Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಡೀ ದೇಶ ಹಾರ್ದಿಕ್ ಆಟವನ್ನ ಅತ್ಯಂತ ಸೂಕ್ಷ್ಮವಾಗಿ ವೀಕ್ಷಿಸಲಿದೆ: ರವಿಶಾಸ್ತ್ರಿ

Gujart titans

ಮುಂಬರುವ ಐಪಿಎಲ್ 15ನೇ ಸೀಸನ್‌ನಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಆಟವನ್ನ ಇಡೀ ದೇಶವೇ ಕುತೂಹಲದಿಂದ ವೀಕ್ಷಿಸಲಿದೆ ಎಂದು ಭಾರತದ ಮಾಜಿ ಕ್ರಿಕೆಟ್ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು, ಆಯ್ಕೆ ಸಮಿತಿ ಸೇರಿದಂತೆ ಅಭಿಮಾನಿಗಳು ಹಾರ್ದಿಕ್ ಆಟವನ್ನ ಗಮನಿಸಲಿದ್ದಾರೆ ಎಂದು ಶಾಸ್ತ್ರಿ ನುಡಿದಿದ್ದಾರೆ.

ಹಾರ್ದಿಕ್ ಪಾಂಡ್ಯರನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೀಟೈನ್ ಮಾಡಿಕೊಳ್ಳದೆ ಬಿಡುಗಡೆ ಮಾಡಿತ್ತು. ಬೆಂಗಳೂರಿನಲ್ಲಿ ನಡೆದ ಹರಾಜು ಪ್ರಕ್ರಿಯೆಗೂ ಮುನ್ನ ಗುಜರಾತ್ ಟೈಟನ್ಸ್ ಡ್ರಾಫ್ಟ್ ಪ್ರಕ್ರಿಯೆಯಲ್ಲಿ ಖರೀದಿಸಿತು.

"ಅವರು (ಆಯ್ಕೆಗಾರರು) ತಮ್ಮ ಮನಸ್ಸಿನಲ್ಲಿ ಕೆಲವು ಸ್ಥಾನಗಳಿಗೆ ಹೊಂದಿಕೊಳ್ಳುವ ಆಟಗಾರರನ್ನು ಹುಡುಕುತ್ತಿದ್ದಾರೆ. ಇಡೀ ದೇಶವೇ ಹಾರ್ದಿಕ್ ಪಾಂಡ್ಯ ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ನಾನು ಭಾವಿಸುತ್ತೇನೆ. ಅವನು ಎಂತಹ ಮ್ಯಾಚ್ ವಿನ್ನರ್ ಅಂತ, ಎಷ್ಟು ಒಳ್ಳೆಯ ಆಟಗಾರ ಎಂಬುದು ನಮಗೆ ತಿಳಿದಿದೆ. ಈ ಐಪಿಎಲ್ ಸಮಯದಲ್ಲಿ ಅವರು ಏನು ಪ್ರದರ್ಶನ ನೀಡುತ್ತಾರೆ ಎಂಬುದನ್ನ ನೋಡಲು ಕಾತುರರಾಗಿದ್ದಾರೆ'' ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಇದರ ಜೊತೆಗೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಅನ್ನು ಕೂಡ ವೀಕ್ಷಿಸಲಿದ್ದಾರೆ. ಭಾರತವು ಯುಎಇಯಲ್ಲಿ ನಡೆದ ಕಳೆದ ಟಿ20 ವಿಶ್ವಕಪ್ 2021 ಸೀಸನ್‌ನಲ್ಲಿ ನಾಕೌಟ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು.

Story first published: Wednesday, March 23, 2022, 11:02 [IST]
Other articles published on Mar 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+