IPL 2024: CSK ವಿರುದ್ಧ ಮಿಂಚಿದ RCB ಆಟಗಾರ ಅನುಜ್ ರಾವತ್ ಯಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಐಪಿಎಲ್ 2024ರ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಚೆನ್ನೈ ಆರಂಭದಲ್ಲಿ ಅಬ್ಬರ ನಡೆಸಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ವೇಗದ ಬೌಲರ್ ಮುಸ್ತಾಫಿಜರ್ ರೆಹಮಾನ್ ಕಟರ್ ಎಸೆತವನ್ನು ಎದುರಿಸುವಲ್ಲಿ ಆರ್‌ಸಿಬಿ ಬ್ಯಾಟರ್‌ಗಳು ವಿಫಲರಾದರು.
ಆರ್‌ಸಿಬಿ ಆರಂಭದಲ್ಲಿ ಅಬ್ಬರ ನಡೆಸಿತು. ನಾಯಕ ಫಾಫ್ ಡುಪ್ಲೇಸಿಸ್, 35 ರನ್ ಬಾರಿಸಿ ಅಬ್ಬರಿಸಿದರು. ಮುಸ್ತಾಫಿಜುರ್ ಎಸೆತದಲ್ಲಿ ಫಾಫ್ ಅವರು ರಚಿನ್ ರವೀಂದ್ರ ಅವರಿಗೆ ಕ್ಯಾಚ್ ನೀಡಿದರು. ಇದೇ ಓವರ್‌ನ ಕೊನೆಯ ಎಸೆತದಲ್ಲಿ ರಜತ್ ಪಟಿದಾರ್ ಅವರಿಗೆ ರೆಹಮಾನ್ ಖೆಡ್ಡಾ ತೋಡಿದರು. 42 ರನ್ ಸಿಡಿಸಿದ್ದಾಗಲೇ ಮೂರನೇ ವಿಕೆಟ್ ಪತನವಾಯಿತು.

11.2 ಓವರ್‌ನಲ್ಲಿ ವಿರಾಟ್ ಕೊಹ್ಲಿ ರೂಪದಲ್ಲಿ ನಾಲ್ಕನೇ ವಿಕೆಟ್ ಪತನವಾಯಿತು. ಇದೇ ಓವರ್‌ನ ನಾಲ್ಕನೇ ಎಸೆತದಲ್ಲಿ ಕ್ಯಾಮರೂನ್ ಗ್ರೀನ್ ಔಟ್ ಆದರು. 78 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅನುಜ್ ರಾವತ್ ಹಾಗೂ ದಿನೇಶ್ ಕಾರ್ತಿಕ್ ಆಧಾರವಾದರು. ಅನುಜ್ ರಾವತ್ ಅವರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಅನುಜ್ ರಾವತ್ ಯಾರು?
ಎಡಗೈ ಬ್ಯಾಟರ್ ಹಾಗೂ ವಿಕೆಟ್ ಕೀಪರ್
ರಾವತ್ ಹುಟ್ಟಿದ್ದು ಯಾವಾಗ?
ಉತ್ತರಾಖಂಡ್‌ನ ರಾಮ್ ನಗರ್‌ದಲ್ಲಿ ಅಕ್ಟೋಬರ್ 17, 1999ರಲ್ಲಿ ಜನಿಸಿದರು.
ಇವರು ವಿದ್ಯಾಭ್ಯಾಸ ಏನು?
ಬಾಲ ಭವನ್ ಇಂಟರ್ ನ್ಯಾಷನಲ್ ಶಾಲೆ.
ಎಲ್ಲಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದಾರೆ?
ರಾವತ್ ಅವರು ದೆಹಲಿ ಮೂಲದ ಯುವ ಆಟಗಾರ. ತಮ್ಮ 10ನೇ ವಯಸ್ಸಿನಲ್ಲೇ ತಮ್ಮ ಸ್ವಂತ ಊರನ್ನು ಬಿಟ್ಟು ದೆಹಲಿಗೆ ಬಂದರು.
ಅವರಿಗೆ ಕೋಚ್ ಮಾಡುವವರು ಯಾರು?
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ಕೋಚ್ ಮಾಡಿರುವ ರಾಜಕುಮಾರ್ ಶರ್ಮಾ ಅವರ ಗರಡಿಯಲ್ಲಿ ಅನುಜ್ ರಾವತ್ ಪಳಗುತ್ತಿದ್ದಾರೆ.

ರಣಜಿ ಟೂರ್ನಿಗೆ ಪದಾರ್ಪಣೆ ಮಾಡಿದ್ದು ಯಾವಾಗ?
ಅಕ್ಟೋಬರ್ 2017ರಲ್ಲಿ ಇವರು ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆಗ ಅವರಿಗೆ 17 ವರ್ಷ ಆಗಿತ್ತು.
ರಾವತ್ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದು ಯಾವಾಗ?
2020ರಲ್ಲಿ ಐಪಿಎಲ್ ಗೆ ಅನುಜ್ ರಾವತ್ ಅವರು ರಾಜಸ್ಥಾನ ರಾಯಲ್ಸ್ ಪರ ಆಡಿ ಪದಾರ್ಪಣೆ ಮಾಡಿದರು.
2022ರಲ್ಲಿ ಆರ್‌ಸಿಬಿ ಇವರಿಗೆ ನೀಡಿದ ಹಣವೆಷ್ಟು?
ಆರ್‌ಸಿಬಿ ಇವರನ್ನು 3.4 ಕೋಟಿ ರೂ. ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತು.
ಭಾರತದ ಪರ ಆಡಿದ್ದಾರಾ?
2018ರಲ್ಲಿ ಶ್ರೀಲಂಕಾ ವಿರುದ್ಧದ ಅಂಡರ್19 ಪಂದ್ಯದಲ್ಲಿ ಇವರು ಭಾರತದ ಪರ ಪದಾರ್ಪಣೆ ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications