2019ರ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಪಂತ್ ಬೇಕಾ, ಇಲ್ಲ ದಿನೇಶ್ ಕಾರ್ತಿಕಾ?

ನವದೆಹಲಿ, ಫೆಬ್ರವರಿ 15: ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯುವ 2019ರ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಎರಡನೇ ವಿಕೆಟ್ ಕೀಪರ್ ಆಗಿ ಯಾರಿರಬೇಕು? ರಿಷಬ್ ಪಂತಾ ಅಥವಾ ದಿನೇಶ್ ಕಾರ್ತಿಕಾ? ಕ್ರಿಕೆಟ್ ವಲಯದಲ್ಲಿ ಹೀಗೊಂದು ಪ್ರಶ್ನೆ ಶುರುವಾಗಿದೆ. ಇಬ್ಬರಲ್ಲಿ ಒಬ್ಬರನ್ನಾರಿಸುವುದು ಬಿಸಿಸಿಐಗೀಗ ತಲೆನೋವಾಗಿದೆ.
2019ರ ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಎಂಎಸ್ ಧೋನಿಗೆ ಸ್ಥಾನ ಲಭಿಸುವುದಂತೂ ಪಕ್ಕಾ ಆಗಿದೆ. ಆದರೆ ಎರಡನೇ ಕೀಪರ್ ಆಯ್ಕೆಯಾಗಿ ಯಾರನ್ನು ಆರಿಸಬೇಕೋ ಎಂಬ ಗೊಂದಲ ಮುಗಿದಿಲ್ಲ. ಮೂಲಗಳ ಪ್ರಕಾರ ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಬಹುತೇಕ ಖಚಿತ.
ಮಾಜಿ ಆಟಗಾರ ಆಶೀಷ್ ನರಹ್ರಾ ಅವರು ಪಂತ್‌ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಬೇಕು ಎಂದು ಹೇಳಿದ್ದರು. ಆದರೆ ಯಾಕೆ ದಿನೇಶ್ ಕಾರ್ತಿಕ್ ಮುಂದಿನ ವಿಶ್ವಕಪ್ ನಲ್ಲಿ ಪಂತ್ ಬದಲಿಗೆ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ? ಪಂತ್‌ಗೆ ಯಾಕಿಲ್ಲ ಅನ್ನೋದಕ್ಕೆ ಇಲ್ಲೊಂದಿಷ್ಟು ಅಂಶಗಳಿಗೆ.

ಯಾಕೆ ದಿನೇಶ್ ಕಾರ್ತಿಕ್‌ಗೆ ಸ್ಥಾನ?
ಯಾಕೆ ದಿನೇಶ್ ಕಾರ್ತಿಕ್‌ಗೆ ಸ್ಥಾನ? ಪಂತ್‌ಗೆ ಯಾಕಿಲ್ಲ ಅಂತ ಪ್ರಶ್ನಿಸುವವರಿರಬಹುದು. ಆದರೆ ಇದಕ್ಕೆ ಕಾರಣಗಳಿವೆ. ಎಂಎಸ್ ಧೋನಿಗೀಗ 37ರ ಹರೆಯ. ಇನ್ನೂ ಧೋನಿ ಹಿಂದಿನ ಪ್ರಖರತೆ ಉಳಿಸಿಕೊಳ್ಳೋದು ದೂರದ ಮಾತು. ವಯೋಸಹಜವಾಗಿ ಧೋನಿ ಇನ್ನೂ ಬಹಳಷ್ಟು ಕಾಲ ಬೆಸ್ಟ್ ಫಿನಿಷರ್ ಆಗಿಯೇ ಉಳಿಯೋದೂ ಸಾಧ್ಯವಿಲ್ಲ.

ಬಿಸಿಸಿಐ ಬುದ್ಧಿವಂತಿಕೆ
ಜನಪ್ರಿಯ ಕ್ರೀಡೆಯಾದ ಕ್ರಿಕೆಟ್‌ಗೆ ಭಾರತ ತಂಡಕ್ಕೊಬ್ಬ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್‌ನ ಅಗತ್ಯವಿದೆ. ಹೀಗಾಗಿಗೇ ಇತ್ತೀಚಿಗೆ ಏಕದಿನ ಪಂದ್ಯಗಳಲ್ಲಿ ತಂಡದಲ್ಲಿ ದಿನೇಶ್ ಕಾರ್ತಿಕ್‌ಗೆ ಸ್ಥಾನ ನೀಡಲಾಗುತ್ತಿದೆ. ಒಟ್ಟಿನಲ್ಲಿ ಬಿಸಿಸಿಐ ಈ ವಿಚಾರದಲ್ಲಿ ಬುದ್ಧಿವಂತಿಕೆಯನ್ನೂ ಪ್ರದರ್ಶಿಸುತ್ತಿದೆ.

ಪಂದ್ಯ ಗೆಲ್ಲಿಸಿದ್ದ ಕಾರ್ತಿಕ್
2018ರ ನಿದಹಾಸ್ ಟ್ರೋಫಿ ಫೈನಲ್ ಪಂದ್ಯದತ್ತ ಹೋಗೋಣ. ಅಂದು ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಿದ್ದವು. ಕೊನೆಕ್ಷಣದಲ್ಲಿ ಭಾರತಕ್ಕೆ ಗೆಲ್ಲಲು 12 ಎಸೆಗಳಲ್ಲಿ 34 ರನ್‌ಗಳ ಅಗತ್ಯವಿತ್ತು. ಈ ವೇಳೆ ದಿನೇಶ್ ಎಂಟ್ರಿಯಾಗಿತ್ತು. ತಂಡದ ಗೆಲುವಿನ ಪಣತೊಟ್ಟು ನಿಂತ ಕಾರ್ತಿಕ್ ಸಿಕ್ಸ್ ಬೌಂಡರಿಗಳನ್ನು ಬಾರಿಸಲಾರಂಭಿಸಿದರು. ಕೊನೆಯ ಎಸೆತಕ್ಕೆ ಭಾರತಕ್ಕೆ 5 ರನ್‌ಗಳ ಅಗತ್ಯವಿತ್ತು. ದಿನೇಶ್ ಸಿಕ್ಸ್ ಚಚ್ಚಿದ್ದರು!

ಅನುಭವಕ್ಕೆ ಮಣೆ
ಪ್ರಮುಖ ಪಂದ್ಯಗಳಿರುವಾಗ ಹೊಸತನ ಮತ್ತು ಪ್ರಯೋಗದ ಮೊರೆ ಹೋಗುವುದಕ್ಕಿಂತ ಅನುಭವಕ್ಕೆ ಬಿಸಿಸಿಐ ಮಾನ್ಯತೆ ನೀಡೋದೇ ಹೆಚ್ಚು. ಇವೆಲ್ಲದಕ್ಕಿಂತ ಮುಖ್ಯವಾಗಿ ಪಂತ್‌ಗೆ ಇನ್ನೂ 21ರ ಹರೆಯ. ಅವರಿಗೆ ಇನ್ನೂ ಸಾಕಷ್ಟು ಅವಕಾಶಗಳಿವೆ. ಹೀಗಾಗಿ ಈ ಬಾರಿ ವಿಶ್ವಕಪ್ ವೇಳೆ ದಿನೇಶ್ ಕಾರ್ತಿಕ್ ಭಾರತ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications