ವಿರಾಟ್ ಕೊಹ್ಲಿ ಸಹಿಯುಳ್ಳ ಜೆರ್ಸಿ ಧರಿಸಿ ಟೀಮ್ ಇಂಡಿಯಾಗೆ ಚೀಯರ್ಸ್ ಹೇಳಿದ ಈ ಬೆಡಗಿ ಯಾರು?
ಶುಕ್ರವಾರ, ಸೆಪ್ಟೆಂಬರ್ 15ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಭಾರತ ಈಗಾಗಲೇ ಪೈನಲ್‌ಗೆ ತಲುಪಿದ್ದರೆ, ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿದೆ. ಹಾಗಾಗಿ ಇದು ಅನೌಪಚಾರಿಕ ಪಂದ್ಯವಾಗಿರಲಿದೆ.
ಇನ್ನು ಭಾರತ ತಂಡಕ್ಕೆ ಒಬ್ಬ ವಿದೇಶಿ ಚೆಲುವೆಯು ತನ್ನ ಬೆಂಬಲ ಸೂಚಿಸಿದ್ದಾಳೆ. ಕ್ರಿಕೆಟ್ ಮೇಲಿನ ತನ್ನ ಉತ್ಸಾಹದಿಂದ ಸಾಮಾಜಿಕ ಮಾಧ್ಯಮ ವೈರಲ್ ಆಗಿರುವ ಈಕೆ ಅಫ್ಘಾನಿಸ್ತಾನದವಳಾಗಿದ್ದು, ಸದ್ಯ ದುಬೈನಲ್ಲಿ ವಾಸಿಸುತ್ತಿದ್ದಾಳೆ.

ಈ ಚೆಲುವೆಯ ಹೆಸರು ವಾಜ್ಮಾ ಅಯೂಬಿ. ಸಾಮಾಜಿಕ ಮಾಧ್ಯಮದ ಪ್ರಭಾವಿಯಾಗಿದ್ದಾಳೆ ಮತ್ತು ಇಂಟರ್ನೆಟ್ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆಲ್ಲುವ ಬಗ್ಗೆ ವಿಷಯಗಳನ್ನು ತಿಳಿದಿದ್ದಾಳೆ. ವಾಜ್ಮಾ ಅಯೂಬಿ ಸುರಸುಂದರಿಯಾಗಿದ್ದು, ಕೇವಲ ತನ್ನ ಸೌಂದರ್ಯದಿಂದ ಅವಳು ಚಿರಪರಿಚಿತವಾಗಿಲ್ಲ. ಕ್ರಿಕೆಟ್ ಮೇಲಿನ ಅಭಿಮಾನ ಮತ್ತು ಪ್ರೀತಿಗೆ ಅಭಿಮಾನಿಗಳೇ ಆಕೆಯನ್ನು ಇಷ್ಟಪಡುತ್ತಿದ್ದಾರೆ.
2023ರ ಏಷ್ಯಾ ಕಪ್ ಪಂದ್ಯಾವಳಿ ನಡೆಯುತ್ತಿರುವ ಶ್ರೀಲಂಕಾದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದರೂ ಸಹ, ವಾಜ್ಮಾ ಅಯೂಬಿ ತಮ್ಮ ಎರಡು ಮೆಚ್ಚಿನ ತಂಡಗಳನ್ನು ಬೆಂಬಲಿಸಿದ್ದಾಳೆ.
ವಾಜ್ಮಾ ಅಯೂಬಿ ಅವಳ ನೆಚ್ಚಿನ ತಂಡ ಅಫ್ಘಾನಿಸ್ತಾನ. ಏಕೆಂದರೆ, ಅದು ಅವಳ ತವರು ತಂಡವಾಗಿದೆ. ಇನ್ನು ಎರಡನೇ ನೆಚ್ಚಿನ ತಂಡ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ.
ಪ್ರಸಕ್ತ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಎರಡನೇ ಸುತ್ತನ್ನು ತಲುಪಲು ಅಫ್ಘಾನಿಸ್ತಾನ ತಂಡ ವಿಫಲವಾದ ನಂತರ, ವಾಜ್ಮಾ ಅಯೂಬಿ ಈ ಪಂದ್ಯಾವಳಿಯನ್ನು ಗೆಲ್ಲಲು ಭಾರತ ತಂಡವನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾಳೆ. ಅಲ್ಲದೆ ಆಕೆ ಭಾರತೀಯ ತಂಡದ ಜೆರ್ಸಿ ಧರಿಸಿದ್ದಳು ಮತ್ತು ದುಬೈ ಸ್ಕೈಲೈನ್‌ನೊಂದಿಗೆ ಫೋಟೋಗೆ ಪೋಸ್ ನೀಡಿದಳು.
ಭಾರತ ತಂಡ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳನ್ನು ಸೋಲಿಸಿ ಫೈನಲ್‌ಗೆ ಸ್ಥಾನ ಕಾಯ್ದಿರಿಸಿತು. ಶುಕ್ರವಾರ ಬಾಂಗ್ಲಾದೇಶ ತಂಡವನ್ನು ಎದುರಿಸುತ್ತಿದೆ. ಅಫ್ಘಾನಿಸ್ತಾನ ಸುಂದರಿ ವಾಜ್ಮಾ ಅಯೂಬಿ ಎರಡೂ ಸಂದರ್ಭಗಳಲ್ಲಿ ಭಾರತ ತಂಡವನ್ನು ಅಭಿನಂದಿಸಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶದ ಪಂದ್ಯಕ್ಕೂ ಮುನ್ನ ವಾಜ್ಮಾ ಅಯೂಬಿ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾಳೆ. ಈ ಹಿಂದಿನ ಭಾರತ ತಂಡದ ಜೆರ್ಸಿಯಲ್ಲಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಳು.
ಇದೀಗ, ವಾಜ್ಮಾ ಅಯೂಬಿ ಧರಿಸಿರುವ ಜೆರ್ಸಿಯನ್ನು ವಿರಾಟ್ ಕೊಹ್ಲಿ ಅವರು 2022ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನದ ಹಣಾಹಣಿಯಲ್ಲಿ ಧರಿಸಿದ್ದರು ಎಂದು ಆಕೆ ಹೇಳಿಕೊಂಡಿದ್ದಾಳೆ.
ಅದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಚೊಚ್ಚಲ ಟಿ20 ಶತಕವನ್ನು ಬಾರಿಸಿದ್ದರು ಮತ್ತು ಸುಮಾರು ಮೂರು ವರ್ಷಗಳ ನಂತರ ಮೊದಲ ಅಂತಾರಾಷ್ಟ್ರೀಯ ಶತಕ ಅದಾಗಿತ್ತು ಎಂಬುದು ಗಮನಾರ್ಹ ಸಂಗತಿ.
ಇಂತಹ ಬೆಲೆಕಟ್ಟಲಾಗದ ಅವಿಸ್ಮರಣೀಯ ಜೆರ್ಸಿಯನ್ನು ವಿರಾಟ್ ಕೊಹ್ಲಿಯಿಂದ ಉಡುಗೊರೆಯಾಗಿ ಪಡೆದ ಅದೃಷ್ಟಶಾಲಿ ಅಭಿಮಾನಿ ವಾಜ್ಮಾ ಅಯೂಬಿ. ಜೆರ್ಸಿಯ ಹಿಂಭಾಗದಲ್ಲಿ ವಿರಾಟ್ ಹಸ್ತಾಕ್ಷರ ಸಹ ಇದೆ.
ವಾಜ್ಮಾ ಅಯೂಬಿ ದೊಡ್ಡ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ಕೊಹ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 13,000 ಏಕದಿನ ರನ್‌ಗಳನ್ನು ಪೂರ್ಣಗೊಳಿಸಿದ ನಂತರ, ವಾಜ್ಮಾ ಅಯೂಬಿ ಅದನ್ನು ಕೊಲಂಬೊದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ದುಬೈನಲ್ಲಿ ಆಚರಿಸಿದ್ದಳು.
ಅವಳು ಈಗಾಗಲೇ ವಿರಾಟ್ ಕೊಹ್ಲಿ ಹಸ್ತಾಕ್ಷರವುಳ್ಳ ಜೆರ್ಸಿಯನ್ನು ಹೊಂದಿದ್ದಾಳೆ ಎಂದರೆ, ವಾಜ್ಮಾ ವಿಶ್ವದ ಕ್ರಿಕೆಟಿಗರ ಅದೃಷ್ಟಶಾಲಿ ಅಭಿಮಾನಿಗಳಲ್ಲಿ ಒಬ್ಬರು.
ಅಫ್ಘಾನಿಸ್ತಾನದ ಈ ನಿಗೂಢ ಬೆಡಗಿ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಮತ್ತೊಮ್ಮೆ ಭಾರತ ತಂಡವನ್ನು ಹುರಿದುಂಬಿಸಲಿದ್ದಾಳೆ. 2023ರ ಏಷ್ಯಾ ಕಪ್ ಫೈನಲ್ ಪಂದ್ಯವು ಸೆಪ್ಟೆಂಬರ್ 17ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.
ಫೈನಲ್ ಪಂದ್ಯದ ದಿನದಂದು ಭಾಗಶಃ ಅಥವಾ ಸಂಪೂರ್ಣವಾಗಿ ಮಳೆಯಿಂದ ಅಡ್ಡಿಯಾದ ಸಂದರ್ಭದಲ್ಲಿ ಫೈನಲ್‌ಗೆ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications