ಸುರೇಶ್ ರೈನಾ ನಿವೃತ್ತಿ ವಾಪಾಸ್ ಪಡೆಯುತ್ತಾರಾ?: ಅಚ್ಚರಿ ಮೂಡಿಸಿದೆ ಮಾಜಿ ವೇಗಿಯ ಹೇಳಿಕೆ

ಟೀಮ್ ಇಂಡಿಯಾ ಆಟಗಾರ ಸುರೇಶ್ ರೈನಾ ಮಾಜಿ ನಾಯಕ ಎಂಎಸ್ ಧೋನಿ ವಿದಾಯ ಹೇಳಿದ ಕೆಲವೇ ಕ್ಷಣಗಳಲ್ಲಿ ತಾನೂ ವಿದಾಯವನ್ನು ಘೋಷಿಸಿ ಅಚ್ಚರಿಯನ್ನು ಮೂಡಿಸಿದ್ದರು. ಧೋನಿ ನಿವೃತ್ತಿಯ ಬಗ್ಗೆ ಆಗಾಗ ಮಾತುಗಳು ಗಾಳಿಸುದ್ದಿಗಳು ಹರಿದಾಡುತ್ತಿದ್ದರೂ ಸುರೇಶ್ ರೈನಾ ನಿವೃತ್ತಿಯನ್ನು ಇಷ್ಟು ಬೇಗ ಯಾರೂ ಊಹಿಸಿರಲಿಲ್ಲ.
ಈ ಮಧ್ಯೆ ಟೀಮ್ ಇಂಡಿಯಾದ ಮಾಜಿ ವೇಗಿ ಸುರೇಶ್ ರೈನಾ ಆಪ್ತ ಗೆಳೆಯರಲ್ಲೊಬ್ಬರಾದ ಆರ್‌ಪಿ ಸಿಂಗ್ ನಿವೃತ್ತಿ ಹೇಳಿದ ಸುರೇಶ್ ರೈನಾ ನಿರ್ಧಾರದ ಬಗ್ಗೆ ಅಚ್ಚರಿಯ ಮಾತೊಂದನ್ನು ಹೇಳಿದ್ದಾರೆ. "ಸುರೇಶ್ ರೈನಾ ಸ್ವಲ್ಪ ಬೇಗನೆ ನಿವೃತ್ತಿಯನ್ನು ಘೋಷಣೆ ಮಾಡಿದ್ದು ಹೆಚ್ಚಿನ ಜನರಿಗೆ ಅಚ್ಚರಿಯನ್ನುಂಟು ಮಾಡಿದೆ ಎಂದು ಹೇಳಿಕೆಯನ್ನು ನೀಡಿದ್ದಾರೆ.

"ರೈನಾ ಪುನರಾಗಮನದ ಸಾಧ್ಯತೆ"
ಸುರೇರ್ಶ ರೈನಾ ನಿವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ ಆರ್‌ಪಿ ಸಿಂಗ್ "ಓರ್ವ ದೈಹಿಕವಾಗಿ ಎಷ್ಟು ಸದೃಢರಾಗಿದ್ದಾರೆ ಎಂಬುದನ್ನು ಯೋಚಿಸಬೇಕು, ಭಾರತ ತಂಡಕ್ಕೆ ಅವರ ಪುನರಾಗಮನದ ಸಾಧ್ಯತೆಯ ಬಗ್ಗೆ ಪ್ರತಿಯೊಬ್ಬರು ಆಲೋಚನೆಯನ್ನು ಮಾಡಬೇಕು" ಎಂದು ಪ್ರತಿಕ್ರಿಯಿಸಿ ಅಚ್ಚರಿಯನ್ನು ಮೂಡಿಸಿದ್ದಾರೆ.

ಐಪಿಎಲ್ ಪ್ರದರ್ಶನದ ಮೂಲಕ ಮರಳಬಹುದು
ಐಪಿಎಲ್‌ನಲ್ಲಿ ಸುರೇಶ್ ರೈನಾ 1000 ರನ್ ದಾಖಲಿಸಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವ ಆಶಯವನ್ನು ವ್ಯಕ್ತಪಡಿಸಲೂ ಬಹುದು. ಆದರೆ ಯಾವುದನ್ನಾದರೂ ತ್ಯಜಿಸಲು ಯೋಚಿಸುವಾಗ ನೀವು ಕಠಿಣರಾಗಿ ಯೋಚಿಸುತ್ತೀರಿ. ರೈನಾ ಎಲ್ಲಾ ಸಾಧ್ಯತೆಗಳ ಬಗ್ಗೆ ಖಂಡಿತಾ ಆಲೋಚನೆಯನ್ನು ಮಾಡಿಯೇ ಇರುತ್ತಾರೆ. ಯಾರಿಗೊತ್ತು ಯುವರಾಜ್ ಸಿಂಗ್ ರೀತಿ ಅವರು ಕೂಡ ವಿದೇಶಿ ಟೂರ್ನಿಯಲ್ಲಿ ಪಾಲ್ಗೋಳ್ಳುವ ಯೋಚನೆಯೂ ಇರಬಹುದು ಎಂದು ಆರ್‌ಪಿ ಸಿಂಗ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ತಂಡಕ್ಕೆ ವಾಪಾಸ್ಸಾಗುವ ಬಗ್ಗೆ ಹೇಳಿದ್ದರು
ನನಗೆ ಅಚ್ಚರಿಯಾಗಿದ್ದು ಆತನ ನಿರ್ಧಾರದ ಬಗ್ಗೆ. ಸುರೇಶ್ ರೈನಾ ಇತ್ತೀಚೆಗಷ್ಟೇ ಮಾತನಾಡುತ್ತಾ ಟೆಸ್ಟ್ ಕ್ರಿಕೆಟ್‌ಗೆ ಮರಳುವ ಆಶಯವನ್ನು ವ್ಯಕ್ತಪಡಿಸಿ ಹೇಳಿಕೆಯನ್ನು ನೀಡಿದ್ದರು. ಇರ್ಫಾನ್ ಪಠಾಣ್ ಜೊತೆಗಿನ ಸಂವಾದದಲ್ಲಿ ಈ ಮಾತುಗಳನ್ನು ಸುರೇಶ್ ರೈನಾ ಹೇಳಿದ್ದರು ಎಂದು ಆರ್‌ಪಿ ಸಿಂಗ್ ಹೇಳಿದ್ದಾರೆ.

ಸುರೇಶ್ ರೈನಾ ನಿವೃತ್ತಿ ಬಗ್ಗೆ ಪ್ರಧಾನಿ ಮಾತು
ಸುರೇಶ್ ರೈನಾ ನಿವೃತ್ತಿ ಹೇಳಿದ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಸುರೇಶ್ ರೈನಾಗೆ ಪತ್ರವನ್ನು ಬರೆದಿದ್ದರು. ಈ ಪತ್ರದಲ್ಲೂ ಪ್ರಧಾನಿ ನರೇಂದ್ರ ಮೋದಿ ರೈನಾ ನಿವೃತ್ತಿಯ ವಯಸ್ಸಿನ ಬಗ್ಗೆ ಹೇಳಿಕೊಂಡಿದ್ದರು. ನಿವೃತ್ತಿ ಎಂಬ ಪದವನ್ನು ಉಪಯೋಗಿಸಲು ನನಗೆ ಇಷ್ಟವಾಗುತ್ತಿಲ್ಲ. ಯಾಕೆಂದರೆ ಅದಕ್ಕೆ ನೀವು ಇನ್ನೂ ಚಿಕ್ಕವರು ಎಂದು ತಮ್ಮ ಪತ್ರದಲ್ಲಿ ಪ್ರಧಾನಿಗಲು ಉಲ್ಲೇಖಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications