ಪ್ರೇರಣೆಗೆ ದೇಶ ಮುಖ್ಯವಲ್ಲ: ತಾರೀಕ್ ಬದುಕನ್ನೇ ಬದಲಿಸಿದ್ದು ಭಾರತದ ಕ್ರಿಕೆಟ್ ದಿಗ್ಗಜ
Usman Tariq: ಕೊಲೊಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2026 ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಈ ಹೈವೋಲ್ಟೇಜ್ ಕದನದಲ್ಲಿ ಗಮನ ಸೆಳೆದಿದ್ದು ಉಸ್ಮಾನ್ ತಾರಿಕ್ ಅವರ ಬೌಲಿಂಗ್. ಸೇಲ್ಸ್‌ಮ್ಯಾನ್ ಆಗಿದ್ದ ಇವರು ಕ್ರಿಕೆಟ್‌ಗೆ ಮರಳಲು ಪ್ರೇರಣೆಯಾಗಿದ್ದೇ ಟೀಂ ಇಂಡಿಯಾದ ವಿಕೆಟ್ ಕೀಪರ್ ಅವರ ಜೀವನ ಕುರಿತ ಸಿನಿಮಾ ಅಂತೆ. ಇಲ್ಲಿದೆ ನೋಡಿ ಈ ಕುರಿತು ಸಂಪೂರ್ಣ ಮಾಹಿತಿ.
ಭಾರತ ತಂಡವು ಟಿ20 ವಿಶ್ವಕಪ್ 2026ರ ಗುಂಪು ಹಂತದ ಹೈವೀಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿದೆ. ಆದರೆ, ನಿನ್ನೆ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ವಿಕೆಟ್ ಪಡೆದ ಉಸ್ಮಾನ್ ತಾರಿಕ್ ವಿಭಿನ್ನ ಬೌಲಿಂಗ್ ಶೈಲಿ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹಾಗಾದ್ರೆ, ಇವರು ಯಾರು ಎನ್ನುವ ಪ್ರಶ್ನೆಗಳು ಎದ್ದಿವೆ. ಅದೆಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ.

ಉಸ್ಮಾನ್ ತಾರಿಕ್ ಯಾರು?
ಪಾಕಿಸ್ತಾನ ತಂಡದ ಯುವ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರು ಅತ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಬಲಗೈ ಆಫ್ ಸ್ಪಿನ್ನರ್ ಆಗಿರುವ ಉಸ್ಮಾನ್ ತಾರಿಕ್, 7 ಜೂನ್ 1995ರಂದು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ನೌಶೇರಾದಲ್ಲಿ ಜನಿಸಿದ್ದಾರೆ. ಅವರು 2025ರ ಅಂತ್ಯದ ವೇಳೆಗೆ ಪಾಕಿಸ್ತಾನ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ, ತಮ್ಮ ವಿಭಿನ್ನ ಬೌಲಿಂಗ್ ಶೈಲಿಯಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ.
ಉಸ್ಮಾನ್ ತಾರಿಕ್ ಅವರ ವಿಭಿನ್ನ ಆಕ್ಷನ್ ಬೌಲಿಂಗ್ ಇದೀಗ ಚರ್ಚೆಗೆ ಕಾರಣವಾಗಿದೆ. ನಿಂತುಕೊಂಡು ಬೌಲ್ ಮಾಡುವ ಶೈಲಿ ಹಾಗೂ ಗೂಗ್ಲಿ ಸೇರಿದಂತೆ ಹಲವು ರೀತಿಯಲ್ಲಿ ಕಾಣಿಸುತ್ತಿದೆ. ಇವರ ಬೌಲಿಂಗ್ ಶೈಲಿಯು ಕೆಲವು ಬ್ಯಾಟ್ಸ್‌ಮನ್‌ಗಳನ್ನು ಅಚ್ಚರಿಗೊಳಿಸಿದೆ. ಇನ್ನೂ ಉಸ್ಮಾನ್ ತಾರಿಕ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಮಾಡಿದ್ದೇ ಒಂದು ರೋಚಕ ಸಂಗತಿಯಾಗಿದೆ.
