ದೀಪಕ್ ಚಹರ್ ಪ್ರಪೋಸ್ ಮಾಡಿದ ಆ ಹುಡುಗಿ ಯಾರು? ಬಹಿರಂಗವಾಯ್ತು ಇದರ ಹಿಂದೆ ಇದ್ದ ಧೋನಿ ಪ್ಲಾನ್!

ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 53ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 7ರಂದು ನಡೆಯಿತು. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ 6 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತು. ಹೀಗೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಪ್ಲೇ ಆಫ್ ಹಂತವನ್ನು ಅಧಿಕೃತವಾಗಿ ಪ್ರವೇಶಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ದುಬೈ ಕ್ರೀಡಾಂಗಣದಲ್ಲಿ ಅಕ್ಟೋಬರ್ 7ರಂದು ನಡೆದ ಪಂದ್ಯದಲ್ಲಿ ಹೀನಾಯವಾಗಿ ಸೋತಿತು.
ಈ ಪಂದ್ಯ ಮುಗಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ದೀಪಕ್ ಚಹರ್ ತಮ್ಮ ವೈಯಕ್ತಿಕ ವಿಚಾರವಾಗಿ ದೊಡ್ಡ ಮಟ್ಟದ ಸುದ್ದಿಯನ್ನು ಮಾಡಿದರು. ಹೌದು ಪಂದ್ಯ ವೀಕ್ಷಿಸಲು ಬಂದಿದ್ದ ತಮ್ಮ ಗೆಳತಿ ಜಯಾ ಭಾರದ್ವಾಜ್ ಅವರಿಗೆ ಕ್ರೀಡಾಂಗಣದಲ್ಲಿಯೇ ಪ್ರೇಮ ನಿವೇದನೆಯನ್ನು ಮಾಡುವುದರ ಮೂಲಕ ವೈರಲ್ ಆದರು.
ಪಂದ್ಯ ಮುಗಿದ ಕೂಡಲೇ ತಮ್ಮ ಗೆಳತಿ ಜಯಾ ಭಾರದ್ವಾಜ್ ಕುಳಿತಲ್ಲಿ ತೆರಳಿದ ದೀಪಕ್ ಚಹರ್ ಮಂಡಿಯೂರಿ ಆಕೆಗೆ ಪ್ರೇಮ ನಿವೇದನೆಯನ್ನು ಮಾಡಿದರು ಮತ್ತು ಇದಕ್ಕೆ ಜಯಾ ಭಾರದ್ವಾಜ್ ಒಪ್ಪಿಗೆಯನ್ನು ಸೂಚಿಸಿದರು. ಹೀಗೆ ಜಯ ಭಾರದ್ವಾಜ್ ಅವರಿಗೆ ದೀಪಕ್ ಚಹರ್ ಕ್ರೀಡಾಂಗಣದಲ್ಲಿಯೇ ಪ್ರೇಮ ನಿವೇದನೆ ಮಾಡಿದ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಯಿತು.
ದೀಪಕ್ ಚಹರ್ ಪ್ರೇಮ ನಿವೇದನೆಯನ್ನು ಮಾಡಿದ ಈ ಜಯ ಭಾರದ್ವಾಜ್ ಯಾರು, ಆಕೆ ಯಾವ ವೃತ್ತಿಯಲ್ಲಿದ್ದಾಳೆ, ಆಕೆ ಮತ್ತು ದೀಪಕ್ ಚಾಹರ್ ಎಷ್ಟು ದಿನಗಳಿಂದ ಗೆಳೆಯ - ಗೆಳತಿಯರಾಗಿದ್ದರು ಎಂಬ ವಿಷಯವನ್ನು ಕ್ರಿಕೆಟ್ ಪ್ರೇಕ್ಷಕರು ಹುಡುಕಲಾರಂಭಿಸಿದರು. ಈ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಜಯಾ ಭಾರದ್ವಾಜ್ ಯಾರು?
ದುಬೈ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯ ಮುಗಿದ ಬಳಿಕ ದೀಪಕ್ ಚಹರ್ ಪ್ರೇಮ ನಿವೇದನೆ ಮಾಡಿದ ಜಯಾ ಭಾರದ್ವಾಜ್ ಮೂಲತಃ ದೆಹಲಿಯವರು. ಈಕೆ ಬಿಗ್ ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ಮತ್ತು ಎಂಟಿವಿಯ ಪ್ರಸಿದ್ಧ ಸ್ಪ್ಲಿಟ್ ವಿಲ್ಲಾ 2ನ ವಿನ್ನರ್ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿ. ಮುಂಬೈನ ವಿಶ್ವವಿದ್ಯಾನಿಲಯದಲ್ಲಿ ಪದವಿಯನ್ನು ಪಡೆದುಕೊಂಡಿರುವ ಜಯ ಭಾರದ್ವಾಜ್ ಕಾರ್ಪೊರೇಟ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.

ತಮ್ಮ ತಂಡದ ಆಟಗಾರರಿಗೆ ವರ್ಷದ ಆರಂಭದಲ್ಲಿಯೇ ಗೆಳತಿಯನ್ನು ಪರಿಚಯಿಸಿದ್ದರು ದೀಪಕ್ ಚಹಾರ್
ಇನ್ನು ದೀಪಕ್ ಚಹರ್ ತಮ್ಮ ಗೆಳತಿ ಜಯಾ ಭಾರದ್ವಾಜ್ ಅವರನ್ನು ಈ ವರ್ಷದ ಆರಂಭದಲ್ಲಿಯೇ ಟೀಮ್ ಇಂಡಿಯಾದ ಕೆಲ ಆಟಗಾರರಿಗೆ ಪರಿಚಯವನ್ನು ಮಾಡಿಸಿದ್ದ ಸಂಗತಿ ಬೆಳಕಿಗೆ ಬಂದಿದೆ. ಏಪ್ರಿಲ್ ತಿಂಗಳಿನಲ್ಲಿ ಐಪಿಎಲ್ ಆರಂಭವಾದಾಗಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಿಗೂ ತಮ್ಮ ಗೆಳತಿಯನ್ನು ದೀಪಕ್ ಚಹರ್ ಪರಿಚಯಿಸಿದ್ದರಂತೆ. ಹಾಗೂ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ಮುಗಿದ ಬಳಿಕ ಇಬ್ಬರೂ ವಿವಾಹ ಬಂಧನಕ್ಕೊಳಗಾಗುವ ಯೋಜನೆಯನ್ನು ಸಹ ಹಾಕಿಕೊಂಡಿದ್ದರಂತೆ.

ಈ ಪ್ರಪೋಸ್ ಹಿಂದೆ ಇತ್ತು ಎಂ ಎಸ್ ಧೋನಿ ಪ್ಲಾನ್!
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಕ್ರೀಡಾಂಗಣದಲ್ಲಿಯೇ ಜಯಾ ಭಾರದ್ವಾಜ್ ಅವರಿಗೆ ದೀಪಕ್ ಚಹರ್ ಪ್ರೇಮ ನಿವೇದನೆಯನ್ನು ಮಾಡಿದರು. ಆದರೆ ಅಸಲಿ ವಿಷಯವೇನೆಂದರೆ ಪ್ಲೇ ಆಫ್ ಪಂದ್ಯದಲ್ಲಿ ಜಯ ಭಾರದ್ವಾಜ್ ಅವರಿಗೆ ಪ್ರೇಮನಿವೇದನೆ ಮಾಡುವ ಪ್ಲಾನ್ ಹೊಂದಿದ್ದರಂತೆ ದೀಪಕ್ ಚಹರ್. ಹೌದು ಪ್ಲೇ ಆಫ್ ಸುತ್ತಿನ ಪಂದ್ಯದಲ್ಲಿ ಜಯಾ ಭಾರದ್ವಾಜ್ ಅವರಿಗೆ ಪ್ರೇಮನಿವೇದನೆ ಮಾಡುವ ಯೋಚನೆಯನ್ನು ದೀಪಕ್ ಚಹರ್ ಹಾಕಿಕೊಂಡಿದ್ದರಂತೆ ಆದರೆ, ಎಂಎಸ್ ಧೋನಿ ಪ್ಲೇ ಆಫ್ ಪಂದ್ಯದಲ್ಲಿ ಬೇಡ ಇಂದಿನ ಪಂದ್ಯದಲ್ಲಿಯೇ ಪ್ರೇಮ ನಿವೇದನೆಯನ್ನು ಮಾಡು ಎಂದು ದೀಪಕ್ ಚಹರ್ ಅವರಿಗೆ ಸಲಹೆಯನ್ನು ನೀಡಿದರಂತೆ. ಹೀಗಾಗಿಯೇ ದೀಪಕ್ ಚಹರ್ ತಮ್ಮ ಯೋಜನೆಯಲ್ಲಿ ಬದಲಾವಣೆಯನ್ನು ಮಾಡಿಕೊಂಡು ಪಂಜಾಬ್ ವಿರುದ್ಧದ ಪಂದ್ಯ ಮುಗಿದ ಬಳಿಕವೇ ಜಯಾ ಭಾರದ್ವಾಜ್ ಅವರಿಗೆ ಪ್ರಪೋಸ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications