Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಝಾಮ್, ಅಫ್ರಿದೀನ ಐಪಿಎಲ್‌ನಲ್ಲಿ ನೋಡೋ ಆಸೆ: ಭಾರತೀಯ ಅಧಿಕಾರಿ

Who wouldnt want to see Babar Azam and Saheen Afridi in IPL? - Surinder Khanna

ನವದೆಹಲಿ: ಪಾಕಿಸ್ತಾನದ ಆಕರ್ಷಣೀಯ ಆಟಗಾರರಾದ ಬಾಬರ್ ಅಝಾಮ್ ಮತ್ತು ಶಾಹಿನ್ ಅಫ್ರಿದಿ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನೋಡಲು ಆಸೆ. ಆದರೆ ರಾಜಕೀಯ ಅಡ್ಡಗಾಲಿನಿಂದಾಗಿ ಈ ಆಸೆ ಕೈಗೂಡಲು ಸಾದ್ಯವಿಲ್ಲ ಎಂದು ಐಪಿಎಲ್ ಗವರ್ನಿಂಗ್ ಕೌನ್ಸಿಲ್‌ನ ಸದಸ್ಯ ಸುರೀಂದರ್ ಖನ್ನಾ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದರೂ ಭಾರತೀಯ ಯಾವುದೇ ಲೀಗ್‌ಗಳಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲ. ಭಾರತೀಯ ಆಟಗಾರರೂ ಕೂಡ ಪಾಕ್‌ ವಿರುದ್ಧ ಈಗ ದ್ವಿಪಕ್ಷೀಯ ಸರಣಿ ಅಥವಾ ಇನ್ಯಾವುದೇ ಪಂದ್ಯಗಳನ್ನಾಡುತ್ತಿಲ್ಲ. ಇತ್ತಂಡಗಳ ಮಧ್ಯೆ ಕಡೇಯ ಪಂದ್ಯ ನಡೆದಿದ್ದು 2019ರ ವಿಶ್ವಕಪ್‌ನಲ್ಲಿ. ಇದರಲ್ಲಿ ಭಾರತ ಗೆದ್ದಿತ್ತು.

'ಪಾಕಿಸ್ತಾನ ಕ್ರಿಕೆಟರ್‌ಗಳು ಐಪಿಎಲ್‌ನಲ್ಲಿ ಆಡುವ ಬಗ್ಗೆ ಹೇಳೋದಾದ್ರೆ, ಎರಡೂ ತಂಡಗಳ ಆಟಗಾರರಿಗೆ ಪರಸ್ಪರ ಪಂದ್ಯ ಆಡಲು ಮನಸ್ಸಿದೆ ಎಂದು ನಾನು ಖಾತರಿಯಾಗಿ ಹೇಳಬಲ್ಲೆ. ಆದರೆ ನಾವು ಸರ್ಕಾರದ ಮಾರ್ಗದರ್ಶನವನ್ನು ಪಾಲಿಸಬೇಕಿದೆ. ನಿಮಗೆ ಇಷ್ಟ ಇರಲಿ, ಇಲ್ಲದಿರಲಿ ಸರ್ಕಾರದ ನಿಯಮ ಪಾಲಿಸಲೇಬೇಕಾಗಿದೆ,' ಎಂದು ಕ್ರಿಕೆಟ್ ಪಾಕಿಸ್ತಾನದ ಸಂದರ್ಶನದಲ್ಲಿ ಮಾತನಾಡಿದ ಖನ್ನಾ ಹೇಳಿದ್ದಾರೆ.

ಐಪಿಎಲ್ ಗರ್ನಿಂಗ್ ಕೌನ್ಸಿಲ್ ಸದಸ್ಯರೂ ಆಗಿರುವ ಖನ್ನಾ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನದ ಸ್ಟಾರ್ ಕ್ರಿಕೆಟರ್‌ಗಳಾದ ಬಾಬರ್ ಅಝಾಮ್ ಮತ್ತು ಮಾರಕ ವೇಗಿ ಶಾಹಿನ್ ಅಫ್ರಿದಿ ಅಂಥವರನ್ನು ನೇರವಾಗಿ ಸ್ವಾಗತಿಸುತ್ತಾರೆ. ಆ ಕ್ರೀಡಾಸ್ಪೂರ್ತಿ ಭಾರತೀಯ ಅಭಿಮಾನಿಗಳಲ್ಲಿದೆ ಎಂದೂ ಹೇಳಿದ್ದಾರೆ.

ಬಾಬರ್ ಅಝಾಮ್ ಮತ್ತು ಶಾಹಿನ್ ಅಫ್ರಿದಿ ಐಪಿಎಲ್‌ನಲ್ಲಿ ಆಡುವ ಬಗ್ಗೆ ಏನೆನ್ನುತ್ತೀರಿ ಎಂಬ ಕ್ರಿಕೆಟ್ ಪಾಕಿಸ್ತಾನದ ಪ್ರಶ್ನೆಗೆ ಉತ್ತರಿಸಿದ ಖನ್ನಾ, 'ಸ್ಫೋಟಕ ಬ್ಯಾಟ್ಸ್‌ಮನ್ ಬಾಬರ್ ಅಝಾಮ್ ಮತ್ತು ಯುವ ವೇಗಿ ಶಾಹಿನ್ ಅಫ್ರಿದಿ ಐಪಿಎಲ್‌ನಲ್ಲಿ ಆಡುವುದನ್ನು ಯಾರು ತಾನೇ ಇಷ್ಟಪಡಲಾರರು ಹೇಳಿ? ಎಂದು ಮರು ಪ್ರಶ್ನಿಸಿದರು.

Story first published: Saturday, September 19, 2020, 13:48 [IST]
Other articles published on Sep 19, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+