ಕ್ರಿಕೆಟ್‌ಗೆ ಪಾದಾರ್ಪಣೆಗೆ ಕಾರಣವೇನು?
ಕೆಲಕಾಲ ಕ್ರಿಕೆಟ್‌ನಿಂದ ದೂರವಿದ್ದ ಅವರು, ಯುಎಇಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡಿದರು. ಈ ಅವಧಿಯಲ್ಲಿ, ಎಂಎಸ್ ಧೋನಿ ಜೀವನ ಕುರಿತ 'The Untold Story' ಚಿತ್ರವನ್ನು ವೀಕ್ಷಿಸಿದ ಬಳಿಕ ಮತ್ತೆ ಕ್ರಿಕೆಟ್‌ಗೆ ಮರಳಬೇಕೆಂಬ ಪ್ರೇರಣೆ ಪಡೆದಿದ್ದಾರೆ ಎನ್ನಲಾಗುತ್ತದೆ. ಈ ಪ್ರೇರಣೆಯೇ ಅವರೊಳಗಿನ ಕ್ರಿಕೆಟ್ ಪ್ರೀತಿಯನ್ನು ಮತ್ತೆ ಜೀವಂತಗೊಳಿಸಿ, ಪಾಕಿಸ್ತಾನದಲ್ಲಿ ವೃತ್ತಿಪರ ಕ್ರಿಕೆಟ್‌ಗೆ ಪುನಃ ಪ್ರವೇಶಿಸಲು ಕಾರಣವಾಯಿತು ಎಂದು ತಿಳಿದುಬಂದಿದೆ.
ಅವರ ಬೌಲಿಂಗ್ ಶೈಲಿ ಚರ್ಚೆ ಹಾಗೂ ಪರಿಶೀಲನೆಗೂ ಕಾರಣವಾಗಿತ್ತು. ದೇಶೀಯ ಟಿ20 ಲೀಗ್‌ಗಳಲ್ಲಿ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಆಕ್ಷನ್ ಬಗ್ಗೆ ಸಂಶಯ ವ್ಯಕ್ತವಾದ ಬಗ್ಗೆ ವರದಿಯಾಗಿತ್ತು. ಆದರೆ, ಪಾಕಿಸ್ತಾನದಲ್ಲಿ ನಡೆಸಿದ ಬಯೋಮೆಕ್ಯಾನಿಕಲ್ ಪರೀಕ್ಷೆಗಳ ಬಳಿಕ ಅವರ ಆಕ್ಷನ್ ಮಾನ್ಯವಾಗಿದೆ ಎಂದು ಸ್ಪಷ್ಟಪಡಿಸಲಾಯಿತು.
ಅಭಿಮಾನಿಗಳು ಹಾಗೂ ಬೆಂಬಲಿಗರ ಪ್ರಕಾರ, ಅವರು ನಿಧಾನಗತಿಯಲ್ಲಿ ಮಾಡುವ ಬೌಲಿಂಗ್ ಶೈಲಿ ಹಾಗೂ ವೈವಿಧ್ಯತೆಗಳು ಅವರನ್ನು ಪರಿಣಾಮಕಾರಿ ಬೌಲರ್ ಆಗಿ ರೂಪಿಸುತ್ತವೆ. ವಿಶೇಷವಾಗಿ ಸೀಮಿತ ಓವರ್‌ಗಳ ಫಾರ್ಮಾಟ್ ಕ್ರಿಕೆಟ್‌ನಲ್ಲಿ. ಮತ್ತೊಂದೆಡೆ ಇನ್ನೂ ಕೆಲವರು ಅವರ ಬೌಲಿಂಗ್ ಶೈಲಿ ಕುರಿತು ಅನುಮಾನ ವ್ಯಕ್ತಪಡಿಸಿದ್ದು, ಇದು ಯಾವ ರೀತಿಯ ಬೌಲಿಂಗ್? ಎಂದು ಪ್ರಶ್ನೆ ಮಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications