WTC Final: ಡ್ರಾ ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟ ಯಾರಿಗೆ?: ಭಾರತಕ್ಕಾ? ಆಸ್ಟ್ರೇಲಿಯಕ್ಕಾ?
ಹೈವೋಲ್ಟೇಜ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಸೆಣೆಸಾಡಲು ಟೆಸ್ಟ್ ಮಾದರಿಯ ಎರಡು ಬಲಿಷ್ಠ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಈ ಪ್ರತಿಷ್ಠಿತ ಪಂದ್ಯ ಜೂನ್ 7ರಿಂದ ಒಂಡನ್‌ದ ಓವಲ್ ಮೈದಾನದಲ್ಲಿ ಆರಂಭವಾಗಲಿದ್ದು ಎರಡು ತಂಡಗಳು ಕೂಡ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಈ ಫೈನಲ್ ಪಂದ್ಯಕ್ಕೆ ಆಸ್ಟ್ರೇಲಿಯಾ ಮೊದಲ ಸ್ಥಾನಿಯಾಗಿ ಪ್ರವೇಶ ಒಡೆದುಕೊಂಡಿದ್ದರೆ ಭಾರತ ಎರಡನೇ ಸ್ಥಾನಿಯಾಗಿ ಪ್ರವೇಶ ಪಡೆದುಕೊಂಡಿದೆ.
ಎರಡು ಅತ್ಯುತ್ತಮ ತಂಡಗಳ ನಡುವಿನ ಸೆಣೆಸಾಟವಾಗಿರುವ ಕಾರಣ ವಿಶ್ವ ಕ್ರಿಕೆಟ್‌ನ ಅಭಿಮಾಣಿಗಳು ಈ ಎರಡು ತಂಡಗಳ ಮುಖಾಮುಖಿಗಾಗಿ ಎದುರುನೋಡುತ್ತಿವೆ. ಆದರೆ ಇಂಗ್ಲೆಂಡ್‌ಲ್ಲಿ ಈ ಪಂದ್ಯ ನಡೆಯುತ್ತಿರುವ ಕಾರಣ ಎರಡು ತಂಡಗಳು ಕೂಡ ಭಿನ್ನವಾದ ವಾತಾವರಣದಲ್ಲಿ ಸೆಣೆಸಾಡುತ್ತಿದೆ. ಅದರಲ್ಲೂ ಇದು ಭಾರತ ತಂಡಕ್ಕೆ ಹೆಚ್ಚಿನ ಸವಾಲಿನಿಂದ ಕೂಡಿರಲಿದೆ ಎಂಬ ವಿಶ್ಲೇಷಣೆಗಳು ನಡೆದಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸತತ ಎರಡನೇ ಬಾರಿಗೆ ಭಾರತ ತಂಡ ಫೈನಲ್‌ಗೆ ಪ್ರವೇಶಿಸಿದೆ. ಕಳೆದ ಬಾರಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲು ಅನುಭವಿಸಿ ರನ್ನರ್‌ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ ಭಾರತ ತಂಡಕ್ಕೆ ಮತ್ತೊಮ್ಮೆ ಅವಕಾಶವಿದ್ದು ಸುದೀರ್ಘ ಕಾಲದಿಂದ ಕಾಡುತ್ತಿರುವ ಐಸಿಸಿ ಟ್ರೋಫಿಯ ಕೊರತೆ ನೀಗಲಿದೆಯಾ ಎಂಬುದು ಪ್ರಶ್ನೆಯಾಗಿದೆ.
ಡ್ರಾ ಆದರೆ ಕಥೆಯೇನು?
