿಕೆಟ್‌ಗಳನ್ನು ಕಬಳಿಸಿದ್ದು, ಅವರು ತಮ್ಮ ಟೆಸ್ಟ್ ವೃತ್ತಿಜೀವನದ ಕೊನೆಯ ಎಸೆತದಲ್ಲಿ ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರನ್ನು ಔಟ್ ಮಾಡಿದ್ದಾರೆ.
ರಿಚರ್ಡ್ ಹ್ಯಾಡ್ಲಿ
ಲಿರಿಚರ್ಡ್ ಹ್ಯಾಡ್ಲೀ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲೆಂಡ್ ಪರ 86 ಟೆಸ್ಟ್ ಪಂದ್ಯಗಳಲ್ಲಿ 431 ವಿಕೆಟ್ ಪಡೆದಿದ್ದಾರೆ.
ಹ್ಯಾಡ್ಲಿ ಅವರು ತಮ್ಮ ಹೆಸರಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದರು. ನಂತರ ಈ ದಾಖಲೆಯನ್ನು ಭಾರತದ ಮಾಜಿ ನಾಯಕ ಕಪಿಲ್ ದೇವ್ ಮುರಿದಿದ್ದರು. ಅವರು ತಮ್ಮ ವೃತ್ತಿಜೀವನದ ಕೊನೆಯ ಎಸೆತದಲ್ಲಿ ಇಂಗ್ಲೆಂಡ್‌ನ ಡಿ ಮಾಲ್ಕಮ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಲಸಿತ್ ಮಾಲಿಂಗ
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ "ಯಾರ್ಕರ್ ಕಿಂಗ್" ಎಂದೇ ಖ್ಯಾತರಾಗಿರುವ ಲಸಿತ್ ಮಾಲಿಂಗ ಶ್ರೀಲಂಕಾದ ದಿಗ್ಗಜ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ಬೌಲಿಂಗ್ ಆಕ್ಷನ್ ಮತ್ತು ಗುಂಗುರು ಕೂದಲಿನಿಂದ ಎಲ್ಲರ ಗಮನ ಸೆಳೆದಿದ್ದಾರೆ.
ತಮ್ಮ ನಿಖರವಾದ ಯಾರ್ಕರ್‌ನಿಂದ ಅವರು ವಿಶ್ವದ ಶ್ರೇಷ್ಠ ಬ್ಯಾಟರ್‌ಗಳ ವಿಕೆಟ್ ಪಡೆದಿದ್ದಾರೆ. ಮಾಲಿಂಗ ಕೂಡ ತಮ್ಮ ವೃತ್ತಿ ಜೀವನದ ಕೊನೆಯ ಎಸೆತದಲ್ಲಿ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಮಾಲಿಂಗ ತಮ್ಮ ಏಕದಿನ ವೃತ್ತಿಜೀವನದ ಕೊನೆಯ ಎಸೆತದಲ್ಲಿ ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್ ಅವರ ವಿಕೆಟ್ ಪಡೆದಿದ್ದಾರೆ. ಏಕದಿನದಲ್ಲಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಉರುಳಿಸಿದ ಸಾಧನೆಯನ್ನು ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications