Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rashid Khan: ಬಿಗ್ ಬ್ಯಾಷ್ ಲೀಗ್‌ನಿಂದ ರಶೀದ್ ಖಾನ್ ಹೊರನಡೆದದ್ದೇಕೆ?

ಆಗಸ್ಟ್ 19 ಸೋಮವಾರ, ಅಫ್ಘಾನಿಸ್ತಾನದ ನಾಯಕ ರಶೀದ್ ಖಾನ್‌ ಸತತ ಎರಡನೇ ವರ್ಷವೂ 2024ರ ಬಿಗ್ ಬ್ಯಾಷ್ ಲೀಗ್‌ (ಬಿಬಿಎಲ್‌) ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇದರಿಂದ ಆಸ್ಟ್ರೇಲಿಯಾ ಕ್ರಿಕೆಟ್ ಮತ್ತು ರಶೀದ್ ಖಾನ್ ಪ್ರತಿನಿಧಿಸುವ ಅಡಿಲೇಡ್ ಸ್ಟ್ರೈಕರ್ಸ್‌ ತಂಡಕ್ಕೂ ಹಿನ್ನಡೆಯಾಗಿದೆ.

ರಶೀದ್ ಬಿಬಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ದೊಡ್ಡ ಹೆಸರು ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಬಿಗ್ ಬ್ಯಾಷ್ ಲೀಗ್‌ನಿಂದ ಹೊರನಡೆದಿರುವುದು ಅಡಿಲೇಡ್ ಸ್ಟ್ರೈಕರ್ಸ್‌ ತಂಡಕ್ಕೆ ಆಂತರಿಕ ಹೊಡೆತ ಕೊಟ್ಟಿದೆ.

Why Rashid Khan Walked Out of Big Bash League 2024

ಇದಕ್ಕೂ ಮೊದಲು ಕಳೆದ ವರ್ಷ ಕೂಡ ರಶೀದ್ ಖಾನ್ ಬಿಬಿಎಲ್‌ ಆಡಿರಲಿಲ್ಲ. ಏಕೆಂದರೆ ಈ ವೇಳೆ ಅವರು ಬೆನ್ನಿನ ಶಸ್ತ್ರಚಿಕಿತ್ಸೆಗೊಳಾಗಿದ್ದರು. ಆದರೆ ಈ ಬಾರಿ ಯಾವ ಕಾರಣಕ್ಕೆ ಬಿಬಿಎಲ್‌ನಿಂದ ದೂರ ಸರಿದಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಅಡಿಲೇಡ್ ಸ್ಟ್ರೈಕರ್ಸ್‌ ಪರ ರಶೀದ್ ಖಾನ್ ಅಮೋಘ ಪ್ರದರ್ಶನ ನೀಡಿದ್ದಾರೆ. ಆಡಿರುವ 69 ಪಂದ್ಯಗಳಲ್ಲಿ 98 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಕಳೆದ ವರ್ಷ 2023ರಲ್ಲಿ ಮಾರ್ಚ್‌ ತಿಂಗಳಲ್ಲಿ ಯುಎಇಯಲ್ಲಿ ನಡೆಬೇಕಿದ್ದ ಆಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಆಸ್ಟ್ರೇಲಿಯಾ ಹಿಂದೆ ಸರಿದಿತ್ತು. ಈ ಬಗ್ಗೆ ತನ್ನ ನಿರ್ಧಾರವನ್ನು ಆಸ್ಟ್ರೇಲಿಯಾ ಕ್ರಿಕೆಟ್‌ ಬೋರ್ಡ್ ಜನವರಿ 12 ರಂದು ತಿಳಿಸಿತ್ತು. ಇದಕ್ಕೆ ಮುಖ್ಯ ಕಾರಣವೊಂದಿತ್ತು.

ಆಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಶಿಕ್ಷಣ ಮತ್ತು ಉದ್ಯೋಗದ ಮೇಲಿನ ಮತ್ತಷ್ಟು ನಿರ್ಬಂದಗಳನ್ನು ಅಲ್ಲಿನ ಆಡಳಿರೂಢ ತಾಲಿಬಾನ್ ಸರ್ಕಾರ ಹೇರಿತ್ತು. ಹೀಗಾಗಿ ಆಸ್ಟ್ರೇಲಿಯಾ ತಂಡವು ಆಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿಯನ್ನು ಆಡದಿರಲು ನಿರ್ಧಾರಿಸಿತ್ತು.

ಇದಾದ ನಂತರ ರಶೀದ್ ಖಾನ್ ಕೂಡ ಬಿಬಿಎಲ್‌ ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದರು. ಈಗ ಇದೇ ಕಾರಣಕ್ಕಾಗಿ ರಶೀದ್ ಖಾನ್ ಬಿಬಿಎಲ್ ಟೂರ್ನಿಯನ್ನು ಆಡುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮುಂದಿನ ಋತುವಿನಲ್ಲಿ ರಶೀದ್ ಲಭ್ಯವಿದ್ದರೆ ಫ್ರಾಂಚೈಸ್ ಅವನನ್ನು ಸ್ವಾಗತಿಸುತ್ತದೆ. ಉಭಯ ದೇಶಗಳ ನಡುವೆ ಯಾವುದೇ ದ್ವೇಷವಿಲ್ಲ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಿಳಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿದೆ.

Story first published: Monday, August 19, 2024, 16:45 [IST]
Other articles published on Aug 19, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+