For Quick Alerts
ALLOW NOTIFICATIONS  
For Daily Alerts
 

IPL 2025: ಗುಜರಾತ್ ಟೈಟಾನ್ಸ್ ಉಳಿಸಿಕೊಂಡ ಇಬ್ಬರು ಆಟಗಾರರು ಇವರೇ!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಟೂರ್ನಿಗೂ ಮುನ್ನ ನಡೆಯಲಿರುವ ಮೆಗಾ ಹರಾಜು ಪ್ರಕ್ರಿಯೆಗೆ ದಿನಗಳು ಆರಂಭವಾಗಿವೆ. ಐಪಿಎಲ್ ಫ್ರಾಂಚೈಸಿ ತಂಡಗಳು ಆಕ್ಟೋಬರ್ 31 ರೊಳಗೆ ಊಳಿಸಿಕೊಂಡಿರುವ ಮತ್ತು ಬಿಟ್ಟಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕಾಗಿದೆ. ಇದರ ಬೆನ್ನಲ್ಲೇ ಎಲ್ಲಾ ತಂಡಗಳಿಂದ ಬಿಗ್ ಅಪ್ಡೇಟ್‌ಗಳು ಹೊರ ಬರುತ್ತಿವೆ.

ಇದೀಗ ಗುಜರಾತ್ ಟೈಟಾನ್ಸ್‌ ಫ್ರಾಂಚೈಸಿಯಿಂದ ಬಿಗ್ ಅಪ್ಡೇಟ್ ಹೊರ ಬಿದ್ದಿದೆ. ಐಪಿಎಲ್ 2025ರ ಆವೃತ್ತಿಗೆ ಗುಜರಾತ್ ಟೈಟಾನ್ಸ್ ಉಳಿಸಿಕೊಳ್ಳಲಿರುವ ಇಬ್ಬರು ಆಟಗಾರರ ಹೆಸರನ್ನು ಬಹುತೇಕ ಖಚಿತಪಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಈ ಇಬ್ಬರ ಆಟಗಾರರು ಯಾರೆಂಬುದನ್ನು ಬಹಿರಂಗಪಡಿಸಿದೆ.

Who are the two players retained by Gujarat Titans for IPL 2025 Season

ಕಳೆದ ಮೂರು ಐಪಿಎಲ್ ಆವೃತ್ತಿಗಳಲ್ಲಿ ಗುಜರಾತ್ ಟೈಟಾನ್ಸ್ ತಂಡ ಯಶಸ್ಸಿಯಾಗಿದೆ. ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದಾಗ 2022ರ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಚಾಂಪಿಯನ್ ಆದರೆ, ನಂತರದ ಆವೃತ್ತಿಯಲ್ಲಿ ರನ್ನರ್ ಆಪ್ ಆಗಿದೆ. ಐಪಿಎಲ್ 2024ರಲ್ಲಿ ಗುಜರಾತ್ ಪ್ಲೇ-ಆಪ್‌ಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಈಗ ಐಪಿಎಲ್ 2025ರ ಆವೃತ್ತಿ ಬಲಿಷ್ಠ ತಂಡ ಕಟ್ಟುವ ಸಲುವಾಗಿ ಗುಜರಾತ್, ನಾಯಕ ಶುಭಮನ್ ಗಿಲ್ ಮತ್ತು ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಮೆಗಾ ಹರಾಜಿಗೂ ಮುನ್ನ ಉಳಿಸಿಕೊಂಡಿದೆ. ಗುಜರಾತ್ ಟೈಟಾನ್ಸ್ ತನ್ನ ಅಧಿಕೃತ ಟ್ವೀಟರ್ (ಎಕ್ಸ್) ಖಾತೆಯಲ್ಲಿ ಶುಭಮನ್ ಗಿಲ್ ಮತ್ತು ರಶೀದ್ ಖಾನ್ ಒಟ್ಟಿಗೆ ಇರುವ ಫೋಟೋಗಳನ್ನು ಹಂಚಿಕೊಂಡಿದೆ. ಈ ಮೂಲಕ ಗುಜರಾತ್ ಉಳಿಸಿಕೊಳ್ಳುತ್ತಿರುವ ಇಬ್ಬರ ಆಟಗಾರರ ಹೆಸರನ್ನು ಘೋಷಣೆ ಮಾಡಿದೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಅವಕಾಶ ನೀಡಿದರೆ ಗುಜರಾತ್ ಟೈಟಾನ್ಸ್‌ಗೆ ಮುಂದುವರಿಯಲು ಬಯಸುವುದಾಗಿ ಹೇಳಿದ್ದಾರೆ. ಇವರೊಂದಿಗೆ ಡೇವಿಡ್ ಮಿಲ್ಲರ್ ಮತ್ತು ಸಾಯಿ ಸುದರ್ಶನ್ ಅವರನ್ನು ಗುಜರಾತ್ ಉಳಿಸಿಕೊಳ್ಳುವ ನಿರೀಕ್ಷೆಯಿದೆ.

ತಂಡದ ಪ್ರಮುಖ ಭಾಗ

ಶುಭಮನ್ ಗಿಲ್ ಮತ್ತು ರಶೀದ್ ಖಾನ್ ಗುಜರಾತ್ ಟೈಟಾನ್ಸ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ನಿರ್ಗಮನದ ನಂತರ ಶುಭಮನ್ ಗಿಲ್ ಗುಜರಾತ್ ತಂಡಕ್ಕೆ ನಾಯಕರಾಗಿದ್ದಾರೆ. ಅವರ ನಾಯತ್ವದಲ್ಲಿ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ರಶೀದ್ ಖಾನ್ ಕೂಡ ತಮ್ಮ ಆಲ್‌ರೌಂಡರ್ ಪ್ರದರ್ಶನದ ಮೂಲಕ ತಂಡದ ಹಲವು ಗೆಲುವುಗಳಲ್ಲಿ ನೆರವಾಗಿದ್ದಾರೆ.

ಗುಜರಾತ್ ಪರ ಶುಭಮನ್ 45 ಪಂದ್ಯಗಳನ್ನು ಆಡಿದ್ದು, 44.98 ರ ಸರಾಸರಿಯಲ್ಲಿ 1799 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ 147.70 ರ ಸ್ಟ್ರೈಕ್ ರೇಟ್ ಅನ್ನು ಕಾಯ್ದು ಕೊಂಡಿದ್ದಾರೆ. ಗುಜರಾತ್ ತಂಡಕ್ಕೆ ನಾಯಕ ಮಾತ್ರವಲ್ಲದೆ, ಇನ್ನಿಂಗ್ಸ್ ತೆರೆಯುವ ಜವಬ್ದಾರಿಯನ್ನು ಹೊತ್ತಿಕೊಂಡಿದ್ದಾರೆ.

ಮತ್ತೊಂದೆಡೆ ರಶೀದ್ ಖಾನ್ ಕೂಡ ಗುಜರಾತ್ ಪರ 45 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಶೀದ್ 7.68 ರ ಆರ್ಥಿಕತೆಯೊಂದಿಗೆ 23.93 ರ ಸರಾಸರಿಯಲ್ಲಿ 56 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದಲ್ಲದೆ, ರಶೀದ್ ಅವರಿಗೆ 25 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದ್ದು, 184.57 ಸ್ಟ್ರೈಕ್ ರೇಟ್‌ನಲ್ಲಿ 323 ರನ್ ಕಲೆ ಹಾಕಿದ್ದಾರೆ.

Story first published: Friday, October 25, 2024, 12:11 [IST]
Other articles published on Oct 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+