ಇನ್ನು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸಾಕಷ್ಟು ಪ್ರಮಾಣದಲ್ಲಿ ಮ್ಯಾಚ್‌ವಿನ್ನರ್‌ಗಳನ್ನು ಹೊಂದಿದ್ದು ತೀವ್ರ ಪೈಪೊಟಿಯ ಪಂದ್ಯ ನಡೆಯುವುದರಲ್ಲಿ ಅನುಮಾನವಿಲ್ಲ. ಇನ್ನು ಇದು ಟೆಸ್ಟ್ ಮಾದರಿಯಾಗಿರುವ ಕಾರಣ ಎರಡು ಪಂದ್ಯಗಳಿಗೆ ಗೆಲ್ಲುವ ಅವಕಾಶವಿರುವ ಜೊತೆಗೆ ಡ್ರಾ ಫಲಿತಾಂಶದ ಸಾಧ್ಯತೆಯೂ ಇದ್ದೇ ಇದೆ. ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹಾಗಾದರೆ ಡ್ರಾ ಫಲಿತಾಂಶ ಹೊರಬಿದ್ದಲ್ಲಿ ಯಾರಿಗೆ ಚಾಂಪಿಯನ್ ಪಟ್ಟ ಎಂಬುದು ಕುತೂಹಲ ಮೂಡಿಸಿದೆ.
ಅಂಕಪಟ್ಟಿ ಅಗ್ರಸ್ಥಾನ ಪಡೆದ ತಂಡಕ್ಕೆ ಸಿಗುತ್ತಾ ಚಾಂಪಿಯನ್ ಪಟ್ಟ!?
ಇನ್ನು ವಿರ್ಶವ ಟೆಸ್ಟ್ ಚಾಂಪಿಯನ್ ಶಿಪ್‌ನ ಈ ಸರ್ಕಲ್‌ನ ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದು ಫೈನಲ್‌ಗೆ ಪ್ರವೇಶಿಸಿದ ತಂಡ ಆಸ್ಟ್ರೇಲಿಯಾ. ಭಾರತ ಎರಡನೇ ಸ್ಥಾನಿಯಾಗಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು. ಆದರೆ ಡ್ರಾ ಆದ ಸಂದರ್ಭದಲ್ಲಿ ಅಂಕಪಟ್ಟಿಯ ಆಧಾರದಲ್ಲಿ ಚಾಂಪಿಯನ್ ತಂಡವನ್ನು ನಿರ್ಧರಿಸುವುದಿಲ್ಲ. ಹೀಗಾಗಿ ಡ್ರಾಆದಲ್ಲಿ ಅದು ಆಸ್ಟ್ರೇಲಿಯಾ ತಂಡಕ್ಕೆ ಲಾಭವಾಗದು.
ಟ್ರೋಫಿಯನ್ನು ಹಂಚಿಕೊಳ್ಳಲಿವೆ ತಂಡಗಳು
ಹೌದು ಫೈನಲ್ ಪಂದ್ಯ ಡ್ರಾ ಫಲಿತಾಂಶದ ಮೂಲಕ ಅಂತ್ಯಗೊಂಡಲ್ಲಿ ಆಗ ಎರಡು ತಂಡಗಳು ಕೂಡ ಟ್ರೋಫಿಯನ್ನು ಹಂಚಿಕೊಳ್ಳುತ್ತವೆ. ಈ ಮೂಲಕ ಆವೃತ್ತಿಗೆ ಎರಡು ಚಾಂಪಿಯನ್ ತಂಡಗಳಾಗಿ ಹೊರಹೊಮ್ಮಲಿದೆ. ಇನ್ನು ಮೀಸಲು ದಿನ ನೀಡಲಾಗಿದ್ದರು ಕೂಡ ಅದು ಮಳೆಯಿಂದಾಗಿ ಪಟ್ಟದ ಅವಧಿ ಕಡಿತಗೊಂಡಿದ್ದರೆ ಮಾತ್ರವೇ ಬಳಸಲಾಗುತ್ತದೆ. ಇಲ್ಲವಾದರೆ ನಿಗದಿತ ದಿನದಂದೇ ಪಂದ್ಯ ಅಂತ್ಯವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications