2023ರ ಏಷ್ಯಾ ಕಪ್ ಉದ್ಘಾಟನಾ ಸಮಾರಂಭದಲ್ಲಿ ಎಲ್ಲರ ಕಣ್ಣು ಕುಕ್ಕಿದ ಈ ಚೆಲುವೆ ಯಾರು?
2023ರ ಎಸಿಸಿ ಏಷ್ಯಾ ಕಪ್ ಪಂದ್ಯಾವಳಿಯು ಆಗಸ್ಟ್ 30ರಿಂದ ಅಧಿಕೃತವಾಗಿ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಅತಿಥೇಯ ಪಾಕಿಸ್ತಾನ ಮತ್ತು ಪ್ರವಾಸಿ ನೇಪಾಳ ತಂಡಗಳು ಸೆಣಸಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದವು.
ಮುಲ್ತಾನ್ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 342 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು ಮತ್ತು ನೇಪಾಳ ತಂಡವನ್ನು 104 ರನ್‌ಗಳಿಗೆ ಕಟ್ಟಿಹಾಕಿ 238 ರನ್‌ಗಳ ದಾಖಲೆ ಅಂತರದಿಂದ ಗೆಲುವು ಸಾಧಿಸಿತು.

ಇದಕ್ಕೂ ಮುನ್ನ ನಡೆದ ಮುಲ್ತಾನ್‌ನಲ್ಲಿ 2023ರ ಏಷ್ಯಾ ಕಪ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಚೆಲುವೆಯೊಬ್ಬಳು ಎಲ್ಲರನ್ನೂ ಮೋಡಿ ಮಾಡಿದಳು. ಈ ಸುರಸುಂದರಿ ಹಾಡುವ ಮೂಲಕ ಉದ್ಘಾಟನಾ ಸಮಾರಂಭಕ್ಕೆ ಮತ್ತಷ್ಟು ಮೆರಗು ತಂದಳು.
ವೃತ್ತಿಯಲ್ಲಿ ವೈದ್ಯೆಯಾಗಿರುವ ನೇಪಾಳದ ಈ ಚೆಲುವೆಯ ಹೆಸರು ತ್ರಿಶಾಲಾ ಗುರುಂಗ್. ಇದೀಗ ಪಾಕಿಸ್ತಾನದ ಮುಲ್ತಾನ್‌ನಲ್ಲಿ ಕ್ರಿಕೆಟ್ ಸಮಾರಂಭದಲ್ಲಿ ಹಾಡುವ ಮೂಲಕ ಭಾರೀ ಜನಪ್ರಿಯರಾಗಿದ್ದಾಳೆ.

ಪಾಕಿಸ್ತಾನ ಮತ್ತು ನೇಪಾಳ ತಂಡಗಳನ್ನು ಪ್ರತಿನಿಧಿಸುವ ಬಾವುಟಗಳನ್ನು ಹಿಡಿದು ನಿಂತಿದ್ದ ಮಕ್ಕಳೊಂದಿಗೆ ಮೈಕ್ ಹಿಡಿದು ಹಾಡಿದ ತ್ರಿಶಾಲಾ ಗುರುಂಗ್ ಎಲ್ಲರ ಕಣ್ಸೆಳೆದಳು.
ಬಿಳಿ ಸೀರೆ ಉಟ್ಟ ತ್ರಿಶಾಲಾ ಗುರುಂಗ್ ಏಷ್ಯಾ ಕಪ್ ಟ್ರೋಫಿಯೊಂದಿಗೆ ನಿಂತು ಹಾಡುತ್ತಿದ್ದರೆ, ಮೈದಾನದಲ್ಲಿ ನೆರೆದಿದ್ದವರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ವೈರಲ್ ಆಗಿದ್ದಾಳೆ.
ವೃತ್ತಿಯಲ್ಲಿ ವೈದ್ಯೆಯಾಗಿದ್ದರೂ, ಹವ್ಯಾಸಿ ಗಾಯಕಿಯಾಗಿಯೂ ಜನಪ್ರಿಯರಾಗಿರುವ ನೇಪಾಳದ ತ್ರಿಶಾಲಾ ಗುರುಂಗ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದ್ದಾಳೆ.
ತ್ರಿಶಾಲಾ ಗುರುಂಗ್ ಸ್ವತಃ ಹಾಡು ರಚಿಸಿ ಕಂಪೋಸ್ ಮಾಡಿದ ಹಾಡುಗಳು ಯೂಟ್ಯೂಬ್‌ನಲ್ಲಿ ಭಾರೀ ವೈರಲ್ ಆಗುತ್ತಿವೆ. ಇನ್ನು ವೇದಿಕೆ ಕಾರ್ಯಕ್ರಮಗಳ ಮೂಲಕ ತ್ರಿಶಾಲಾ ದೇಶ-ವಿದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ನೇಪಾಳ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದಿರುವ ತ್ರಿಶಾಲಾ ಗುರುಂಗ್ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಹಾಡುವ ಕಾರ್ಯಕ್ರಮಗಳಿಂದ ತ್ರಿಶಾಲಾ ಹೆಚ್ಚು ಬ್ಯೂಸಿಯಾಗಿದ್ದಾರೆ. ಏಷ್ಯಾ ಕಪ್ ಉದ್ಘಾಟನಾ ಸಮಾರಂಭದಲ್ಲಿ ತ್ರಿಶಾಲಾ ಗುರುಂಗ್ ಹಾಡಿದ ಹಾಡು ಇದೀಗ ಭಾರೀ ವೈರಲ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications