
ದುಬೈ ಇಂಟರ್‌ನ್ಯಾಷ್‌ನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಅತ್ಯಂತ ಕೂತೂಹಲದ ಕಣಜವಾಗಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ನೇರವಾಗಿ ಐಪಿಎಲ್ 2020 ಫೈನಲ್ ಟಿಕೆಟ್ ಪಡೆಯಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಬ್ಯಾಟಿಂಗ್ ಆಹ್ವಾನಿಸಿದರು. ಪರಿಣಾಮ ಡೆಲ್ಲಿ ಆಟಗಾರರು ಮೈದಾನಕ್ಕೆ ಇಳಿದಿದ್ದೇ ತಡ ಕಂಡಿದ್ದು ಡೆಲ್ಲಿ ಆಟಗಾರರ ಕೈನಲ್ಲಿ ಕಟ್ಟಿದ್ದ ಕಪ್ಪು ಬಣ್ಣದ ಬ್ಯಾಂಡ್‌ಗಳು.
ಮಂದೀಪ್ ಸಿಂಗ್ 'ಕೆಚ್ಚೆದೆಯ ಆಟಗಾರ' ಎಂದು ಶ್ಲಾಘಿಸಿದ ವಿರಾಟ್ ಕೊಹ್ಲಿ
ಒಂದು ಕ್ಷಣ ನೋಡುಗರನ್ನು ಗೊಂದಲಕ್ಕೀಡುಮಾಡಿದ್ದ ಈ ಬ್ಯಾಂಡ್‌ಗಳು, ಕಾರಣವನ್ನು ಹುಡುಕುತ್ತಾ ಹೊರಟವು. ಡೆಲ್ಲಿ ಆಟಗಾರರು ತೋಳಿಗೆ ಕಪ್ಪು ಪಟ್ಟಿ ತೊಡಲು ಪ್ರಮುಖ ಕಾರಣ ಏನು ಎಂದು ತಿಳಿಯಲು ಭಾರೀ ಕುತೂಹಲದಿಂದ ಎದುರು ನೋಡುತ್ತಿದ್ದರು. ಈ ವೇಳೆ ವೀಕ್ಷಕ ವಿವರಣೆಗಾರರು ನೈಜ ಸಂಗತಿಯನ್ನು ಬಹಿರಂಗಪಡಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಮೋಹಿತ್ ಶರ್ಮಾ ಅವರ ತಂದೆ ಮಹಿಪಾಲ್ ಶರ್ಮಾ ನಿಧನರಾದರು ಎಂಬ ಕಾರಣಕ್ಕೆ ಡೆಲ್ಲಿಯ ಎಲ್ಲಾ ಆಟಗಾರರು ಅವರಿಗೆ ಗೌರವ ಸಲ್ಲಿಸಲು ಕಪ್ಪು ಪಟ್ಟಿ ಧರಿಸಿದ್ದಾರೆ.
ಐಪಿಎಲ್ 2020ರಲ್ಲಿ ಆಟಗಾರನೊಬ್ಬ ತನ್ನ ಕುಟುಂಬದವರನ್ನು ಕಳೆದುಕೊಂಡಿದ್ದು ಇದೇ ಮೊದಲೇನಲ್ಲ. ಈ ಕಠಿಣ ಸಮಯದಲ್ಲಿ ಮೋಹಿತ್ ಶರ್ಮಾ ತಮ್ಮ ಕುಟುಂಬದೊಂದಿಗೆ ಹರಿಯಾಣದಲ್ಲಿ ಕಳೆಯುವುದನ್ನು ತಪ್ಪಿಸಿರಬಹುದು, ಆದರೆ ಇದಕ್ಕೂ ಮುನ್ನ ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ) ಕ್ರಿಕೆಟಿಗ ಮಂದೀಪ್ ಸಿಂಗ್ ಕೂಡ ಲೀಗ್ ಹಂತಗಳಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮಂದೀಪ್ ಸಿಂಗ್ ನೋವಿನಲ್ಲಿಯೂ ಉತ್ತಮ ಆಟ ಪ್ರದರ್ಶಿಸಿ ಅಜೇಯ ಅರ್ಧಶತಕವನ್ನು ತಮ್ಮ ದಿವಂಗತ ತಂದೆಗೆ ಅರ್ಪಿಸಿದ್ದರು. ಮಂದೀಪ್ ಸಿಂಗ್ ನಂತರದಲ್ಲಿ ಕೆಕೆರ್‌ನ ನಿತೀಶ್ ರಾಣಾ ಕೂಡ ಐವತ್ತು ರನ್ ಗಳಿಸಿದ ಹಿಂದಿನ ಪಂದ್ಯವೊಂದರಲ್ಲಿ ತಮ್ಮ ದಿವಂಗತ ಮಾವನಿಗೆ ಗೌರವ ತೋರಿಸಿದರು. ಅವನು ಸುರಿಂದರ್ ಎಂಬ ಹೆಸರಿನೊಂದಿಗೆ ಜರ್ಸಿಯನ್ನು ಧರಿಸಿ ತಮ್ಮ ಅರ್ಧಶತಕವನ್ನು ಅರ್ಪಿಸಿದರು.