Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್‌ಎಸ್‌ಜಿ ನಾಯಕತ್ವದ ಮೇಲೆ ಕಣ್ಣು ನೆಟ್ಟಿರುವ 5 ಆಟಗಾರರು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿ ರೋಚಕ ಘಟ್ಟ ತಲುಪಿದೆ. ಭಾನುವಾರ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಪ್ರಶಸ್ತಿಗಾಗಿ ಕಾದಾಟವನ್ನು ನಡೆಸಲಿವೆ. ಈ ವೇಳೆ ಹಲವು ತಂಡಗಳು ಪ್ಲೇ ಆಫ್‌ ಪ್ರವೇಶಿಸುವಲ್ಲೇ ವಿಫಲವಾಗಿವೆ. ಈ ಸಾಲಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸಹ ಕಾಣಿಸಿಕೊಳ್ಳುತ್ತದೆ. ಈ ಬಾರಿಯ ಲೀಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಎಲ್‌ಎಸ್‌ಜಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ಲೀಗ್‌ಗೆ ಗುಡ್‌ ಬೈ ಹೇಳಿದೆ.

ಎಲ್‌ಎಸ್‌ಜಿ ಲೀಗ್‌ ಹಂತದಲ್ಲೇ ಹೊರ ನಡೆದಿದ್ದು, ನಾಯಕ ರಿಷಭ್‌ ಪಂತ್ ಅವರ ನಾಯಕತ್ವದ ಮೇಲೆ ಹಲವು ಪ್ರಶ್ನೆಗಳು ಏಳುವಂತೆ ಮಾಡಿವೆ. ಪರಿಣಾಮ ಶುಕ್ರವಾರ ರಿಷಭ್‌ ಪಂತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಿದ್ದರೆ ಮುಂದಿನ ಆವೃತ್ತಿಯಲ್ಲಿ ಎಲ್‌ಎಸ್‌ಜಿ ತಂಡವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.

Who Will Lead

ಆಯುಷ್ ಬದೋನಿ

ಎಲ್‌ಎಸ್‌ಜಿ ರಿಷಭ್‌ ಪಂತ್‌ ಬದಲಿಗೆ ಭಾರತೀಯ ಆಟಗಾರರನ್ನು ನಾಯಕರಾಗಿ ಉಳಿಸಿಕೊಳ್ಳಲು ಬಯಸಿದಲ್ಲಿ ಭರವಸೆಯ ಬ್ಯಾಟರ್ ಆಯುಷ್ ಬದೋನಿ ಜಾಕ್‌ಪಾಟ್‌ ಹೊಡೆಯಬಹುದಾಗಿದೆ. ಬದೋನಿ ಪ್ರಸ್ತುತ ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ತಂಡದ ನಾಯಕರಾಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಇತಿಹಾಸದಲ್ಲಿ ಐಪಿಎಲ್‌ನಲ್ಲಿ ಫ್ರಾಂಚೈಸಿಗಾಗಿ 1,000 ಕ್ಕೂ ಹೆಚ್ಚು ರನ್ ಗಳಿಸಿದ ಕೇವಲ ನಾಲ್ಕು ಬ್ಯಾಟ್ಸ್‌ಮನ್‌ಗಳಲ್ಲಿ ಅವರು ಒಬ್ಬರು.

ಜೋಶ್ ಇಂಗ್ಲಿಸ್

ಆಸ್ಟ್ರೇಲಿಯಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ ಐಪಿಎಲ್ 2026 ರಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಎಲ್‌ಎಸ್‌ಜಿ ತಂಡಕ್ಕೆ ಆಧಾರವಾದ ಆಟಗಾರ. ಇವರ ಭರ್ಜರಿ ಪ್ರದರ್ಶನದ ಫಲವಾಗಿ ಎಲ್‌ಎಸ್‌ಜಿ ಇವರಿಗೆ ನಾಯಕತ್ವದ ಆಫರ್ ನೀಡಬಹುದಾಗಿದೆ. ಇವರು ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.

ನಿಕೋಲಸ್ ಪೂರನ್

ಕೆರಿಬಿಯನ್ ತಾರೆ ನಿಕೋಲಸ್ ಪೂರನ್ ಎಲ್‌ಎಸ್‌ಜಿ ತಂಡದ ನಂಬಿಕಸ್ಥ ಆಟಗಾರ. ಇವರು ಎಲ್‌ಎಸ್‌ಜಿ ಪರ 57 ಪಂದ್ಯಗಳಲ್ಲಿ ದಾಖಲೆಯ 1,615 ರನ್ ಗಳಿಸಿದ್ದಾರೆ. ಪೂರನ್ ಅವರಿಗೆ ವೆಸ್ಟ್ ಇಂಡೀಸ್ ತಂಡ ಮುನ್ನಡೆಸಿದ ಅನುಭವ ಸಹ ಇದೆ. ಅಲ್ಲದೆ ವಿಶ್ವದ ಬೇರೆ ಲೀಗ್‌ಗಳಲ್ಲಿ ನಾಯಕತ್ವ ವಹಿಸಿಕೊಂಡ ಅನುಭವ ಹೊಂದಿದ್ದಾರೆ.

ಮಿಚೆಲ್ ಮಾರ್ಷ್

ಎಲ್‌ಎಸ್‌ಜಿ ನಾಯಕತ್ವದ ರೇಸ್‌ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ಆಸ್ಟ್ರೇಲಿಯಾದ ಟಿ20 ನಾಯಕ ಮಿಚೆಲ್ ಮಾರ್ಷ್. ಇವರು ಎಲ್‌ಎಸ್‌ಜಿ ತಂಡದ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೆ ಆಡಿದ 26 ಐಪಿಎಲ್ ಪಂದ್ಯಗಳಲ್ಲಿ 1,190 ರನ್ ಗಳಿಸಿದ್ದಾರೆ. ಇವರು 2025 ಮತ್ತು 2026 ರ ಐಪಿಎಲ್ ಎಲ್‌ಎಸ್‌ಜಿ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌. ಇವರ ಅನುಭವಕ್ಕೆ ಆದ್ಯತೆ ನೀಡಿ, ಮ್ಯಾನೇಜ್‌ಮೆಂಟ್ ಅವರಿಗೆ ಮಹತ್ವದ ಜವಾಬ್ದಾರಿಯನ್ನು ವಹಿಸಬಹುದು.

ಐಡೆನ್ ಮಾರ್ಕ್ರಮ್

ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಮ್ ಅವರಿಗೆ ಸಹ ನಾಯಕತ್ವವನ್ನು ನಿಭಾಯಿಸಿದ ಅನುಭವ ಇದೆ. ಅವರು ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು ಸತತ ಎರಡು ಎಸ್‌ಎ20 ಚಾಂಪಿಯನ್ ಪಟ್ಟ ಅಲಂಕರಿಸುವಂತೆ ಮಾಡುವಲ್ಲಿ ಇವರ ಪಾತ್ರ ದೊಡ್ಡದು. ಕಳೆದ ಎರಡು ಋತುಗಳಲ್ಲಿ ಅವರು ಎಲ್‌ಎಸ್‌ಜಿ ಪರ 25 ಪಂದ್ಯಗಳಲ್ಲಿ 676 ರನ್ ಗಳಿಸಿದ್ದಾರೆ.

Story first published: Saturday, May 30, 2026, 12:53 [IST]
Other articles published on May 30, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+