For Quick Alerts
ALLOW NOTIFICATIONS  
For Daily Alerts
 

ಭಾರತದ ಕ್ರಿಕೆಟಿಗ ಆರ್‌ಪಿ ಸಿಂಗ್‌ ಮಗ ಹ್ಯಾರಿ ಸಿಂಗ್‌: ಇಂಗ್ಲೆಂಡ್‌ ತಂಡದ ಪ್ಲೇಯರ್‌

ಶ್ರೀಲಂಕಾ ಸದ್ಯ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಿದೆ. ಈ ವೇಳೆ ಇಂಗ್ಲೆಂಡ್ ತಂಡದ ಪರ ಒಬ್ಬ ಆಟಗಾರ ಬದಲಿ ಆಟಗಾರನಾಗಿ ಕಣಕ್ಕೆ ಇಳಿದು ಎಲ್ಲರ ಚಿತ್ತ ಕದ್ದಿದ್ದಾನೆ. ಆತನ ಹೆಸರು ಕೇಳುತ್ತಿದ್ದಂತೆ ಎಲ್ಲರೂ, ಈತ ಭಾರತೀಯ ಎಂದು ಹೇಳುತ್ತಲೇ ನೋಡಲು ಆರಂಭಿಸಿದರು. ಇಂಗ್ಲೆಂಡ್ ಪರ ಫೀಲ್ಡಿಂಗ್ ಮಾಡುವಾಗ ಹ್ಯಾರಿ ಸಿಂಗ್ ಎಂಬ ಆಟಗಾರ ಸಾಕಷ್ಟು ಸುದ್ದಿ ಮಾಡಿದ್ದಾರೆ.

ಹ್ಯಾರಿ ಸಿಂಗ್‌ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗುತ್ತಿದ್ದಾರೆ. ಅಸಲಿಗೆ ಇವರು ಲಂಕಾಶೈರ್ ಬ್ಯಾಟ್ಸ್‌ಮನ್‌.. ಮೊದಲ ದಿನ ಇಂಗ್ಲೆಂಡ್ ಪರ ಮೂವರು ಬದಲಿ ಆಟಗಾರರು ಕಣಕ್ಕೆ ಇಳಿದರು. ಇದರಲ್ಲಿ ಇವರು ಒಬ್ಬರು. ಉಳಿದಂತೆ ಚಾರ್ಲಿ ಬರ್ನಾರ್ಡ್ ಮತ್ತು ಕೇಶ ಫೊನ್ಸೆಕಾ ಮೈದಾನದಲ್ಲಿ ಬದಲಿ ಆಟಗಾರರಾಗಿ ಕಾಣಿಸಿಕೊಂಡಿದ್ದರು. ಶ್ರೀಲಂಕಾ ಇನ್ನಿಂಗ್ಸ್‌ನ 37 ನೇ ಓವರ್‌ನಲ್ಲಿ ಹ್ಯಾರಿ ಬ್ರೂಕ್ ಬದಲಿ ಆಟಗಾರನಾಗಿ ಮೈದಾನಕ್ಕೆ ಬಂದರು.

Who Is Harry Singh Son of RP Singh and England s Substitute Fielder

ಹ್ಯಾರಿ ಸಿಂಗ್ ಯಾರು?

ಹ್ಯಾರಿ ಸಿಂಗ್‌ ಭಾರತದ ಸ್ಟಾರ್ ಬೌಲರ್‌ ರುದ್ರಪ್ರತಾಪ್‌ ಸಿಂಗ್ ಸೀನಿಯರ್ ಅವರ ಮಗ. ಆದರೆ ನೀವು ತಿಳಿದುಕೊಂಡ ಹಾಗೆ 2007ರಲ್ಲಿ ಟಿ20 ವಿಶ್ವಕಪ್‌ ಗೆದ್ದಾಗ ತಂಡದಲ್ಲಿದ್ದ ವೇಗಿ ಆರ್‌ಪಿ ಸಿಂಗ್‌ ಇವರಲ್ಲ. ಇವರಿಗೂ ಮೊದಲು ಭಾರತ ತಂಡವನ್ನು 80ರ ದಶಕದಲ್ಲಿ ಪ್ರತಿನಿಧಿಸಿದ್ದ ಪ್ಲೇಯರ್ ಆರ್‌ಪಿ ಸಿಂಗ್‌. ಅವರು 1986 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡು ODI ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದರು. ಆರ್‌ಪಿ ಸಿಂಗ್‌ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಆಡುವ ಅವಕಾಶ ಸಿಗಲಿಲ್ಲ. ಇವರು ದೇಶೀಯ ಟೂರ್ನಿಗಳಲ್ಲಿ ತಮ್ಮ ಅಬ್ಬರವನ್ನು ನಡೆಸಿದ್ದಾರೆ. 59 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆರ್‌ಪಿ 1413 ರನ್ ಬಾರಿಸಿದ್ದಲ್ಲದೆ, ಇವರು ಬೌಲಿಂಗ್‌ನಲ್ಲಿ 150 ವಿಕೆಟ್ ಕಬಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರು 21 ಪಂದ್ಯಗಳನ್ನು ಆಡಿದ್ದು, ಮತ್ತು 26 ವಿಕೆಟ್‌ಗಳನ್ನು ಪಡೆದಿದ್ದಾರೆ.

ಆರ್ ಪಿ ಸಿಂಗ್ ಸೀನಿಯರ್ ಲಕ್ನೋದಲ್ಲಿ ಜನಿಸಿದರು. ಭಾರತದಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ, ಅವರು ಯುಕೆನತ್ತ ಮುಖಮಾಡಿದರು. ಅವರ ಮಗ ಹ್ಯಾರಿ ಸಿಂಗ್ 16 ಜೂನ್ 2004 ರಂದು ಇಂಗ್ಲೆಂಡ್‌ನಲ್ಲಿ ಜನಿಸಿದರು. ಅವರು ಲಂಕಾಶೈರ್ ಕೌಂಟಿ ಕ್ಲಬ್ ಮತ್ತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ECB) ನೊಂದಿಗೆ ಕೋಚಿಂಗ್ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರ ತಮ್ಮ ಮಗನಿಗೆ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಆಡಿಸಲು ಮುಂದಾದರು.

ಹ್ಯಾರಿ ತಮ್ಮ ಕ್ರಿಕೆಟಿಂಗ್ ವೃತ್ತಿಜೀವನ್ನು ಇಂಗ್ಲೆಂಡ್‌ನಲ್ಲಿ ಆರಂಭಿಸಿದರು. ನಾಲ್ಕನೇ ವರ್ಷವರಿದ್ದಾಗಲೇ ಅವರು ಬ್ಯಾಟ್‌ ಹಿಡಿದರು. ಅಲ್ಲಿಂದ ಹ್ಯಾರಿ ಸಿಂಗ್ ಪ್ರತಿಯೊಂದು ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುತ್ತಲೇ ಸಾಗಿದರು. ಈ ವರ್ಷದ ಆರಂಭದಲ್ಲಿ ಏಕದಿನ ಕಪ್‌ನಲ್ಲಿ ಲಂಕಾಶೈರ್‌ ಪರ ತಮ್ಮ ಲಿಸ್ಟ್ A ಗೆ ಪದಾರ್ಪಣೆ ಮಾಡಿದರು. ಈ ಟೂರ್ನಿಯಲ್ಲಿ ಅವರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆದರೆ ಅಭಿಮಾನಿಗಳ ಮನ ಗೆಲ್ಲುವಲ್ಲಿ ಸಫಲರಾದರು.

Story first published: Friday, August 23, 2024, 15:27 [IST]
Other articles published on Aug 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+