For Quick Alerts
ALLOW NOTIFICATIONS  
For Daily Alerts
 

IPL 2026: ರಾಜಸ್ಥಾನ ರಾಯಲ್ಸ್‌ ತಂಡದ ನಾಯಕ ಯಾರು?

ಐಪಿಎಲ್‌ 2026ಕ್ಕೆ ತೆರೆ ಮರೆಯ ಕಸರತ್ತುಗಳು ನಡೆದಿವೆ. ಈಗಾಗಲೇ ಆಟಗಾರರ ಪ್ರದರ್ಶನದ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿದೆ. ಇತ್ತೀಚಿಗೆ ಅಬುಧಾಬಿಯಲ್ಲಿ ಐಪಿಎಲ್‌ ಮಿನಿ ಹರಾಜು ನಡೆದಿದ್ದು, ಈ ವೇಳೆಯೂ ತಂಡಗಳು ಸ್ಟಾರ್ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿವೆ. ಇನ್ನು ಹಲವು ತಂಡಗಳು ನಾಯಕರನ್ನು ತಂಡದಲ್ಲಿ ಉಳಿಸಿಕೊಂಡಿವೆ. ಆದರೆ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್‌ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಟ್ರೇಡ್ ಆಗಿದ್ದಾರೆ.

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದ ಸಂಜು ಸ್ಯಾಮ್ಸನ್‌ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಟ್ರೇಡ್ ಮಾಡಿಕೊಂಡಿದೆ. ಇವರ ಬದಲಿಗೆ ಚೆನ್ನೈ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಹಾಗೂ ಸ್ಯಾಮ್‌ ಕರನ್‌ ಅವರನ್ನು ರಾಯಲ್ಸ್‌ ತಂಡಕ್ಕೆ ನೀಡಿದೆ. ಅನುಭವಿ ಸಂಜು ಸ್ಯಾಮ್ಸನ್‌ ಆಗಮನದಿಂದ ಚೆನ್ನೈ ಬಲಾಢ್ಯವಾದಂತೆ ಕಾಣುತ್ತಿದೆ. ಇತ್ತ ರಾಜಸ್ಥಾನ ತಂಡಕ್ಕೆ ಹೊಸ ಚಿಂತೆ ಆರಂಭವಾಗಿದೆ.

Who Will Lead Rajasthan Royals in IPL 2026 After Sanju Samson Trades to CSK

ಐಪಿಎಲ್‌ 2026ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆ ಸದ್ಯ ಅಭಿಮಾನಿಗಳ ಮನದಲ್ಲಿ ಮೂಡಿದೆ. ಹಲವು ಸ್ಟಾರ್ ಆಟಗಾರರು, ಅನುಭವಿಗಳು, ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಆಟಗಾರರು ಇದ್ದಾರೆ. ಇವರಲ್ಲಿ ಯಾರಿಗೆ ಪಟ್ಟ ಕಟ್ಟಿದರೆ ಬೆಸ್ಟ್‌ ಎಂಬ ಲೆಕ್ಕಾಚಾರ ಆರಂಭವಾಗಿದೆ. ಈ ರೇಸ್‌ನಲ್ಲಿ ಹಲವು ಹೆಸರುಗಳು ಎದ್ದು ಕಾಣುತ್ತವೆ ಅದರಲ್ಲಿ ಈ ಮೂವರು ಆಟಗಾರರು ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ರಿಯಾನ್‌ ಪರಾಗ್‌

ಈಗಾಗಲೇ ರಾಜಸ್ಥಾನ ರಾಯಲ್ಸ್‌ ತಂಡದ ಪರ ಹಲವು ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿರುವ ರಿಯಾನ್‌ ಪರಾಗ್‌, 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಪೂರ್ಣಾವಧಿಯ ನಾಯಕರಾಗಿ ನೇಮಕವಾಗಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಆದರೆ ಇವರಿಗೆ ಕೊಂಚ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಮ್ಯಾನೇಜ್ಮೆಂಟ್‌ ಇವರತ್ತ ಚಿತ್ತ ಹರಿಸುವುದು ಕಡಿಮೆ ಎಂದು ಕಾಣುತ್ತದೆ. ಆದರೆ ತಂಡದ ಆರಂಭದಿಂದಲೂ ಗೊತ್ತಿರುವ ಆಟಗಾರನಾಗಿದ್ದು, ಯುವಕರಾಗಿದ್ದರಿಂದ ಭವಿಷ್ಯದ ದೃಷ್ಟಿಯಿಂದ ರಾಯಲ್ಸ್‌ ಇವರಿಗೆ ಮಣೆ ಹಾಕಬಹುದು.

ಯಶಸ್ವಿ ಜೈಸ್ವಾಲ್‌

ರಾಜಸ್ಥಾನ ರಾಯಲ್ಸ್ ತಂಡದ ಪರ ಬಹು ವರ್ಷಗಳಿಂದ ಆಡುತ್ತಾ ಬಂದಿರುವ ಯುವ ಆಟಗಾರ ಯಶಸ್ವಿ ಜೈಸ್ವಾಲ್‌. ಟೀಮ್ ಇಂಡಿಯಾದ ಭರವಸೆಯ ಆಟಗಾರರ, ತಂಡಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇವರು ಸಹ ನಾಯಕತ್ವದ ಮೇಲೆ ಕಣ್ಣು ನೆಟ್ಟಿರುವ ಆಟಗಾರ. ಭವಿಷ್ಯದ ದೃಷ್ಟಿಯಲ್ಲಿ ರಾಜಸ್ಥಾನ ಇವರಿಗೂ ಮಣೆ ಹಾಕಬಹುದು.

Who Will Lead Rajasthan Royals in IPL 2026 After Sanju Samson Trades to CSK

ರವೀಂದ್ರ ಜಡೇಜಾ

ರಾಜಸ್ಥಾನ ತಂಡದಲ್ಲಿರುವ ಅನುಭವಿ ಆಟಗಾರರಲ್ಲಿ ರವೀಂದ್ರ ಜಡೇಜಾ ಅವರಿಗೂ ಸ್ಥಾನ. ಇವರು ಸಹ ಈ ಹಿಂದೆಯೂ ರಾಯಲ್ಸ್‌ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದರು. ಅಲ್ಲದೆ ಇವರು ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಪರ ಐಪಿಎಲ್‌ನಲ್ಲಿ ನಾಯಕರಾಗಿ ಕಾರ್ಯ ಮಾಡಿದ ಅನುಭವ ಇದೆ. ಹೀಗಾಗಿ ಇವರ ಅನುಭವ ಪರಿಗಣಿಸಿ ರಾಯಲ್ಸ್‌ ಇವರಿಗೆ ಪಟ್ಟ ಕಟ್ಟಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ.

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ರಾಜಸ್ಥಾನ ತಂಡ 18ನೇ ಆವೃತ್ತಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 4 ಜಯ, 10 ಸೋಲು ಕಂಡಿದ್ದು, ಅಂಕ ಪಟ್ಟಿಯಲ್ಲಿ 9ನೇ ಸ್ಥಾನವನ್ನು ಪಡೆದಿತ್ತು. ರಾಜಸ್ಥನ ತಂಡ ಈಗಾಗಲೇ ಒಂದು ಬಾರಿ ಐಪಿಎಲ್ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಅಲ್ಲದೆ 6 ಬಾರಿ ಪ್ಲೇ ಆಫ್‌ಗೆ ಪ್ರವೇಶ ಪಡೆದಿತ್ತು. ಆರ್‌ಆರ್‌ ಈಗ ಎರಡನೇ ಬಾರಿ ಪ್ರಶಸ್ತಿ ಎತ್ತುವ ಕನಸು ಕಾಣುತ್ತಿದೆ.

Story first published: Thursday, January 1, 2026, 8:16 [IST]
Other articles published on Jan 1, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+