ವಿಂಡೀಸ್ ಎದುರು ಭಾರತಕ್ಕೆ 60 ಅಂಕ, ದ.ಆಫ್ರಿಕಾ ವಿರುದ್ಧ ಬರೀ 40 ಯಾಕೆ?!

ನವದೆಹಲಿ, ಅಕ್ಟೋಬರ್ 7: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಪಾರಮ್ಯ ಮೆರೆದಿರುವ ಟೀಮ್ ಇಂಡಿಯಾ ಸದ್ಯ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್ ಪಾಯಿಂಟ್ ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲಿದೆ. ಭಾರತದ ಖಾತೆಯಲ್ಲೀಗ ಒಟ್ಟು 160 ಪಾಯಿಂಟ್‌ಗಳಿವೆ.
ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ನ್ಯೂಜಿಲೆಂಡ್ 60, 3ನೇ ಸ್ಥಾನದಲ್ಲಿರುವ ಶ್ರೀಲಂಕಾ 60, 4ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 56, 5ನೇ ಸ್ಥಾನಿ ಇಂಗ್ಲೆಂಡ್ 56, 6ನೇ ಸ್ಥಾನಿ ದಕ್ಷಿಣ ಆಫ್ರಿಕಾ 0 ಅಂಕ ಪಡೆದುಕೊಂಡಿವೆ.
ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್‌ನ ಪಾಯಿಂಟ್ ಟೇಬಲ್ ಗಮನಿಸುವ ಮುನ್ನ ಅಲ್ಲಿ ಅಂಕಗಳನ್ನು ಹಂಚಲಾಗುವ ಪರಿಯನ್ನು ಮೊದಲು ನಾವು ಅರ್ಥಮಾಡಿಕೊಳ್ಳಬೇಕಿದೆ.

ದ.ಆಫ್ರಿಕಾ ವಿರುದ್ಧ ಬರೀ 40 ಅಂಕ
ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಭಾರತ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-೦ಯಿಂದ ಗೆದ್ದುಕೊಂಡಿತ್ತು. ಅಲ್ಲಿ ಪ್ರತಿ ಪಂದ್ಯಕ್ಕೆ 60ರಂತೆ ಅಂಕ ಕಲೆ ಹಾಕಿದ್ದ ಭಾರತ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದ ಗೆಲುವಿಗೆ ಬರೀ 40 ಪಾಯಿಂಟ್ ಗಳಿಸಿದೆ. ಹೀಗೇಕೆ?

ಸರಣಿಗೆ 120 ಅಂಕಗಳು
ಟೆಸ್ಟ್ ಚಾಂಪಿಯನ್‌ಷಿಪ್ ಪಂದ್ಯಗಳು ಸರಣಿಗೆ 120 ಅಂಕಗಳಂತೆ ನಡೆಸಲ್ಪಡುತ್ತವೆ. ಅಂದರೆ ಸರಣಿಯ ಪಂದ್ಯಗಳನ್ನು ಅವಲಂಭಿಸಿ ಅಂಕಗಳನ್ನು ವಿಭಾಜಿಸಲಾಗಿದೆ. ಅಷ್ಟೇ ಅಲ್ಲ, ಪಂದ್ಯದ ಜಯ, ಟೈ ಮತ್ತು ಡ್ರಾಗಳಿಗೆ ಸಂಬಂಧಿಸಿಯೂ ಅಂಕಗಳನ್ನು ಹಂಚಲಾಗುತ್ತದೆ.

ಪಂದ್ಯಗಳಿಗನುಸಾರ ಅಂಕ ಹಂಚುವ ರೀತಿ ಇಲ್ಲಿದೆ
ಸರಣಿಯ ಪಂದ್ಯಗಳು (2)-ಜಯ/ಟೈ/ಡ್ರಾ-60/30/20
ಸರಣಿಯ ಪಂದ್ಯಗಳು (3)-ಜಯ/ಟೈ/ಡ್ರಾ-40/20/13
ಸರಣಿಯ ಪಂದ್ಯಗಳು (4)-ಜಯ/ಟೈ/ಡ್ರಾ-30/15/10
ಸರಣಿಯ ಪಂದ್ಯಗಳು (5)-ಜಯ/ಟೈ/ಡ್ರಾ-24/12/8

ಭಾರತ 160 ಅಂಕ ಗೆದ್ದಿದ್ದು ಹೀಗೆ
ವೆಸ್ಟ್ ಇಂಡೀಸ್ ಸರಣಿಯಲ್ಲಿ ಎರಡೇ ಪಂದ್ಯಗಳು ಇದ್ದಿದ್ದರಿಂದ ಪ್ರತೀ ಪಂದ್ಯಗಳಿಗೆ 60 ಅಂಕಗಳಿದ್ದವು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ 3 ಪಂದ್ಯಗಳನ್ನು ಒಳಗೊಂಡಿದೆ. ಹೀಗಾಗಿ 3 ಪಂದ್ಯಗಳಿಗೂ 40ರಂತೆ ಅಂಕ ಹಂಚಲಾಗಿದೆ. ಅಂದರೆ ವೆಸ್ಟ್ ಇಂಡೀಸ್ ವಿರುದ್ಧ 2 ಪಂದ್ಯಗಳಿಗೆ 120, ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಪಂದ್ಯದ ಗೆಲುವಿಗೆ 40 ಅಂಕ. ಹೀಗೆ ಭಾರತಕ್ಕೆ ಒಟ್ಟು 160 ಅಂಕಗಳು ಲಭಿಸಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications